ದೊಡ್ಡಬಳ್ಳಾಪುರ, (ಮೇ.11); ನಗರದ ಚಿಕ್ಕಪೇಟೆಯ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಮೇ.23ರಂದು ಶ್ರೀ ಧರ್ಮರಾಯಸ್ವಾಮಿ ಆದಿಶಕ್ತ್ಯಾತ್ಮಕ ದ್ರೌಪದಾದೇವಿ ಕರಗ ಮಹೋತ್ಸವ ನಡೆಯಲಿದ್ದು, ಕರಗದ ಪೂಜಾದಿಗಳು ವಿದ್ಯುಕ್ತವಾಗಿ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ.
ಕರಗ ಮಹೋತ್ಸವದ ಅಂಗವಾಗಿ ಮೇ.15 ರಿಂದ ಮೇ.28 ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ.
ಮೇ.15 ರಂದು ಬೆಳಗ್ಗೆ 06ಕ್ಕೆ ಅಭಿಷೇಕ, ಅಲಂಕಾರ, ಸಂಜೆ 07 ಕ್ಕೆ ಗೋ ಪೂಜೆ, ಗಣಹೋಮ, ನವಗ್ರಹ ಹೋಮ, ವಾಸ್ತು ಹೋಮ, ಶಾಂತಿ ಹೋಮ, ರಾತ್ರಿ 10.45ರಿಂದ 11.45ರ ಒಳಗೆ ಧ್ವಜಾರೋಹಣ, ವಾಸ್ತುಬಲಿ, ಪೂರ್ಣಾಹುತಿ, ಮಹಾ ಮಂಗಳಾರತಿ.
ಮೇ.16 ರಂದು ಚಿಕ್ಕಪೇಟೆಯ ಚಿಕ್ಕಪೇಟೆಯ ಶ್ರೀ ಗಗನಾರ್ಯ ಸ್ವಾಮಿ ಮಠದಲ್ಲಿ ದೇವತಾ ಪೂಜೆ.
ಮೇ.17ರಂದು ನಾಗರಕೆರೆಯ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ. ನಂತರ ಸಂಜೆ 7-00 ಘಂಟೆಗೆ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ, ಸುಮಂಗಲಿ ಪೂಜೆ. ಕನ್ಯಾ ಪೂಜೆ
ಮೇ.18ರಂದು ರಾಮಣ್ಣಬಾವಿ ಶ್ರೀ ಅಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ,
ಮೇ.19ರಂದು ಬೆಳಿಗ್ಗೆ 6-00 ಗಂಟೆಗೆ ಅಭಿಷೇಕ, ಅಲಂಕಾರ ಸಂಜೆ ಬೆಸ್ತರಪೇಟೆ ಶ್ರೀ ಗಂಗಮ್ಮ ದೇವಸ್ಥಾನದಲ್ಲಿ ಪೂಜೆ ರಾತ್ರಿ 6-00 ಗಂಟೆಗೆ ಪ್ರತ್ಯಂಗಿರಾ ಹೋಮ
ಮೇ.20ರಂದು ಶಿವಪುರ ಗೇಟ್ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ. ರಾತ್ರಿ 7-00 ಗಂಟೆಗೆ ಶ್ರೀ ಬ್ರೌಪದಾದೇವಿ ಅಮ್ಮನವರಿಗೆ ಆರತಿಗಳು
ಮೇ.21ರಂದು ಬೆಳಿಗ್ಗೆ ಅಭಿಷೇಕ, ಅಲಂಕಾರ ಮಧ್ಯಾಹ್ನ 3-00 ಗಂಟೆಗೆ ಅರ್ಕಾವತಿ ಶ್ರೀರಾಮರ ದೇವಸ್ಥಾನದಲ್ಲಿ ಪೂಜೆ ಶ್ರೀ ಗಗನಾರ್ಯಸ್ವಾಮಿ ದೇವಸ್ಥಾನದಿಂದ ಬೆಳಗಿನ ಜಾವ 4-30 ರಿಂದ 5-30 ಯೊಳಗೆ ಅಮ್ಮನವರ ಹಸಿಕರಗ ಶಕ್ತೋತ್ಸವ
