ಮಳೆ ಹಾನಿಯ ವಿಷಯವನ್ನು 15 ದಿನಗಳ ಹಿಂದೆಯೇ ಹೇಳಬೇಕಿತ್ತು: ಆರ್‌.ಅಶೋಕ ಆಕ್ರೋಶ

ಬೆಂಗಳೂರು, (ಜುಲೈ.19): ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಕುರಿತು ಬಿಜೆಪಿ ಸದಸ್ಯರು ಧ್ವನಿ ಎತ್ತಿದರೆ ಅವರನ್ನು ಒತ್ತಾಯಪೂರ್ವಕವಾಗಿ ಕೂರಿಸುವ ಕೆಲಸವನ್ನು ಸ್ಪೀಕರ್‌ ಯು.ಟಿ.ಖಾದರ್‌ ಮಾಡಿದ್ದಾರೆ. ಮಳೆ ಹಾನಿಗೆ ಪರಿಹಾರ ನೀಡದೆ ಹಗರಣ ಮುಚ್ಚಿಹಾಕಲು ನಡುವೆ ಈ ವಿಷಯ ತರಲಾಗಿದೆ. ಇದು ಸದನಕ್ಕೆ ಹಾಗೂ ಸ್ಪೀಕರ್‌ಗೆ ಗೌರವ ತರುವ ಕೆಲಸವಲ್ಲ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. 

ಸದನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನದಲ್ಲಿ ಸದಸ್ಯರು ಮಾತನಾಡುವಾಗ ಅವರನ್ನು ಒತ್ತಾಯಪೂರ್ವಕವಾಗಿ ಸ್ಪೀಕರ್‌ ಕೂರಿಸುತ್ತಿದ್ದಾರೆ. ಇದು ಸದನಕ್ಕೆ ಅಥವಾ ಸ್ಪೀಕರ್‌ಗೆ ಗೌರವ ತರುವುದಿಲ್ಲ. ಕರ್ನಾಟಕದ ಇತಿಹಾಸದಲ್ಲಿ ಈ ರೀತಿ ಸದನ ನಡೆದಿಲ್ಲ. ಸ್ಪೀಕರ್‌ ಸದನ ನಡೆಸಲು ಸಂಪೂರ್ಣ ವಿಫಲರಾಗಿದ್ದಾರೆ.

ಇಂತಹ ಸ್ಪೀಕರ್‌ರಿಂದ ನಾವು ಏನೂ ನಿರೀಕ್ಷೆ ಮಾಡಲಾಗುವುದಿಲ್ಲ. ಮಳೆ ಹಾನಿ ಕುರಿತು 15 ದಿನಗಳ ಹಿಂದೆಯೇ ಹೇಳಬೇಕಿತ್ತು. ಸ್ಪೀಕರ್‌ ನಡೆ ಸದನಕ್ಕೆ ಗೌರವ ತರುವುದಿಲ್ಲ. ಸೋಮವಾರದ ಅಧಿವೇಶನದಲ್ಲಿ ಬಿಜೆಪಿ ಈ ಕುರಿತು ತೀರ್ಮಾನ ಕೈಗೊಳ್ಳಲಿದೆ ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಿಂದ ಅಧಿಕಾರಿ ಚಂದ್ರಶೇಖರನ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಎಂದರೆ ಅದು ಕಾಂಗ್ರೆಸ್‌ ಸರ್ಕಾರದ ಪ್ರಾಯೋಜಿತ ಕೊಲೆ. 187 ಕೋಟಿ ರೂ. ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರು ಲೂಟಿ ಮಾಡಿ ಚುನಾವಣೆಗೆ ಬಳಸಿದ್ದಾರೆ ಎಂಬುದು ಜಾರಿ ನಿರ್ದೇಶನಾಲಯದ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟವಾಗಿದೆ. ಈ ಕುರಿತು ಸದನದಲ್ಲಿ ನಿಲುವಳಿ ಸೂಚನೆಯಲ್ಲಿ ಮಾತನಾಡಲಾಗಿದೆ. ಲೂಟಿಯಾದ ಹಣವನ್ನು ಯಾವಾಗ ವಾಪಸ್‌ ತರಲಾಗುತ್ತದೆ ಎಂದು ನಾವು ಪ್ರಶ್ನೆ ಮಾಡಿದ್ದೇವೆ. ಇದು ಎಟಿಎಂ ಸರ್ಕಾರದ ಮೂಲಕ ಕಾಂಗ್ರೆಸ್‌ನ ಹಿರಿಯ ನಾಯಕರಿಗೆ ತಲುಪಿದೆಯೇ ಎಂದು ಕೇಳಿದ್ದೇವೆ ಎಂದರು. 

