ಬಾಗಲಕೋಟೆ, (ಮಾ.10): ಗೋಡ್ಸೆ ಪರ ಮಾತನಾಡಿರುವ ಭೋಪಾಲ್ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಬೆಂಬಲಕ್ಕೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನಿಂತಿದ್ದಾರೆ.
ಕಲಾದಗಿಯಲ್ಲಿ ಮಾತನಾಡಿದ ಅವರು, ಗಾಂಧಿ ಕೊಂದ ಗೋಡ್ಸೆ ರಾಷ್ಟ್ರಭಕ್ತ ಎಂಬ ಭೋಪಾಲ್ ಸಾಧ್ವಿ ಪ್ರಜ್ಞಾ ಸಿಂಗ್ ಅವರ ಹೇಳಿಕೆಯನ್ನು ಮುತಾಲಿಕ್ ಸಮರ್ಥಿಸಿಕೊಂಡಿದ್ದಾರೆ. ಪ್ರಜ್ಞಾ ಸಿಂಗ್ ಅವರಿಗೆ ಟಿಕೆಟ್ ಕೊಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗೋಡ್ಸೆ ಒಬ್ಬ ದೇಶಭಕ್ತ ಅಂತ ಸಾಧ್ವಿ ಹೇಳಿದ್ದು ದೊಡ್ಡ ಅಪರಾಧವೇ? ಎಂದು ಪ್ರಶ್ನಿಸಿದ ಅವರು, ಗೋಡ್ಸೆ ದೇಶಭಕ್ತನೇ ಆಗಿದ್ದನು. ಗುಂಡು ಹಾಕಿದ್ದು ತಪ್ಪು ಇರಬಹುದು. ಆದರೆ ದೇಶದ್ರೋಹಿಯಲ್ಲ, ಸುಫಾರಿ ಕಿಲ್ಲರ್ ಅಲ್ಲ. ಆಸ್ತಿಗೋಸ್ಕರ ಕೊಲೆಮಾಡಲಿಲ್ಲ. ದೇಶಕ್ಕಾಗಿ ಕೊಂದ ಎಂದರು.
ಸಾದ್ವಿ ಪ್ರಜ್ಞಾಸಿಂಗ್ ಠಾಕೂರ್ ಹಿಂದುತ್ವಕ್ಕಾಗಿ ಒಂಬತ್ತು ವರ್ಷ ಜೈಲಲ್ಲಿ ಕಳೆದವರು. ಅವರಿಗೆ ಟಿಕೆಟ್ ನೀಡಿ ತಪ್ಪು ಸರಿ ಮಾಡಿಕೊಳ್ಳಬೇಕ ಎಂದು ಬಿಜೆಪಿ ನಾಯಕರಿಗೆ ಮುತಾಲಿಕ್ ಸಲಹೆ ನೀಡಿದರು.
ತಾವು ಚುನಾವಣೆ ರಾಜಕೀಯ ಕ್ಲೋಸ್ ಮಾಡಿದ್ದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಅಲ್ಲದೆ, ಹಿಂದುತ್ವದೊಂದಿಗೆ ಅಭಿವೃದ್ಧಿ ಮಾಡಿದ ಪ್ರತಾಪ್ ಸಿಂಹಗೂ ಟಿಕೆಟ್ ತಪ್ಪಬಾರದು ಎಂದು ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….