ದೊಡ್ಡಬಳ್ಳಾಪುರ, (ಜುಲೈ.19); ತಾಲ್ಲೂಕಿನ 5 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸುವ ಸಲುವಾಗಿ ಎಲ್.ಕೆ.ಜಿ ವಿಭಾಗವನ್ನು ಪ್ರಾರಂಭಿಸಲು ಸರ್ಕಾರದ ಆದೇಶ ದೊರೆತಿದೆ.
ಹರಿತಲೇಖನಿಗೆ ದೊರೆತಿರುವ ಜ್ಞಾಪನಾ ಪತ್ರದನ್ವಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯ ಅಜಾಕ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೊನಘಟ್ಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನೇಯ್ಗೆಬೀದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಆರೂಢಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಳ್ಳುಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭಿಸಲಾಗುತ್ತಿದೆ.
ಎಲ್.ಕೆ.ಜಿ ಮಕ್ಕಳಿಗೆ 4 ರಿಂದ 5 ವರ್ಷ ವಯೋಮಿತಿಯ ಒಳಗಿನ ಮಕ್ಕಳನ್ನು ದಾಖಲಿಸಿಕೊಳ್ಳುವುದು. ಕನಿಷ್ಟ 20 ಮಕ್ಕಳು ಪ್ರವೇಶ ಪಡೆಯುವಂತಿರಬೇಕು. ಗರಿಷ್ಟ 30 ಮಕ್ಕಳನ್ನು ದಾಖಲಿಸುವುದು ಹಾಗೂ ಶಿಕ್ಷಕರು ಮತ್ತು ಆಯಾ ರವರ ನೇಮಕಾತಿಯನ್ನು ಮಾಡಿಕೊಂಡು ಬಿ.ಆರ್.ಸಿ ಕಛೇರಿಗೆ ವರದಿಯನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ.
2023-24ನೇ ಸಾಲಿಗೆ ಪಿ.ಎ.ಬಿಯಿಂದ 262 ರಡಿಯಲ್ಲಿ ಅನುಮೋದನೆಗೊಂಡ ಪೂರ್ವ ಪ್ರಾಥಮಿಕ ಶಾಲೆಗಳು ಮತ್ತು 2024-25ನೇ ಸಾಲಿಗೆ ಪಿ.ಎ.ಬಿಯಿಂದ 316 ರಡಿಯಲ್ಲಿ ಅನುಮೋದನೆಗೊಂಡ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡುವುದರಿಂದ ಪ್ರಸ್ತುತ ಈ ಶೈಕ್ಷಣಿಕ ವರ್ಷದಲ್ಲಿ ಪೂರ್ವ ಪ್ರಾಥಮಿಕ (ಎಲ್.ಕೆ.ಜಿ) ತರಗತಿಗಳನ್ನು ಪ್ರಾರಂಭಿಸಲು ಸೂಚಿಸಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….