ಈ ಹಗರಣ ಮಾಡಿದ ತಪ್ಪಿತಸ್ಥರಿಗೆ ಶಿಕ್ಷಯಾಗಬೇಕೆಂದರೆ ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಶಾಸಕ ಬಸವನಗೌಡ ದದ್ದಲ್‌ ಅವರ ಹೆಸರು ಎಫ್‌ಐಆರ್‌ನಲ್ಲಿ ಬರಬೇಕು. ಆದರೆ ಇವರಿಬ್ಬರ ಹೆಸರು ಕೂಡ ಎಫ್‌ಐಆರ್‌ನಲ್ಲಿ ಬಾರದಂತೆ ಮಾಡಲು ಪೊಲೀಸರಿಗೆ ಒತ್ತಡ ಹೇರಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದಿಂದ ಭಾಷಣ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ಯಾರೂ ಭಾಗಿಯಾಗಿಲ್ಲ ಎಂದಿದ್ದಾರೆ. ಆದರೆ ಸಚಿವರು ರಾಜೀನಾಮೆ ನೀಡಿದ್ದಾರೆ. ಹಣ ಲೂಟಿಯಾಗಿದೆ ಎಂದು ಮುಖ್ಯಮಂತ್ರಿಯೇ ಒಪ್ಪಿಕೊಂಡಿದ್ದಾರೆ. 40 ಪರ್ಸೆಂಟ್‌ ಎಂದು ಭಿತ್ತಿಪತ್ರ ಅಂಟಿಸಿ, ಅಧಿಕಾರಕ್ಕೆ ಬಂದ ಮೇಲೆ ತನಿಖೆಗೆ ವಹಿಸಿದ್ದಾರೆ. ಆದರೆ ಇದರ ವರದಿ ಮಾತ್ರ ಬಂದಿಲ್ಲ. ಆದರೂ ಬಿಜೆಪಿ ಹಗರಣ ಮಾಡಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಪ್ರಶ್ನೆ ಮಾಡಿದ ನಂತರ ದಿಢೀರನೆ ಹಳೆ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ದೂರಿದರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣದಲ್ಲಿ ಭಾಗಿಯಾಗಿದ್ದು, ರಾಜೀನಾಮೆ ಕೊಡಬೇಕಿತ್ತು. ಆದರೆ ಅದನ್ನೂ ಮಾಡಿಲ್ಲ, ಸಿಬಿಐ ತನಿಖೆಗೂ ವಹಿಸಿಲ್ಲ. ಹಗರಣವನ್ನು ಮುಚ್ಚಿಹಾಕಲು ಎಲ್ಲ ವ್ಯವಸ್ಥಿತ ಸಂಚು ಮಾಡಲಾಗಿದೆ. ಬಿಜೆಪಿಯಿಂದ ಇದರ ವಿರುದ್ಧ ತೀವ್ರ ಹೋರಾಟ ಮುಂದುವರಿಯಲಿದೆ. ದಲಿತರ ಹಣ ವಾಪಸ್‌ ಸಿಗಬೇಕು, ಅಪರಾಧಿಗಳಿಗೆ ಶಿಕ್ಷೆ ಸಿಗಬೇಕು ಎಂಬುದು ಬಿಜೆಪಿಯ ಬೇಡಿಕೆ ಎಂದರು. 

ಮಳೆ ಹಾನಿಗೆ ಕ್ರಮವಿಲ್ಲ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಹಾನಿಯಾಗಿ ಜನರು ಸತ್ತಿದ್ದರೂ ಸಚಿವರು ಘಟನಾ ಸ್ಥಳಕ್ಕೆ ಹೋಗಿ ಸಂತ್ರಸ್ತರನ್ನು ಭೇಟಿ ಮಾಡಿಲ್ಲ. ಹಾನಿಗೊಳಗಾದವರಿಗೆ ಬಿಜೆಪಿ ಸರ್ಕಾರ 10,000 ರೂ. ಪರಿಹಾರ ನೀಡುತ್ತಿತ್ತು. ಈಗ ಸರ್ಕಾರ ಪರಿಹಾರವನ್ನು 5,000 ರೂ. ಗೆ ಇಳಿಸಿದೆ. ಮನೆ ಕಳೆದುಕೊಂಡವರಿಗೆ ಬಿಜೆಪಿ ತಲಾ 5 ಲಕ್ಷ ರೂ. ಪರಿಹಾರ ನೀಡುತ್ತಿತ್ತು. ಈಗ ಅದು ಕೂಡ ಇಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್ ಟ್ರೈಲರ್ ಇಲ್ಲಿದೆ ನೋಡಿ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ ದಿ ಡೆವಿಲ್’ (The Devil) ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

[ccc_my_favorite_select_button post_id="117049"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!