ಹರಿತಲೇಖನಿ ದಿನಕ್ಕೊಂದು ಕಥೆ; ಧನುಷ್ಕೋಡಿ – ಒಂದು ದುರ್ಲಕ್ಷಿತ ಹಾಗೂ ಧ್ವಂಸಗೊಂಡ ತೀರ್ಥಕ್ಷೇತ್ರ !

ಭಾರತದ ದಕ್ಷಿಣ-ಪೂರ್ವ ದಿಕ್ಕಿನ ತುದಿಯಲ್ಲಿರುವ ಹಿಂದೂಗಳ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ ಧನುಷ್ಕೋಡಿ ! ಈ ಸ್ಥಾನವು ಪವಿತ್ರ ರಾಮಸೇತುವಿನ ಉಗಮಸ್ಥಾನವಾಗಿದೆ. ಕಳೆದ 50 ವರ್ಷಗಳಿಂದ ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರದ ಸ್ಥಿತಿ ಧ್ವಂಸಗೊಂಡ ಒಂದು ನಗರದಂತಾಗಿದೆ. 22 ಡಿಸೆಂಬರ್ 1964 ರಂದು ಈ ನಗರವು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು.

ಅನಂತರ ಕಳೆದ 50 ವರ್ಷಗಳಲ್ಲಿ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು. ಈ ಘಟನೆಗೆ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಬಂಗಾಲ, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಇತ್ಯಾದಿ ರಾಜ್ಯಗಳ ಹಿಂದುತ್ವವಾದಿ ಸಂಘಟನೆಗಳ ಮುಖಂಡರ ಒಂದು ಸಮೂಹವು ಧನುಷ್ಕೋಡಿಗೆ ಭೇಟಿ ನೀಡಿತು.

ತಮಿಳುನಾಡು ರಾಜ್ಯದ ಪೂರ್ವದಡದಲ್ಲಿ ರಾಮೇಶ್ವರಮ್ ಈ ತೀರ್ಥಕ್ಷೇತ್ರವಿದೆ. ರಾಮೇಶ್ವರಮ್‌ನ ದಕ್ಷಿಣದಲ್ಲಿ 11 ಕಿ.ಮೀ. ದೂರದಲ್ಲಿ ಧನುಷ್ಕೋಡಿ ನಗರವಿದೆ. ಇಲ್ಲಿಂದ ಶ್ರೀಲಂಕಾ ಕೇವಲ 18 ಮೈಲು (ಸುಮಾರು 20 ಕಿ.ಮೀ.) ದೂರದಲ್ಲಿದೆ ! ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಪವಿತ್ರ ಸಂಗಮದಲ್ಲಿ ನೆಲೆಸಿದ ಕೇವಲ 50 ಗಜ (ಸುಮಾರು 150 ಅಡಿ) ಅಗಲವಿರುವ ಧನುಷ್ಕೋಡಿಯು ಮರಳಿನಿಂದ ತುಂಬಿದ ಸ್ಥಾನವಾಗಿದೆ.

ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ. ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ. ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ಭಾರತದ ದಕ್ಷಿಣ-ಪೂರ್ವ ದಿಕ್ಕಿನ ತುದಿಯಲ್ಲಿರುವ ಹಿಂದೂಗಳ ಒಂದು ಪವಿತ್ರ ತೀರ್ಥಕ್ಷೇತ್ರವೆಂದರೆ ಧನುಷ್ಕೋಡಿ ! ಈ ಸ್ಥಾನವು ಪವಿತ್ರ ರಾಮಸೇತುವಿನ ಉಗಮಸ್ಥಾನವಾಗಿದೆ. ಕಳೆದ ೫೦ ವರ್ಷಗಳಿಂದ ಹಿಂದೂಗಳ ಈ ಪವಿತ್ರ ತೀರ್ಥಕ್ಷೇತ್ರದ ಸ್ಥಿತಿ ಧ್ವಂಸಗೊಂಡ ಒಂದು ನಗರದಂತಾಗಿದೆ. 22 ಡಿಸೆಂಬರ್ 1964 ರಂದು ಈ ನಗರವು ಒಂದು ಚಂಡಮಾರುತಕ್ಕೆ ತುತ್ತಾಗಿ ಧ್ವಂಸವಾಯಿತು. ಅನಂತರ ಕಳೆದ 50 ವರ್ಷಗಳಲ್ಲಿ ಈ ತೀರ್ಥಕ್ಷೇತ್ರವನ್ನು ಪುನರುಜ್ಜೀವನ ಮಾಡುವುದಿರಲಿ, ಸರಕಾರ ಈ ನಗರವನ್ನು ‘ಭೂತಗಳ ನಗರ’ (ghost town) ಎಂದು ಘೋಷಿಸಿ ಹೀಯಾಳಿಸಿತು.

