ದೊಡ್ಡಬಳ್ಳಾಪುರ, (ಮಾ.23); ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಆರಂಭವಾಗಿ 23 ವರ್ಷ ಕಳೆದಿದ್ದು, ಇಷ್ಟು ವರ್ಷಗಳ ನಂತರ ರಾಷ್ಟ್ರದ ಅತ್ಯುನ್ನತ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ-ನ್ಯಾಕ್ “ಎ” ಶ್ರೇಣಿ ದೊರೆತಿದೆ ಶ್ರೀ ದೇವರಾಜ್ ಅರಸ್ ಟ್ರಸ್ಟ್ ಉಪಾಧ್ಯಕ್ಷ ಜೆ.ರಾಜೇಂದ್ರ ತಿಳಿಸಿದರು.
ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಳೆದ ವಾರ ಮೂರು ಮಂದಿಯ ತಂಡ ಕಾಲೇಜಿಗೆ ಭೇಟಿ ನೀಡಿದ್ದ ತಜ್ಞರ ಸಮಿತಿ ವಿವಿಧ ಹಂತಗಳಲ್ಲಿ ಸಮಗ್ರ ಪರಿಶೀಲನೆ ನಡೆಸಿತ್ತು. ಈ ಪರಿಶೀಲನೆಯಲ್ಲಿ 04 ಅಂಕಗಳಿಗೆ 3.24 ಸಿಜಿಪಿಎ ಅಂಕಗಳೊಂದಿಗೆ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯಕ್ಕೆ A ಶ್ರೇಣಿ ನೀಡಲಾಗಿದ್ದು, ಇದು ಮುಂದಿನ 5 ವರ್ಷಗಳವರೆಗೆ ಈ ಮೌಲ್ಯಾಂಕನ ಚಾಲ್ತಿಯಲ್ಲಿರುತ್ತದೆ.
ಶಿಕ್ಷಣ ಸಂಸ್ಥೆಗಳು ಸಮಾಜಮುಖಿಯಾಗಿರಬೇಕು ಎಂಬುದು ನಮ್ಮ ತಂದೆಯಾದ ಜಾಲಪ್ಪನವರ ಆಶಯವಾಗಿದೆ. ಅದರಂತೆ ಸ್ಥಳೀಯವಾಗಿರುವ ಇತರೆ ಕಾಲೇಜುಗಳ ಸರ್ಕಾರದ ಅಧೀನದ ವಿಟಿಯು ಕಾಲೇಜು ಸ್ಥಾಪಿಸಿ, ಈ ಭಾಗದಲ್ಲಿ ಉನ್ನತ ಗುಣ ಮಟ್ಟದ ತಾಂತ್ರಿಕ ವಿದ್ಯಾಭ್ಯಾಸವನ್ನು ನೀಡಿ ಬೆಂಗಳೂರು ಅವಲಂಭಿಸುವುದನ್ನು ತಪ್ಪಿಸುವುದು, ಕಡಿಮೆ ದರದಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವುದಾಗಿದೆ.
ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ 500ಕ್ಕೂ ಹೆಚ್ಚು ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದು, ಸಮಾಜದ ಮುಖ್ಯವಾಹಿನಿಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಿಗೆ ಸ್ಪರ್ಧೆಯೊಡ್ಡುವಂತೆ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯ ಸೌಲಭ್ಯ ನೀಡುತ್ತಿರುವುದು ರಾಷ್ಟ್ರದ ಅತ್ಯುನ್ನತ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ-ನ್ಯಾಕ್ “ಎ” ಶ್ರೇಣಿ ದೊರೆತಿರುವುದು ಸಾಕ್ಷಿಯಾಗಿದೆ.
ಸ್ಥಳೀಯರಲ್ಲಿ ಬೆಂಗಳೂರಿನ ವ್ಯಾಮೋಹ ಬಂದು ಬಿಟ್ಟಿದ್ದು, ಕಾಲೇಜುಗಳಿಗೆ ಪ್ರತಿಷ್ಠಿತ ಎಂಬ ಕಾರಣ ಬೆಂಗಳೂರನ್ನು ಅವಲಂಬಿಸುತ್ತಿದ್ದಾರೆ. ಅಲ್ಲಿ ತುಂಬಿದ ನಂತರ ಇಲ್ಲಿಗೆ ಬರ್ತಾರೆ. ಆದರೆ ಇಲ್ಲಿನ ಸೌಲಭ್ಯ ಬೆಂಗಳೂರಿನ ಪ್ರತಿಷ್ಠಿತ ಎಂದು ಕರೆಯಲ್ಪಡುವ ಕಾಲೇಜುಗಳಿಗೂ ಉತ್ತಮ ಸೌಲಭ್ಯದಿಂದ ಕೂಡಿರುವುದನ್ನು ವಿದ್ಯಾರ್ಥಿಗಳು, ಪೋಷಕರು ಮನಗಾಣಬೇಕಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಂಜಿನಿಯರಿಂಗ್ ಮತ್ತು ಪದವಿ ಕಾಲೇಜಿನಲ್ಲಿ ಎಂ.ಬಿ.ಎ ಕೋರ್ಸ್ ಆರಂಭಿಸಲಾಗುತ್ತಿದ್ದು ಮುಂದಿನ ವರ್ಷದಿಂದ ಎಂ.ಟೆಕ್ ಪದವಿ ಆರಂಭಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಆರ್ ಜೆ ಐಟಿ ಪ್ರಾಂಶುಪಾಲರಾದ ಡಾ.ಕೆ.ವಿಜಯ್ ಕಾರ್ತಿಕ್ ಮಾತನಾಡಿ, ಸತತ ಐದು ವರ್ಷಗಳ ಪರಿಶ್ರಮದ ಕಾರಣ ಈ ರಾಷ್ಟ್ರ ಮಟ್ಟದ ಗೌರವ ನಮ್ಮ ಕಾಲೇಜಿಗೆ ದೊರೆತಿದೆ. ಗುಣಮಟ್ಟದ ಶಿಕ್ಷಣ, ಸೌಲಭ್ಯ ನೀಡುವುದರ ಜೊತೆಗೆ ಸಿಬ್ಬಂದಿಗಳಾದ ನಮ್ಮ ಜವಾಬ್ದಾರಿಯನ್ನು ಅರಿತು, ಆಡಳಿತ ಮಂಡಳಿಯ ಸಹಕಾರದೊಂದಿಗೆ ಈ ಸಾಧನೆ ಸಾಧ್ಯವಾಗಿದೆ ಎಂದರು.
