ಓದಿನರಮನೆಯಲ್ಲಿ ತಿಂಗಳ ಒನಪು 189 ಪರಸಂಗದ ಗೆಂಡೆತಿಮ್ಮ ಮರುಪ್ರದರ್ಶನ..!

ಬೆಂಗಳೂರು, (ಜೂ.8); ಆಧುನಿಕತೆ ಎಂಬುದು ಎಂಥವರನ್ನೂ ತನ್ನ ತೆಕ್ಕೆಗೆ ಸೆಳೆದುಕೊಂಡು, ಕೆಲವೊಮ್ಮೆ ಆವಾಂತರಗಳನ್ನು ಸೃಷ್ಟಿಸಿದರೆ ಮತ್ತೆ ಕೆಲವೊಮ್ಮೆ ಹೊಸ ಸವಾಲುಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ. ಅಂತಹದ್ದೊಂದು ವಿಚಾರ ಪೂರಿತ ವಸ್ತುವನ್ನಿಟ್ಟುಕೊಂಡು ಕನ್ನಡದ ಜನಪ್ರಿಯ ಕಾದಂಬರಿಕಾರ ದಿವಂಗತ ಕೃಷ್ಣ ಆಲನಹಳ್ಳಿ ಅವರ ಪರಸಂಗದ ಗೆಂಡೆತಿಮ್ಮ ನಾಟಕವನ್ನು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನಗರದ ರೂಪಾಂತರ ತಂಡದ ಮೂವತ್ತು ಕಲಾವಿದರು ಅತ್ಯಂತ ಯಶಸ್ವಿಯಾಗಿ ಪ್ರಸ್ತುತ ಪಡಿಸಿ ಪ್ರೇಕ್ಷಕರ ಮನಸೂರೆಗೊಂಡಿತು.

ಇದೇ ವೇದಿಕೆಯಲ್ಲಿ ನಾಟಕ ರೂಪಾಂತರಿಸಿದ ಡಾ.ಎಂ. ಬೈರೇಗೌಡ ಅವರನ್ನು ರೂಪಾಂತರ ತಂಡದ ಪರವಾಗಿ ಸನ್ಮಾನಿಸಿದವರು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ.

ಪರಸಂಗದ ಗೆಂಡೆತಿಮ್ಮ ಮತ್ತು ಮರಂಕಿ ಇವರಿಬ್ಬರ ದುರಂತಕತೆ ಸಂಭವಿಸಿ ಅರ್ಧ ಶತಮಾನವೇ ಕಳೆದಿದೆ. ಸಾಲುಂಡಿ-ಗೌವಳ್ಳಿಯಲ್ಲಿ ಅವರಿಬ್ಬರ ಸಾವಿನ ಸುದ್ಧಿ ಹಸಿಹಸಿಯಾಗಿಯೇ ಇದೆ. ಗೌವಳ್ಳಿಯಂತ ಯಾವುದೆ ಕೊಂಪೆಗೆ ಹೋದರೂ ಮರಂಕಿಯಂಥವರು ಬಿತ್ತಿದ ಬಯಕೆಗಳು ಬೆಳೆದು ಹೂಬಿಟ್ಟು ನಿಂತಿವೆ.

ಗೌವಳ್ಳಿಗೆ ಬಸ್ಸಿನ ದಾರಿ ಆಗಿ, ಊರ ಹಿರಿಯರು ಎಷ್ಟೇ ತಡೆದರೂ ಲೆಕ್ಕಿಸದೆ ಅವರ ಕಲ್ಪನೆಯ ಅನಿಷ್ಠಶಕ್ತಿಗಳು ನುಗ್ಗಿ ಆಕ್ರಮಿಸಿ ಸ್ವತಃ ಊರೇ ತಾನಾಗಿ ಎಲ್ಲ ಶಕ್ತಿಗಳನ್ನೂ ಆವಾಹನೆಗೊಳ್ಳುತ್ತಿದೆ. ಇವತ್ತಿಗೂ ಗೌವಳ್ಳ್ಳಿ-ಸಾಲುಂಡಿಗಳಲ್ಲಿ ಯಾರನ್ನಾದರೂ ಗೆಂಡೆತಿಮ್ಮ-ಮರಂಕಿಯರ ಬಗ್ಗೆ ಪ್ರಶ್ನಿಸಿದರೆ ಅವರಿಬ್ಬರ ದುರಂತ ನೆನೆದು ನಿಟ್ಟುಸಿರು ಬಿಡುವುದನ್ನು ಕಾಣಬಹುದು. ಕಾಲ ಸರಿದರೂ ಮರಂಕಿ ಗೆಂಡೆತಿಮ್ಮನ ಜೀವನಗಾಥೆ ಅಚ್ಚ ಹಸಿರಾಗಿಯೇ ಇದೆ.