ಈ ಘಟನೆಗೆ 50 ವರ್ಷಗಳು ಪೂರ್ಣಗೊಂಡ ನಿಮಿತ್ತ ಬಂಗಾಲ, ಅಸ್ಸಾಂ, ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡು ಇತ್ಯಾದಿ ರಾಜ್ಯಗಳ ಹಿಂದುತ್ವವಾದಿ ಸಂಘಟನೆಗಳ ಮುಖಂಡರ ಒಂದು ಸಮೂಹವು ಧನುಷ್ಕೋಡಿಗೆ ಭೇಟಿ ನೀಡಿತು. ಅದರಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಪ್ರತಿನಿಧಿ ಸಹ ಭಾಗವಹಿಸಿದ್ದರು.

ತಮಿಳುನಾಡು ರಾಜ್ಯದ ಪೂರ್ವದಡದಲ್ಲಿ ರಾಮೇಶ್ವರಮ್ ಈ ತೀರ್ಥಕ್ಷೇತ್ರವಿದೆ. ರಾಮೇಶ್ವರಮ್‌ನ ದಕ್ಷಿಣದಲ್ಲಿ 11 ಕಿ.ಮೀ. ದೂರದಲ್ಲಿ ಧನುಷ್ಕೋಡಿ ನಗರವಿದೆ. ಇಲ್ಲಿಂದ ಶ್ರೀಲಂಕಾ ಕೇವಲ 18 ಮೈಲು (ಸುಮಾರು 30 ಕಿ.ಮೀ.) ದೂರದಲ್ಲಿದೆ ! ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಪವಿತ್ರ ಸಂಗಮದಲ್ಲಿ ನೆಲೆಸಿದ ಕೇವಲ 50 ಗಜ (ಸುಮಾರು 150 ಅಡಿ) ಅಗಲವಿರುವ ಧನುಷ್ಕೋಡಿಯು ಮರಳಿನಿಂದ ತುಂಬಿದ ಸ್ಥಾನವಾಗಿದೆ.

ರಾಮೇಶ್ವರಮ್ ಮತ್ತು ಧನುಷ್ಕೋಡಿ ಇವುಗಳ ಧಾರ್ಮಿಕ ಮಹಾತ್ಮೆ!: ಉತ್ತರಭಾರತದಲ್ಲಿ ಕಾಶಿಗೆ ಎಷ್ಟು ಧಾರ್ಮಿಕ ಮಹತ್ವ ಇದೆಯೋ, ದಕ್ಷಿಣ ಭಾರತದಲ್ಲಿ ರಾಮೇಶ್ವರಮ್‌ಗೆ ಅಷ್ಟೇ ಮಹತ್ವ ಇದೆ. ಹಿಂದೂಗಳ ನಾಲ್ಕು ಪವಿತ್ರ ಧಾಮಗಳಲ್ಲಿ ರಾಮೇಶ್ವರಮ್ ಸಹ ಒಂದು ಧಾಮವಾಗಿದೆ. ಪುರಾಣ ಇತ್ಯಾದಿ ಧಾರ್ಮಿಕ ಗ್ರಂಥಗಳಿಗನುಸಾರ ಕಾಶಿಯ ಶ್ರೀ ವಿಶ್ವೇಶ್ವರನ ಯಾತ್ರೆಯು ಶ್ರೀ ರಾಮೇಶ್ವರಮ್‌ನ ದರ್ಶನವಾಗದೆ ಪೂರ್ಣಗೊಳ್ಳುವುದಿಲ್ಲ. ಬಂಗಾಲ ಕೊಲ್ಲಿ (ಮಹೋದಧಿ) ಮತ್ತು ಹಿಂದೂ ಮಹಾಸಾಗರ (ರತ್ನಾಕರ) ಇವುಗಳ ಸಂಗಮದಲ್ಲಿರುವ ಧನುಷ್ಕೋಡಿಯಲ್ಲಿ ಸ್ನಾನ ಮಾಡಿ ಕಾಶಿಯ ಗಂಗಾಜಲದಿಂದ ರಾಮೇಶ್ವರನಿಗೆ ಅಭಿಷೇಕ ಮಾಡಿದ ನಂತರವೇ ಕಾಶಿಯ ತೀರ್ಥಯಾತ್ರೆಯು ಪೂರ್ಣಗೊಳ್ಳುತ್ತದೆ.