ಮಾನವ ಸಂಪನ್ಮೂಲ ಅಧಿಕಾರಿ ಪ್ರೊ.ಎನ್.ಎಸ್.ಬಾಬು ರೆಡ್ಡಿ ಮಾತನಾಡಿ, ಕಾಲೇಜಿನ ವಾತಾವರಣ, ಸೌಲಭ್ಯ, ಶಿಕ್ಷಣ ಸೇರಿದಂತೆ ಸಿಬ್ಬಂದಿಗಳಿಗೆ ಸೌಲಭ್ಯ, ಅವರ ಸೇವಾ ಅವಧಿ, ವಿದ್ಯಾರ್ಥಿಗಳು, ಪೋಷಕರ ಸಭೆ, ಕಂಪನಿಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ದೊರೆತಿರುವ ಉದ್ಯೋಗಗಳನ್ನು ಪರಿಗಣಿಸಿದ್ದಾರೆ.
ಇಲ್ಲಿಗೆ ದಾಖಲಾಗುವ ವಿದ್ಯಾರ್ಥಿ, ಕಾಲೇಜಿನಿಂದ ಹೊರಹೋಗುವ ವೇಳೆಗೆ ಉದ್ಯೋಗ ಪಡೆದು ತೆರಳಬೇಕು ಎಂಬುದು ಆಡಳಿತ ಮಂಡಳಿಯ ಉದ್ದೇಶವಾಗಿದೆ.
ಮೊದಲ ಬಾರಿಗೆ ನಮ್ಮ ಕಾಲೇಜಿಗೆ ಗುಣಮಟ್ಟದ ಆಧಾರದ ಮೇಲೆ ಮೊದಲ ಪರಿಶೀಲನೆಯಲ್ಲಿಯೇ A ಗ್ರೇಡ್ ದೊರೆತಿರುವುದು ಪ್ರಶಂಸನೀಯ. ಏಕೆಂದರೆ ಪರಿಶೀಲನೆ ವೇಳೆ ಮೊದಲ ಬಾರಿಗೆ ಬಿ, ಸಿ ಗ್ರೇಡ್ ಸಿಗುತ್ತೆ ಎಂದರು.
ಎಇಇ ಐ.ಎಂ.ರಮೇಶ್ ಕುಮಾರ್ ಮಾತನಾಡಿ, ಇಲ್ಲಿ ಮಾಡುತ್ತಿರುವ ಸಿಬ್ಬಂದಿಗಳ ಮಕ್ಕಳಿಗೆ ರಿಯಾಯಿತಿ ದರದಲ್ಲಿ ಶಿಕ್ಷಣ, ವಾಹನ ನಿಲ್ದಾಣ, ಸೋಲಾರ್, ನಾಲ್ಕು ರೀತಿಯ ಮಳೆ ನೀರು ಸಂಗ್ರಹ, ಶುದ್ಧ ನೀರಿನ ಘಟಕ, ಸ್ವಿಮ್ಮಿಂಗ್ ಪೂಲ್, 400 ಮೀಟರ್ ಸ್ಟಾ.ಡರ್ಡ್ ಟ್ರಾಕ್ ಉಳ್ಳ ಬೃಹತ್ ಕ್ರೀಡಾಂಗಣ, ಬಯೋ ಗ್ಯಾಸ್, ಎರೆಹುಳು, ಗ್ರೀನ್ ಹೌಸ್ ಸ್ಥಾಪನೆ ಮಾಡಲಾಗಿದೆ ಎಂದರು.
ಉಪಪ್ರಾಂಶುಪಾಲ ಡಾ.ಶಿವಪ್ರಸಾದ್, ಪದವಿ ಕಾಲೇಜು ಪ್ರಾಧ್ಯಾಪಕ ಕೆ.ಆರ್.ರವಿಕಿರಣ್, ನ್ಯಾಕ್ ಸಂಯೋಜಕರು, ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….