ದೊಡ್ಡಬಳ್ಳಾಪುರ, (ಜೂ.07); ಮುಂಗಾರು ಮಳೆ ಪ್ರಾರಂಭವಾದ ನಂತರ ತಾಲೂಕಿನ ಹಲವೆಡೆ ಬರಪೂರ ಮಳೆಯಾಗುತ್ತಿದ್ದು, ಗುರುವಾರ ಒಂದೇ ರಾತ್ರಿ ತಾಲೂಕಿನಲ್ಲಿ 24.14 ಮಳೆ ದಾಖಲಾಗಿದೆ.
ಮಳೆಯೊಂದಿಗೆ ಜೋರು ಗಾಳಿ ಇಲ್ಲದೆ ಇದ್ದ ಕಾರಣ ಹೆಚ್ಚಿನ ಅನಾಹುತಗಳು ನಡೆದಿಲ್ಲವಾದರೂ, ಕುಂಟನಹಳ್ಳಿ ಪಿ.ವೆಂಕಟೇಶ್ ಎಂಬ ರೈತ ಬೆಳೆದಿದ್ದ ಪಡವಲಕಾಯಿ ಗಿಡಕ್ಕೆ ಅಳವಡಿಸಿದ್ದ ಚಪ್ಪರ ನೆಲಸಮವಾಗಿ, ಲಕ್ಷಾಂತರ ರೂ ನಷ್ಟವಾಗಿದೆ.
ಉಳಿದಂತೆ ಮುಂಗಾರು ಮಳೆ ತಾಲೂಕಿನ ಭೂಮಿ ತಂಪಾಗುವಷ್ಟು ಬೀಳುತ್ತಿರುವುದರಿಂದ ರೈತರಲ್ಲಿ ಸಂತಸ ಮೂಡಿಸಿದೆ.
ಮಳೆ ಆಶ್ರಯದಲ್ಲಿ ಮುಸುಕಿನಜೋಳ ಬೆಳೆಯುವ ರೈತರು ಮೇ ಅಂತ್ಯದಿಂದಲೇ ಬಿತ್ತನೆ ಪ್ರಾರಂಭಿಸಲು ಭೂಮಿ ಸಿದ್ದಗೊಳಿಸಿಕೊಂಡಿದ್ದಾರೆ.
ಕೊಳವೆ ಬಾವಿಗಳನ್ನು ಹೊಂದಿರುವ ರೈತರು ಈಗಾಗಲೇ ಮುಸುಕಿನಜೋಳ ಬಿತ್ತನೆ ಮಾಡಿದ್ದು ಈಗ ಬೀಳುತ್ತಿರುವ ಮಳೆಯಿಂದಾಗಿ ಒಂದೆರಡು ತಿಂಗಳ ಒಳಗೆ ಕಟಾವಿಗೆ ಬರುವ ಹಾಗೂ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
ಗುರುವಾರ ರಾತ್ರಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 22.14 ಮಿಮೀ ಸುರಿದಿದ್ದು, ತೂಬಗೆರೆ ಹೋಬಳಿಯಲ್ಲಿ 29.07 ಮಿಮೀ, ಕಸಬಾ ಹೋಬಳಿಯಲ್ಲಿ 25.04 ಮಿಮೀ, ದೊಡ್ಡಬೆಳವಂಗಲ ಹೋಬಳಿ ಅತಿಹೆಚ್ಚು 31.01 ಮೀಮೀ, ಮಧುರೆ ಹೋಬಳಿ 11.07 ಮಿಮೀ ಹಾಗೂ ಸಾಸಲು ಹೋಬಳಿ 22.08 ಮಿಮೀ ಮಳೆಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….