ನವದೆಹಲಿ, (ಮೇ.11); ಮಧ್ಯಂತರ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಭರ್ಜರಿ ಆಕ್ಟಿವ್ ಆಗಿದ್ದು, ಅವರ ಪ್ರಶ್ನೆಗಳಿಗೆ ಬಿಜೆಪಿ ಒಳಗೆ ತಳಮಳವನ್ನು ಉಂಟು ಮಾಡಿದೆ.
ದೆಹಲಿಯಲ್ಲಿ ಹನುಮ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಂದಿನ ಪ್ರಧಾನಿ ಅಮಿತ್ ಶಾ ಎಂದು ಭವಿಷ್ಯ ನುಡಿದು ಬಿಜೆಪಿಯಲ್ಲಿದ್ದ ಬಾಂಬ್ ಸ್ಪೋಟಿಸಿದ್ದಾರೆ.
ಬಿಜೆಪಿಯ ಉದ್ದೇಶ ಒಂದು ರಾಷ್ಟ್ರ ಒಬ್ಬ ನಾಯಕ ವ್ಯವಸ್ಥೆಯನ್ನು ತರುವುದು. ಹೀಗಾಗಿಯೇ ವಿಪಕ್ಷಗಳ ನಾಯಕರನ್ನು ಟಾರ್ಗೆಟ್ ಮಾಡಿ ಜೈಲಿಗೆ ಕಳುಹಿಸಲಾಗುತ್ತಿದೆ.
ನನ್ನನ್ನು ಜೈಲಿಗೆ ಕಳುಹಿಸಿ ಪ್ರಧಾನಿ ಮೋದಿ ಯಾವುದೇ ಅಪರಾಧವಿಲ್ಲದಿದ್ದರೂ ತಾನು ಯಾರನ್ನು ಬೇಕಾದರೂ ಜೈಲಿಗೆ ಕಳುಹಿಸುವ ತಾಕತ್ತು ಹೊಂದಿದ್ದೇನೆ ಎಂದು ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಮುಂದೆ ಮಮತಾ ಬ್ಯಾನರ್ಜಿ, ಪಿಣರಾಯಿ ವಿಜಯನ್, ಉದ್ಧವ್ ಠಾಕ್ರೆ ಎಲ್ಲರೂ ಮೋದಿ ಲಿಸ್ಟ್‌ನಲ್ಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.
ಮುಂದಿನ ಪ್ರಧಾನಿ ಅಮಿತ್ ಶಾ!; ವಿಪಕ್ಷಗಳ ನಾಯಕರನ್ನು ಮಾತ್ರವಲ್ಲ ತನ್ನದೇ ಪಕ್ಷದ ನಾಯಕರನ್ನೂ ತುಳಿಯುತ್ತಿದೆ. ಬಿಜೆಪಿ ಸರ್ಕಾರ ಅಡ್ವಾಣಿ, ಸುಮಿತ್ರಾ ಮಹಾಜನ್, ಶಿವರಾಜ್ ಸಿಂಗ್ ಚೌಹಾಣ್, ಮುರಳಿ ಮನೋಹರ್ ಜೋಶಿ ಹೀಗೆ ಅನೇಕರ ರಾಜಕೀಯ ಭವಿಷ್ಯವನ್ನು ಹಾಳು ಮಾಡಿದೆ.
ಅವರ ಮುಂದಿನ ಟಾರ್ಗೆಟ್ ಯೋಗಿ ಆದಿತ್ಯನಾಥ್. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಎರಡು ತಿಂಗಳ ಒಳಗೆ ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ, ಮೋದಿ ಗೆಳೆಯ ಅಮಿತ್ ಶಾ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದು ಬಿಜೆಪಿಯಲ್ಲಿ ಚರ್ಚೆಯನ್ನು ಉಂಟು ಮಾಡಿದ್ದಾರೆ.
ಪ್ರಧಾನಿ ಮೋದಿ ಅವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಹೇಗೆ ನಡೆಸಬೇಕು ಎಂಬುದನ್ನು ನನ್ನಿಂದ ಕಲಿಯಿರಿ ಎಂದ ಕೇಜ್ರಿವಾಲ್, ನನ್ನದೇ ಪಕ್ಷದ ಒಬ್ಬ ಮಂತ್ರಿ ಲಂಚ ಪಡೆದಿದ್ದಾರೆ ಎಂದು ಮಾಹಿತಿ ಬಂದ ತಕ್ಷಣ ಆತನನ್ನು ಸಿಬಿಐಗೆ ಒಪ್ಪಿಸಿ ಜೈಲಿಗೆ ಕಳುಹಿಸಿದ್ದೆ. ಪಂಜಾಬ್‌ನಲ್ಲಿ ಒಬ್ಬ ಭ್ರಷ್ಟಾಚಾರ ನಡೆಸಿದ ಮಾಹಿತಿ ಬಂತು ಅಲ್ಲಿನ ಸಿಎಂ ತಕ್ಷಣ ಆತನನ್ನ ಜೈಲಿಗೆ ಕಳುಹಿಸಿದ್ದರು. ಹೋರಾಟ ಹೇಗೆ ನಡೆಸಬೇಕು ಎಂದು ಕಲಿಯಿರಿ. ಪ್ರಧಾನಿ ಮೋದಿ ಎಲ್ಲಾ ಕಳ್ಳರನ್ನು ಪಕ್ಷಕ್ಕೆ ಸೇರಿಸಿಕೊಂಡು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇನೆ ಅಂತಾರೆ ಎಂದು ಲೇವಡಿ ಮಾಡಿದರು.
ಪ್ರಧಾನಿ ಮೋದಿ 10 ವರ್ಷ ಹಳೆಯ ಸಣ್ಣ ಪಕ್ಷವನ್ನು ನಾಶ ಮಾಡಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ನನ್ನನ್ನು ಸೇರಿಸಿ 4 ಮುಖಂಡರನ್ನು ಜೈಲಿಗೆ ಕಳಿಹಿಸಿ ಆಗಿದೆ ಈ ಮೂಲಕ ಪಕ್ಷ ಮುಗಿದು ಹೋಗುತ್ತೇ ಎಂದು ಪ್ರಧಾನಿ ಎನಿಸಿದ್ದರು ಆದರೆ ಆಮ್ ಆದ್ಮಿ ಒಂದು ಪಕ್ಷವಲ್ಲ ಯೋಚನೆ, ಕೆಣಕಿದಷ್ಟು ದೊಡ್ಡದಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….