ಧನುಷ್ಕೋಡಿಯ ಇತಿಹಾಸ ಮತ್ತು ರಾಮಸೇತುವೆಯ ಪ್ರಾಚೀನತೆ !: ರಾಮಸೇತುವಿನ ಈಚೆಗಿನ ಭಾಗಕ್ಕೆ ಧನುಷ್ಕೋಡಿ (‘ಕೋಡಿ’ ಅಂದರೆ ಧನುಷ್ಯದ ತುದಿ) ಎಂದು ಹೇಳುತ್ತಾರೆ; ಏಕೆಂದರೆ ಹದಿನೇಳುವರೆ ಲಕ್ಷ ವರ್ಷಗಳ ಹಿಂದೆ ರಾವಣನ ಲಂಕೆಗೆ (ಶ್ರೀಲಂಕಾಗೆ) ಪ್ರವೇಶ ಮಾಡಲು ಶ್ರೀರಾಮನು ತನ್ನ ‘ಕೋದಂಡ’ ಧನುಷ್ಯದ ತುದಿಯಿಂದ ಸೇತುವೆಯನ್ನು ನಿರ್ಮಿಸಲು ಈ ಸ್ಥಾನವನ್ನು ಆಯ್ದುಕೊಂಡನು.

ಅಲ್ಲಿ ರಾಮಸೇತುವಿನ ಭಗ್ನಾವಶೇಷದ ರೂಪದಲ್ಲಿ ದೊಡ್ಡ ದೊಡ್ಡ ಬಂಡೆಕಲ್ಲುಗಳು ದ್ವೀಪಗಳಂತೆ ಇಂದಿಗೂ ಕಾಣಲು ಸಿಗುತ್ತವೆ. ರಾಮಸೇತುವೆ ನಳ ಮತ್ತು ನೀಲ ಇವರ ವಾಸ್ತುಶಾಸ್ತ್ರದ ಒಂದು ಅದ್ಭುತ ಮಾದರಿಯಾಗಿದೆ. ಈ ರಾಮಸೇತುವಿನ ಅಗಲ ಮತ್ತು ಉದ್ದ ಇವುಗಳ ಪ್ರಮಾಣ ಒಂದಕ್ಕೆ ಹತ್ತರಷ್ಟಿದೆ, ಎಂಬ ಸವಿಸ್ತಾರ ವರ್ಣನೆ ವಾಲ್ಮೀಕಿ ರಾಮಾಯಣದಲ್ಲಿದೆ. ಪ್ರತ್ಯಕ್ಷ ಅಳೆದಾಗಲೂ ಅವುಗಳ ಅಗಲ 3.5 ಕಿ. ಮೀ. ಇದ್ದು ಮತ್ತು ಉದ್ದ 35 ಕಿ.ಮೀ.ನಷ್ಟಿದೆ.

ಶ್ರೀರಾಮ-ರಾವಣರ ಮಹಾಯುದ್ಧದ ಮೊದಲು ಧನುಷ್ಕೋಡಿ ನಗರದಲ್ಲಿಯೇ ರಾವಣನ ತಮ್ಮನಾದ ವಿಭೀಷಣನು ಪ್ರಭು ರಾಮಚಂದ್ರನಿಗೆ ಶರಣಾಗಿದ್ದನು. ಶ್ರೀಲಂಕಾದ ಯುದ್ಧ ಸಮಾಪ್ತಿಯಾದ ನಂತರ ಇದೇ ನಗರದಲ್ಲಿ ಪ್ರಭು ರಾಮಚಂದ್ರನು ವಿಭೀಷಣನನ್ನು ಶ್ರೀಲಂಕಾದ ಸಾಮ್ರಾಟನೆಂದು ರಾಜ್ಯಾಭಿಷೇಕ ಮಾಡಿದ್ದನು.