ಮೇ.22 ರಂದು ನೆಲದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನಂತರ ರಾತ್ರಿ 7-30ಕ್ಕೆ ಸಾಯಂಕಾಲ ವೀರಕುಮಾರರಿಂದ ಅಮ್ಮನವರಿಗೆ ಪೊಂಗಲಸೇವೆ
ಮೇ.23 ರಂದು ಬೆಳಿಗ್ಗೆ 6-00 ಗಂಟೆಗೆ ಅಮ್ಮನವರಿಗೆ ಅಭಿಷೇಕ, ಅಲಂಕಾರ ಮತ್ತು ಮಹಾ ಮಂಗಳಾರತಿ, ಬೆಳಿಗ್ಗೆ 8-00 ರಿಂದ ನಗರ ದೇವತೆ ಶ್ರೀ ಮುತ್ಯಾಲಮ್ಮ ದೇವಾಲಯದಲ್ಲಿ ಪೂಜಾದಿಗಳು, ಬೆಳಿಗ್ಗೆ 9-00 ರಿಂದ 11-00 ಗಂಟೆಯೊಳಗೆ ಗಣಹೋಮ, ನವಗ್ರಹ ಹೋಮ, ಚಂಡಿಕಾ ಹೋಮ, ಪೂರ್ಣಾಹುತಿ, ಬೆಳಿಗ್ಗೆ 11-00 ಗಂಟೆಗೆ ಬಳೆ ಶಾಸ್ತ್ರ, ಮದ್ಯಾಹ್ನ 12-30 ರಿಂದ 1-30 ಗಂಟೆಯೊಳಗೆ ಅಮ್ಮನವರಿಗೆ ಕಲ್ಯಾಣೋತ್ಸವ.
ಕರಗದ ಪೂಜಾರು ವೈ. ಭೀಮರಾಜ್ ಉಪ್ಪಾರಳ್ಳಿ, ಹೊಸಕೋಟೆ ರವರಿಂದ ರಾತ್ರಿ 11-45 ರಿಂಗ 12-10 ಘಂಟೆಯೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಶ್ರೀ ದ್ರೌಪದಾದೇವಿ ಅಮ್ಮನವರ ಕರಗ ಶಕ್ತೋತ್ಸವ.
ಊರಿನ ಪ್ರಮುಖ ಬೀದಿಗಳಲ್ಲಿ ಮಾಜಿ ಕರಗದ ಪೂಜಾರಿ ಎನ್. ವೆಂಕಟೇಶ್ ಮತ್ತು ಹೆಚ್. ಸಂಪತ್ ಕುಮಾರ್ ಹಾಗೂ ಗೌಡರು. ಯಜಮಾನರು ಮತ್ತು ಕುಲಬಾಂಧವರಿಂದ ವಿಜೃಂಭಣೆಯಿಂದ ನೆರವೇರಿಸಲಾಗುತ್ತಿದೆ.
ಮೇ.24ರಂದು ದೇವತ ಪೂಜಾ ಕಾರ್ಯ.
ಮೇ.25ರಂದು ಶನಿವಾರ ಬೆಳಿಗ್ಗೆ 9-00 ರಿಂದ ರಾಜಘಟ್ಟ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ. ಪ್ರಸಾದ ಸೇವೆ. ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ರಾತ್ರಿ 8-00ಕ್ಕೆ ಮಹಾಭಾರತದ ಪಠಣ, ನಂತರ ಗಾವು ಹಿಡಿಯುವುದು, ಗಾವ್ ಪೂಜಾರರು ಶ್ರೀ ಪೋತರಾಜ ಶ್ರೀನಿವಾಸ್, ಪುರ. ಭಾರತಪೂಜಾರರು ನವೀನ್, ರಾಜ್ ಕಲ್ಲಹಳ್ಳಿ, ಸಂಜೆ 5-00ಕ್ಕೆ ವಸಂತೋತ್ಸವ ಹಾಗೂ ಧ್ವಜಾರೋಹಣ
ಮೇ.26 ಮತ್ತು 27 ರಂದು ದೇವತಾ ಪೂಜಾದಿಗಳು ಮತ್ತು ಮೇ. 28 ರಂದು ಮಂಗಳವಾರ ಮದ್ಯಾಹ್ನ 2-00 ರಿಂದ ಅಮ್ಮನವರಿಗೆ ಆರತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
(ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….