ಯಾದಗಿರಿ, (ಜುಲೈ.18): ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿ, ಅತ್ತೆ ಹಾಗೂ ಮಾವನನ್ನು ಅಳಿಯ ರಾಡ್‌ನಿಂದ ಹೊಡೆದು, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಯಾದಗಿರಿ ತಾಲ್ಲೂಕಿನ ಮುನಗಲ್ ಗ್ರಾಮದಲ್ಲಿ ನಡೆದಿದೆ.
ನವೀನ್ ಎಂಬ ಆರೋಪಿಯು ಪತ್ನಿ 25ವರ್ಷದ ಅನ್ನಪೂರ್ಣ, ಅತ್ತೆ ಕವಿತಾ (45 ವರ್ಷ) ಹಾಗೂ ಮಾವ ಬಸವರಾಜಪ್ಪ (52 ವರ್ಷ) ಎಂಬುವರನ್ನು ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.
ಮೃತರು ಮೂವರು ದಾವಣಗೆರೆ ಮೂಲದವರು ಎಂದು ತಿಳಿದುಬಂದಿದೆ. ಕಳೆದ 4 ವರ್ಷಗಳ ಹಿಂದೆಯೇ ಅನ್ನಪೂರ್ಣ-ನವೀನ್ ಪ್ರೀತಿಸಿ ಮದುವೆಯಾಗಿದ್ದರು. ಒಂದು ವರ್ಷದ ಹಿಂದೆ ಪತಿಯ ಕಿರುಕುಳದಿಂದ ಬೇಸತ್ತು ತವರಿಗೆ ಪತ್ನಿ ಹೋಗಿದ್ದಳು.
ಬಳಿಕ ಹಿರಿಯರು ಪಂಚಾಯಿತಿ ಮಾಡಿ ಪುನಃ ಮಹಿಳೆಯನ್ನು ಗಂಡನ ಮನೆಗೆ ತಂದು ಬಿಟ್ಟಿದ್ದಾರೆ. ಈ ವೇಳೆ ಮತ್ತೆ ಕಿರಿಕ್ ಆಗಿ ಮೃತ ಅನ್ನಪೂರ್ಣ ಅವರ ಕಿರಾತಕ ಪತಿ ನವೀನ್ ಮೂವರನ್ನು ಹತ್ಯೆದು ಪರಾರಿಯಾಗಿದ್ದಾನೆ. ಸೈದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….