ಅರ್ಥಗರ್ಭಿತವಾದ ಈ ಮಾತುಗಳಿಗೆ ಸಾಕ್ಷಿ ಎಂಬಂತೆ ವಿಸ್ತಾರವಾದ ಕಥಾಹಂದರವನ್ನು ಹೊಂದಿರುವ ಅತ್ಯಂತ ಆಪ್ತವಾಗಿ  ಪರಸಂಗದ ಗೆಂಡೆತಿಮ್ಮ ಕಾದಂಬರಿಯನ್ನು ನಾಟಕರೂಪಕ್ಕೆ ತಂದವರು ನಾಡಿನ ಹೆಸರಾಂತ ನಾಟಕಕಾರ, ಕವಿ, ಗಾಯಕ, ನಿರ್ದೇಶಕ, ನಟ, ಸಂಘಟಕ ಡಾ. ಎಂ. ಬೈರೇಗೌಡ. ರಂಗರೂಪಕ್ಕೆ ಒಂದು ರೂಪ ಕೊಟ್ಟು ಕಲಾವಿದರನ್ನು ತಿದ್ದಿ ತೀಡಿ ಶುದ್ಧಗೊಳಿಸಿ ಅಚ್ಚುಕಟ್ಟಾದ ಅಡುಗೆಯಾಗಿಸಿ ಕಲಾಕ್ಷೇತ್ರದ ವೇದಿಕೆಯಲ್ಲಿ ಉಣಬಡಿಸಿದವರು ರೂಪಾಂತರ ಕೆ.ಎಸ್.ಡಿ.ಎಲ್. ಚಂದ್ರು.

ಗೆಂಡೆತಿಮ್ಮನ ಪಾತ್ರ ನಿರ್ವಹಿಸಿದ ಮುರುಡಯ್ಯ ಅಭಿಜಾತ ಕಲಾವಿದನೆಂಬ ಮಾತನ್ನು ಸಬೀತುಪಡಿಸಿದರು. ನಾಟಕದ ನಂತರವೂ ಪಾತ್ರದೊಳಗೇ ಉಸಿರಾಡಿದ ಅವರ ನಟನೆ ಮಂತ್ರಮುಗ್ಧರನ್ನಾಗಿಸಿದ್ದು ಸುಳ್ಳಲ್ಲ. ಬೇದಿಯಮ್ಮನ ಪಾತ್ರದಲ್ಲಿ ಮಂಜುಳ ಮಿಂಚಿದರು. ಮರಂಕಿಯಾಗಿ ಕಲಾವಿದೆ…. ಅವರು ಸಮರ್ಥವಾಗಿ ನಿಭಾಯಿಸಿದರು.

ಹಿರಿಯ ರಂಗಭೂಮಿ, ಹಿರಿತೆರೆ, ಕಿರುತೆರೆ ನಟ ವೆಂಕಟಾಚಲ ಅವರ ಪಾತ್ರದ ಲವಲವಿಕೆ, ಎಲ್ಲ ಪೋಷಕ ಪಾತ್ರಗಳು ಮುಖ್ಯ ಭೂಮಿಕೆಗೆ ಹೊದ ಮೆರುಗನ್ನು ತಂದುಕೊಟ್ಟರು. ಇಲ್ಲಿನ ಒಂದೊಂದು ದೃಶ್ಯವೂ ಕುತೂಹಲ ಕೆರಳಿಸುವುದರ ಜೊತೆಗೆ ಪ್ರೇಕ್ಷಕನನ್ನು ಹಿಡಿದಿಡುವಲ್ಲಿ ಯಶಸ್ಸನ್ನು ಕಂಡಿದೆ.

ದೇಸೀ ಮೋಹನ್ ಅವರ ಸಂಗೀತದ ಮಾಧುರ್ಯ, ಟಿ.ಎಂ. ನಾಗರಾಜು ಅವರ ಬೆಳಕಿನ ನಿರ್ವಹಣೆ, ರೂಪಾಂತರದ ರಾಜು ಅವರ ನಿರ್ವಹಣೆ, ಕೆ. ಗಂಗಾಧರ ಅವರ ವಿನ್ಯಾಸ, ಸಹನಿರ್ದೇಶಕ ಎನ್. ರಾಮಚಂದ್ರ ಎಲ್ಲರ ಶ್ರಮ ಪರಸಂಗದ ಗೆಂಡೆತಿಮ್ಮ ನಾಟಕ ಪ್ರದರ್ಶನದಲ್ಲಿ ಎದ್ದು ಕಾಣುತ್ತಿತ್ತು.

ಪರಸಂಗದ ಗೆಂಡೆತಿಮ್ಮ ನಾಟಕದ ಮರುಪ್ರದರ್ಶನವು 11ನೇ ಜೂನ್ 21024ರಂದು ಸಂಜೆ 6.30ಕ್ಕೆ ಹಂಪಿನಗರ ನಗರ ಕೇಂದ್ರ ಗ್ರಂಥಾಲಯದ ಗ್ರಂಥಾಂಗಣ ಸಭಾಂಗಣದಲ್ಲಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಸಹಯೋಗದಲ್ಲಿ ಕೃಷ್ಣಾಪುರದೊಡ್ಡಿಯ ಕೆ.ಎಸ್. ಮುದ್ದಪ್ಪ ಸ್ಮಾರಕ ಟ್ರಸ್ಟ್ ಕಳೆದ 189 ತಿಂಗಳುಗಳಿಂದ ನಡೆಸಿಕೊಂಡು ಬರುತ್ತಿರುವ ಓದಿನರಮನೆಯಲ್ಲಿ ತಿಂಗಳ ಒನಪು ಕಾರ್ಯಕ್ರಮ ಸರಿಣಿಯಲ್ಲಿ ಪ್ರದರ್ಶನವಾಗುತ್ತಿದೆ ಎಂದು ಕೆ.ಎಸ್.ಎಂ. ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್ ಟ್ರೈಲರ್ ಇಲ್ಲಿದೆ ನೋಡಿ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ ದಿ ಡೆವಿಲ್’ (The Devil) ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

[ccc_my_favorite_select_button post_id="117049"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!