ಚಿಕ್ಕಬಳ್ಳಾಪುರ, (ಮೇ.10): ನಗರ ಹೊರವಲಯದ ಅಗಲಗುರ್ಕಿಯ ಬಿಜಿಎಸ್ ಆಂಗ್ಲ ಪ್ರೌಢಶಾಲೆಗೆ 2024ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ 100 ರಷ್ಟು ಫಲಿತಾಂಶ ಬಂದಿದೆ.
ಪರೀಕ್ಷೆಗೆ ಹಾಜರಾದ 181 ವಿದ್ಯಾರ್ಥಿ ಗಳಲ್ಲಿ 78 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ (ಎ+), 74ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ (ಎ) ಮತ್ತು 29 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ (ಬಿ+) ಉತ್ತೀರ್ಣರಾಗಿದ್ದಾರೆ.
ಟಿ.ಎಂ.ವಾಸವಿ ಎಂಬ ವಿದ್ಯಾರ್ಥಿನಿಯು 625ಕ್ಕೆ 620 ಅಂಕಗಳನ್ನು ಪಡೆಯುವುದರ ಮೂಲಕ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ.
ಪ್ರಥಮ ಭಾಷೆ ಕನ್ನಡ ವಿಷಯದಲ್ಲಿ 10 ವಿದ್ಯಾರ್ಥಿಗಳು 125 ಕ್ಕೆ 125 ಅಂಕಗಳನ್ನು ಪಡೆದಿರುತ್ತಾರೆ, ಇಂಗ್ಲೀಷ್ ಭಾಷೆಯಲ್ಲಿ 11 ವಿದ್ಯಾರ್ಥಿಗಳು 100ಕ್ಕೆ 100 ಹಿಂದಿ ವಿಷಯದಲ್ಲಿ 39 ವಿದ್ಯಾರ್ಥಿಗಳು 100ಕ್ಕೆ 100, ಸಮಾಜ ವಿಜ್ಞಾನದಲ್ಲಿ 4 ವಿದ್ಯಾರ್ಥಿ ಗಳು 100ಕ್ಕೆ 100 ಡಿ ಹಾಗೆಯೇ ಬಾಗೇಪಲ್ಲಿ ಪಟ್ಟಣದ ಬಿ.ಜಿ.ಎಸ್ ಶಾಲೆಯ ಎಸ್. ಎನ್.ಮೋನಿಷ್ ಸಾಯಿ 623 ಅಂಕಗಳನ್ನು ಪಡೆದು ರಾಜ್ಯಕ್ಕೆ 3ನೇ ಸ್ಥಾನ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾರೆ.
ಎಸ್.ಎನ್.ಮೋನಿಷ್ ಸಾಯಿ ಮತ್ತು ಶಾಲೆಗೆ ಉತ್ತಮ ಫಲಿತಾಂಶವನ್ನು ತಂದುಕೊಟ್ಟಂತಹ ಎಲ್ಲ ವಿದ್ಯಾರ್ಥಿಗಳನ್ನು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿನಂಧಿಸಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….