ದೊಡ್ಡಬಳ್ಳಾಪುರ, (ಮಾ.23); ನಗರದ ವಿಶಿಷ್ಟ ಪ್ರಭೇದದ ಲಂಗೂರ್ ಕೋತಿ ಪ್ರತ್ಯಕ್ಷವಾಗಿದ್ದು, ನಗರ ವಾಸಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ.
ತಾಲೂಕು ಕಚೇರಿ, ಕಾಳಮ್ಮ ದೇವಾಲಯದ ರಸ್ತೆಯಲ್ಲಿ ಲಂಗೂರು ಕೋತಿ ಓಡಾಟ ನಡೆಸುತ್ತಿದ್ದು, ಸಾರ್ವಜನಿಕರು ಅಚ್ಚರಿಯ ನೋಟಕ್ಕೆ ಕಾರಣವಾಗಿದೆ.
ಪ್ರತಿ ದಿನವೂ ಮಾಮೂಲಿ ಕೋತಿಯನ್ನು ನೋಡುತ್ತಿದ್ದ ಜನ ವಿಚಿತ್ರ ಕೋತಿಯನ್ನು ನೋಡಿ ವಿಡಿಯೋ, ಫೋಟೋ ತೆಗೆದುಕೊಳ್ಳಲು ಮುಂದಾಗಿದ್ದಾರೆ.
ಬಯಲು ಸೀಮೆಯಲ್ಲಿ ಕರಿಮೂತಿಯ ಲಂಗೂರ್ ಮಂಗಗಳು ಕಾಣುವುದಿಲ್ಲ. ಇವುಗಳು ಮಲೆನಾಡು ಭಾಗಗಳ ಕಾಡಿನಲ್ಲಿ ವಾಸಿಸುತ್ತದೆ. ಇವುಗಳನ್ನು ಕರಿಮೂತಿ ಕೋತಿ, ಲಂಗೂರ್, ಕರಿ ಮುಶಿಯ, ಕರಿ ಮುಸ್ಯಾ ಮತ್ತು ಆಂಧ್ರ ಭಾಗದಲ್ಲಿ ಕೊಂಡ ಮುಚ್ಚಿ ಎನ್ನುತ್ತಾರೆ.
ಇಂತಹ ದೊಡ್ಡಬಳ್ಳಾಪುರದಲ್ಲಿ ಕಾಣಿಸಿಕೊಂಡಿದೆ. ಮಂಗವೊಂದು ಭಾನುವಾರ ದೊಡ್ಡಬಳ್ಳಾಪುರ ಜನರಿಗೆ ಇದು ಅಪರೂಪದ ಮಂಗ ಎನಿಸಿದೆ. ಇದ್ಯಾವುದು ಹೊಸ ಮಂಗ ಎಂದು ಜನರು ಸಹ ದೃಷ್ಟಿ ಹರಿಸಿದರು.
ಇತರೆ ಮಂಗಗಳು ಅದರ ಗುಂಪಿನೊಳಗೆ ಸೇರಿಸಿಕೊಳ್ಳದ ಕಾರಣ ಒಂದೇ ಒಂದು ಮಂಗವು ಮರ ಆಟೊ ಮತ್ತು ಮನೆಗಳ ಮೇಲೆ ಜಿಗಿಯುತ್ತಿದೆ. ಇದಕ್ಕೆ ಸಾರ್ವಜನಿಕರು ಹಣ್ಣು. ಬಿಸ್ಕೆಟ್ ಇನ್ನಿತರೆ ಆಹಾರಗಳನ್ನು ನೀಡುತ್ತಿದ್ದಾರೆ.
ಇದೇ ಕೆಲ ದಿನಗಳ ಹಿಂದೆ ಗೌರಿಬಿದನೂರಿನಲ್ಲಿ ಕೂಡ ಲಂಗೂರ್ ಕೋತಿ ಕಂಡು ಅಚ್ಚರಿ ಸೃಷ್ಟಿಸಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….