ಇದೇ ಸಮಯದಲ್ಲಿ ಲಂಕಾಧಿಪತಿ ವಿಭೀಷಣನು ಪ್ರಭು ರಾಮಚಂದ್ರನಿಗೆ ‘ಭಾರತದ ಶೂರ-ಪರಾಕ್ರಮಿ ರಾಜರು ರಾಮಸೇತುವಿನ ಮೂಲಕ ಪದೇ ಪದೇ ಶ್ರೀಲಂಕಾದ ಮೇಲೆ ಆಕ್ರಮಣ ಮಾಡಿ ಶ್ರೀಲಂಕಾದ ಸ್ವಾತಂತ್ರ್ಯವನ್ನು ನಾಶ ಮಾಡುವರು. ಆದ್ದರಿಂದ ತಾವು ಈ ಸೇತುವೆಯನ್ನು ನಾಶಗೊಳಿಸಿರಿ’, ಎಂದು ಹೇಳಿದನು. ಆಗ ತನ್ನ ಭಕ್ತನ ಪ್ರಾರ್ಥನೆಯನ್ನು ಕೇಳಿ ಕೋದಂಡಧಾರಿ ಪ್ರಭು ರಾಮಚಂದ್ರ ರಾಮಸೇತುವಿನ ಮೇಲೆ ಬಾಣ ಹೊಡೆದು ಅದನ್ನು ನೀರಿನಲ್ಲಿ ಮುಳುಗಿಸಿದನು. ಆದ್ದರಿಂದ ಈ ಸೇತುವೆ 2 – 3 ಅಡಿ ನೀರಿನ ಕೆಳಗೆ ಹೋಯಿತು. ಇಂದು ಕೂಡ ಯಾರಾದರೂ ರಾಮಸೇತುವಿನ ಮೇಲೆ ನಿಂತರೆ ಅವರ ಸೊಂಟದ ವರೆಗೆ ನೀರು ಇರುತ್ತದೆ.

ಬ್ರಿಟೀಷರ ಕಾಲದಲ್ಲಿ ಧನುಷ್ಕೋಡಿ ಒಂದು ದೊಡ್ಡ ಪಟ್ಟಣವಾಗಿತ್ತು ಹಾಗೂ ರಾಮೇಶ್ವರಮ್ ಒಂದು ಸಣ್ಣ ಗ್ರಾಮವಾಗಿತ್ತು. ಅಲ್ಲಿಂದ ಶ್ರೀಲಂಕಾಗೆ ಹೋಗಿ ಬರಲು ದೋಣಿಯ ವ್ಯವಸ್ಥೆ ಇತ್ತು. ಆ ಕಾಲದಲ್ಲಿ ಶ್ರೀಲಂಕಾಗೆ ಹೋಗಲು ಪಾಸ್‌ಪೋರ್ಟ್ ಬೇಕಾಗಿರಲಿಲ್ಲ. ಧನುಷ್ಕೋಡಿಯಿಂದ ಥಲಾಯಿಮನ್ನಾರ (ಶ್ರೀಲಂಕಾ) ಹೀಗೆ ನೌಕೆಯ ಪ್ರವಾಸದ ಟಿಕೇಟ್ ಕೇವಲ 17 ರೂಪಾಯಿಗಳಿದ್ದವು. ಈ ನೌಕೆಗಳ ಮೂಲಕ ವ್ಯಾಪಾರಿ ವಸ್ತುಗಳ ಕೊಡುಕೊಳ್ಳುವಿಕೆಯೂ ನಡೆಯುತ್ತಿತ್ತು.

‘1793 ರಲ್ಲಿ ಅಮೇರಿಕಾದ ಧರ್ಮಸಂಸತ್ತಿಗಾಗಿ ಹೋಗಿದ್ದ ಸ್ವಾಮಿ ವಿವೇಕಾನಂದರು ಶ್ರೀಲಂಕಾದ ಮಾರ್ಗದಿಂದ ಭಾರತಕ್ಕೆ ಹಿಂತಿರುಗಿದರು. ಅವರು ಈ ಧನುಷ್ಕೋಡಿಯ ಭೂಮಿಯಲ್ಲಿಯೇ ಇಳಿದಿದ್ದರು. 1964 ರ ವರೆಗೆ ಧನುಷ್ಕೋಡಿ ಒಂದು ಪ್ರಖ್ಯಾತ ಪ್ರವಾಸೀ ಸ್ಥಳ ಹಾಗೂ ತೀರ್ಥಕ್ಷೇತ್ರವಾಗಿತ್ತು. ಭಕ್ತರಿಗಾಗಿ ಅಲ್ಲಿ ಹೊಟೇಲ್‌ಗಳು, ಬಟ್ಟೆಯ ಅಂಗಡಿಗಳು ಹಾಗೂ ಧರ್ಮಶಾಲೆಗಳಿದ್ದವು. ಆ ಸಮಯದಲ್ಲಿ ಅಲ್ಲಿ ಹಡಗು ನಿರ್ಮಾಣ ಕೇಂದ್ರ, ರೈಲು ನಿಲ್ದಾಣ, ರೈಲ್ವೆಯ ಸಣ್ಣ ಆಸ್ಪತ್ರೆ, ಅಂಚೆ ಕಚೇರಿ ಮತ್ತು ಮೀನು ಸಾಕಣೆಯಂತಹ ಕೆಲವು ಸರಕಾರೀ ಕಚೇರಿಗಳಿದ್ದವು. 1964ರ ಚಂಡಮಾರುತದ ಮೊದಲು ಚೆನೈ ಮತ್ತು ಧನುಷ್ಕೋಡಿಯ ನಡುವೆ ಮದ್ರಾಸ್ ಎಗ್ಮೋರದಿಂದ ಬೋಟ್ ಮೇಲ್ ಹೆಸರಿನ ರೈಲು ಸೇವೆ ಇತ್ತು. ಅಲ್ಲಿಂದ ದೋಣಿ ಮೂಲಕ ಶ್ರೀಲಂಕಾಗೆ ಹೋಗುವ ಪ್ರವಾಸಿಗಳಿಗೆ ಅದು ಉಪಯುಕ್ತವಾಗುತ್ತಿತ್ತು.

