ದೊಡ್ಡಬಳ್ಳಾಪುರ, (ಮೇ.11); ಲೈಂಗಿಕ ಕಿರುಕುಳ ಹಗರಣದ ಆರೋಪಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸುವುದು ಸೇರಿದಂತೆ ಪ್ರಕರಣದಲ್ಲಿ ಭಾಗಿಯಾಗುವವರಿಗೆ ಕಠಿಣ ಶಿಕ್ಷೆಯಾಗಬೇಕು. ಈ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪವಾಗದೇ ಸಂತ್ರಸ್ಥರಿಗೆ ನ್ಯಾಯ ದೊರೆಯಬೇಕು. ಈ ದಿಸೆಯಲ್ಲಿ ಅಬಲೆಯರನ್ನು ರಕ್ಷಿಸಿ, ಅತ್ಯಾಚಾರಿಗಳಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆ.ಆರ್.ಎಸ್)ದ ವತಿಯಿಂದ ಮೇ.13ರಂದು ಹಾಸನ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಬಿ.ಶಿವಶಂಕರ್ ತಿಳಿಸಿದ್ದಾರೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮಹಿಳೆಯರ ಮರ್ಯಾದೆ ಪ್ರಶ್ನೆ ಇದೆ. ಆದರೆ ಈ ವಿಚಾರದಲ್ಲಿ ಅನಗತ್ಯ ಪ್ರಚಾರ, ರಾಜಕೀಯ ಉದ್ದೇಶಗಳಿಂದಾಗಿ ಪ್ರಕರಣದ ತನಿಖೆ ದಿಕ್ಕು ತಪ್ಪಿದಂತಾಗುತ್ತಿದೆ.
ಒಬ್ಬ ರಾಜಕೀಯ ಮುಖಂಡರಿಗೆ ಬೆಂಬಲ ಸಿಕ್ಕಿದರೆ ಅವರು ನಡೆದುಕೊಳ್ಳುವ ರೀತಿಯೇ ಬೇರೆ ಹಾಗೂ ಒಂದೇ ಕುಟುಂಬದಲ್ಲಿ ಅಧಿಕಾರ ಕೇಂದ್ರಿಕೃತವಾದಾಗ ಇಂತಹ ಘಟನೆಗೆ ಪ್ರಚೋದನೆ ಸಿಗುತ್ತದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.
ಮೊದಲು ಆರೋಪಿಯನ್ನು ಬಂಧಿಸಿ: ಪೆನ್ ಡ್ರೈವ್ ಹಂಚಿದವರು ಸಹ ಕಾನೂನು ಪ್ರಕಾರ ತಪ್ಪಿತಸ್ಥರೇ ಆಗಿದ್ದು, ಮೊದಲು ಪ್ರಕರಣಕ್ಕೆ ಕಾರಣದಾದ ಕೃತ್ಯದಲ್ಲಿ ತೊಡಗಿಸಿಕೊಂಡವರನ್ನು ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರಜ್ವಲ್ ರೇವಣ್ಣ ಬಂಧನಕ್ಕೆ ಆಗ್ರಹಿಸಿದರು.
ರಾಜ್ಯದಲ್ಲಿ ಸಾಕಷ್ಟು ಪ್ರಕರಣಗಳನ್ನು ನೋಡಲಾಗಿದ್ದರೂ, ರಾಜಕೀಯ ಮುಖಂಡರಿಗೆ ಅಥವಾ ಪ್ರಭಾವಿಗಳಿಗೆ ಯಾವುದೇ ಪ್ರಕರಣದಲ್ಲಿ ಶಿಕ್ಷೆಯಾಗಿಲ್ಲ.. ಅದೇ ಸಾಮಾನ್ಯರಿಗೆ ಮಾತ್ರ ದೊಡ್ಡ ಶಿಕ್ಷೆಯಾಗುತ್ತದೆ ಎಂಬುದು ವಿಪರ್ಯಾಸ.
ಒಬ್ಬ ಜವಾಬ್ದಾರಿ ಸ್ಥಾನದ ಸಂಸದ ತಲೆ ಮರೆಸಿಕೊಂಡಿದ್ದಾನೆ ಎಂದರೆ ಕಾರ್ಯಾಂಗ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಅವರ ವಿಚಾರ ತಿಳಿದಿದ್ದರೂ ಬಿಜೆಪಿ ವರಿಷ್ಠರು ಅವರಿಗೆ ಲೋಕಸಭೆ ಚುನಾವಣೆಯ ಟಿಕೆಟ್ ನೀಡಿರುವುದು ಎಷ್ಟು ಸಮಂಜಸ..? ಇದತಲ್ಲಿ ಅವರ ತಪ್ಪು ಹೆಚ್ಚಿದೆ. ಈ ಪ್ರಕರಣ ಹೊರಬರಲಿ ಇದರದ ಜೆಡಿಎಸ್ ಪಕ್ಷದ ಸರ್ವನಾಶ ಇನ್ನೊಂದು ಇವರ ಕುಟುಂಬ ಸರ್ವನಾಶ ಮಾಡುವ ಉದ್ದೇಶ ಅಡಗಿದೆ ಎನ್ನುವ ಅನುಮಾನ ಬಿಜೆಪಿ ವಿರುದ್ಧ ವ್ಯಕ್ತಪಡಿಸಿದರು.
ರಾಜಕಾರಣಿಗಳು ಆರೋಪವನ್ನು ಹೊರೆಸುತ್ತಾ. ಆರೋಪದಿಂದ ತಪ್ಪಿಸುವ ಸಲುವಾಗಿ ಪ್ರಕರಣದ ದಿಕ್ಕು ತಪ್ಪಿಸುತ್ತಿದ್ದಾರೆ. ಆರೋಪಿಯನ್ನು ಬಂಧಿಸುವಲ್ಲಿ ಕೇಂದ್ರ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವುದು ಸೂಕ್ತವಾಗಿದೆ ಎನ್ನುವುದು ನಮ್ಮ ಅಭಿಪ್ರಾಯ. ಇಂತಹ ಯಾವುದೇ ಅನ್ಯಾಯಗಳು ಕಂಡಾಗ ಜನತೆ ಪ್ರತಿಭಟಿಸಿ, ಪ್ರಶ್ನಿಸಬೇಕಿದೆ ಎಂದರು.
ಮೇ 13ರಂದು ಬೆಳಗ್ಗೆ 11ಕ್ಕೆ ಹಾಸನದಲ್ಲಿ ಕೆ.ಆರ್.ಎಸ್ ಪಕ್ಷದ ಇಡೀ ರಾಜ್ಯದ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಸಮಿತಿಯ ಕಾರ್ಯಕರ್ತರು ಭಾಗವಹಿಸಿ, ಬಸ್ ನಿಲ್ದಾಣನಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುತ್ತಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ಕೆ.ಆರ್.ಎಸ್ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಲ್.ಎನ್.ಆನಂದ್, ತಾಲೂಕು ರೈತ ಘಟಕದ ಅಧ್ಯಕ್ಷ ಗೋವಿಂದ ರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಾರುತಿ, ಚಾಲಕರ ಘಟಕದ ಅಧ್ಯಕ್ಷ ವಿಜಯ ಕುಮಾರ್ ಭಾಗವಹಿಸಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….