ಖೋವೈ, (ಜುಲೈ.19): ಹಣದ ಗಲಾಟೆಯಲ್ಲಿ ಯುವಕನೊಬ್ಬ ಜನ್ಮ ನೀಡಿದ ತಾಯಿಯ ತಲೆ ಕತ್ತರಿಸಿರುವ ಹೃದಯ ವಿದ್ರಾವಕ ಘಟನೆ ತ್ರಿಪುರದ ಖೋವೈ ಜಿಲ್ಲೆಯ ರತನ್ಪುರದಲ್ಲಿ ನಡೆದಿದೆ.
ಮೃತ ತಾಯಿಯನ್ನು 55 ವರ್ಷದ ಪರ್ಬತಿ ಝರಾ ಎನ್ನಲಾಗಿದ್ದು, ಹರಿಚರಣ್ ಝರಾ (24) ಆರೋಪಿ ಎಂದು ಗುರುತಿಸಲಾಗಿದೆ.
ಹರಿಚರಣ್ ಝರಾ ತನ್ನ ತಾಯಿ ಪರ್ಬತಿ ಝರಾ ಅವರ ಬಳಿ ಹಣ ಕೇಳಿದ್ದ ಆದರೆ ತಾಯಿ ಹಣ ನೀಡಲು ನಿರಾಕರಿಸಿದ್ದಾಳೆ. ಇದರಿಂದಾಗಿ ಇಬ್ಬರ ನಡುವೆ ನಡೆದ ಜಗಳ ಅತಿರೇಕಕ್ಕೆ ಹೋಗಿದ್ದು, ಹರಿಚರಣ್ ತಾಯಿಯ ಶಿರಚ್ಛೇದ ಮಾಡಿದ್ದಾನೆ.
ಘಟನೆ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬಸ್ಥರು ನೀಡಿದ ದೂರಿನ ಆಧಾರದಲ್ಲಿ ಹರಿಚರಣ್ ಝರಾನನ್ನು ಪೊಲೀಸರು ಬಂಧಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….