1964 ರಲ್ಲಿ ಭೀಕರ ಚಂಡಮಾರುತದಿಂದಾಗಿ ಧನುಷ್ಕೋಡಿ ಧ್ವಂಸವಾಯಿತು. 17 ಡಿಸೆಂಬರ್ 1964 ರಂದು ದಕ್ಷಿಣ ಅಂಡಮಾನ ಸಮುದ್ರದಲ್ಲಿ 5 ಡಿಗ್ರಿ ಪೂರ್ವದಲ್ಲಿ ಅದರ ಕೇಂದ್ರವಿತ್ತು. ಡಿಸೆಂಬರ್ 19ರಂದು ಅದು ಚಂಡಮಾರುತದ ರೂಪ ಧಾರಣೆ ಮಾಡಿ ಪ್ರಚಂಡ ವೇಗದಲ್ಲಿ ಡಿಸೆಂಬರ್ 22 ರಂದು ರಾತ್ರಿ ಗಂಟೆಗೆ 270 ಕಿ. ಮೀ. ವೇಗದಲ್ಲಿ ಶ್ರೀಲಂಕಾವನ್ನು ದಾಟಿಕೊಂಡು ಅದು ಧನುಷ್ಕೋಡಿಯ ತೀರದಲ್ಲಿ ಬಂದು ಅಪ್ಪಳಿಸಿತು. ಈ ಚಂಡಮಾರುತದ ಜೊತೆಗೆ 20 ಅಡಿಗಳಷ್ಟು ಎತ್ತರದ ತೆರೆ ಧನುಷ್ಕೋಡಿ ನಗರದ ಪೂರ್ವದಿಕ್ಕಿನಲ್ಲಿರುವ ಪವಿತ್ರ ಸಂಗಮದ ಮೇಲಿಂದ ನಗರದ ಮೇಲೆ ಆಕ್ರಮಣ ಮಾಡಿ ಸಂಪೂರ್ಣ ಧನುಷ್ಕೋಡಿ ನಗರವನ್ನು ನಾಶಗೊಳಿಸಿತು.

ಸಂಕಲನಕಾರರು: ಶ್ರೀ. ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿ

ಆಧಾರ: ಸಾಪ್ತಾಹಿಕ ಸನಾತನ ಪ್ರಭಾತ

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಕೈಗಾರಿಕಾ ಸಚಿವರಿಂದ ರೂ 2 ಕೋಟಿ ಲಾಭಾಂಶ ಸಿಎಂ ಸಿದ್ದರಾಮಯ್ಯರಿಗೆ ಹಸ್ತಾಂತರ

ಕೈಗಾರಿಕಾ ಸಚಿವರಿಂದ ರೂ 2 ಕೋಟಿ ಲಾಭಾಂಶ ಸಿಎಂ ಸಿದ್ದರಾಮಯ್ಯರಿಗೆ ಹಸ್ತಾಂತರ

ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ ಅವರು ಕೆ.ಐ.ಎ.ಡಿ.ಬಿ.ಯ ರೂ 2 ಕೋಟಿ ಲಾಭಾಂಶವನ್ನು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗಾಗಿ ಸಿಎಂ ಸಿದ್ದರಾಮಯ್ಯ (Cmsiddaramaiah) ಹಸ್ತಾಂತರಿಸಿದರು.

[ccc_my_favorite_select_button post_id="117055"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!