ಬೆಂಗಳೂರು, (ಜೂ.05): ಮಂಗಳವಾರ ಪ್ರಕಟವಾದ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಕಾಂಗ್ರೆಸ್ ಟೀಕಿಸಿದೆ.
ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ರಾಮನನ್ನು ರಾಜಕೀಯಕ್ಕೆ ಬಳಸಿದ ಬಿಜೆಪಿಗೆ ಅಯೋಧ್ಯೆ ಕ್ಷೇತ್ರದಲ್ಲೇ ಹೀನಾಯವಾಗಿ ಸೋಲಾಗಿದೆ. ಇಡೀ ಉತ್ತರ ಪ್ರದೇಶ ಬಿಜೆಪಿಯನ್ನು ತಿರಸ್ಕರಿಸಿ ಕಸದ ಬುಟ್ಟಿಗೆ ಎಸೆದಿದೆ. ನಾನೇ ದೇವರು ಎನ್ನುತ್ತಿದ್ದ ಮೋದಿಗೆ ಪ್ರಭು ಶ್ರೀರಾಮ ಕೊಟ್ಟಿರುವ ಶಿಕ್ಷೆಯ ಸಂದೇಶವಲ್ಲವೇ ಎಂದು ಬಿಜೆಪಿಯನ್ನು ಪ್ರಶ್ನಿಸಿದೆ.
ಇನ್ನು ಮೋದಿ ಜೈಶ್ರೀರಾಮ್ ಘೋಷಣೆ ಕೈಬಿಟ್ಟು.. ಜೈ ಜಗನ್ನಾಥ್ ಘೋಷಣೆಯ ಮೊರೆ ಹೋಗುವ ಮೂಲಕ ಮೋದಿಯೂ ರಾಮನನ್ನು ಕೈಬಿಟ್ಟರೆ ಎಂದು ಕಾಂಗ್ರೆಸ್ ಕೇಳಿದೆ. ಬಿಜೆಪಿಯ ಭದ್ರಕೋಟೆ ಎನ್ನಲಾಗುವ ಉತ್ತರ ಪ್ರದೇಶದ ರಾಜ್ಯದಲ್ಲಿ 62 ರಿಂದ 33 ಸೀಟ್ಗಳಿಗೆ ಬಿಜೆಪಿ ಕುಸಿದಿದೆ.
ನರೇಂದ್ರ ಮೋದಿ ಗೆಲುವಿನ ಅಂತರ ಕೂಡ ತೀವ್ರ ಕುಸಿತಕಂಡಿದ್ದು, 4.79 ಲಕ್ಷದಿಂದ 1.50 ಲಕ್ಷ ಮತಕ್ಕೆ ಇಳಿಕೆ ಯಾಗಿದೆ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….