ಹರಿತಲೇಖನಿ ದಿನಕ್ಕೊಂದು ಕಥೆ: ಕುಂತಿಗೆ ಸಿಕ್ಕಿದ್ದು ವರವೋ..? ಶಾಪವೂ..?

ಮಹಾಭಾರತದಲ್ಲಿ ದ್ರೌಪದಿಯ ಅತ್ತೆ ಕುಂತಿಯೂ ಪರೋಕ್ಷವಾಗಿ ಬಹುಪತಿತ್ವ ಹೊಂದಿರುತ್ತಾಳೆ. ಅಷ್ಟು ಮಾತ್ರವಲ್ಲ, ಕುಂತಿ, ಮಾದ್ರಿ, ಗಾಂಧಾರಿಯರ ಅತ್ತೆಯಂದಿರಾದ ಅಂಬಿಕಾ, ಅಂಬಾಲಿಕಾ ಕೂಡ ಬಹುಪತಿತ್ವ ಹೊಂದಿರುತ್ತಾರೆ. ಇವರ ಅತ್ತೆ ಸತ್ಯವತಿಯದ್ದೂ ಇದೇ ಕಥೆ! 

ಹೊರಜಗತ್ತಿನ ಮಾತುಕತೆಯಲ್ಲಿ ಐವರು ಪತಿಯರ ಒಡತಿ, ದ್ರೌಪದಿ ಎಂದು ಒಂದೇ ಸಮನೆ ಹೇಳಲಾಗುತ್ತದೆ. ಒಂದಲ್ಲ ಒಂದುರೀತಿಯಲ್ಲಿ ಇನ್ನೂ ಕೆಲವರು ಅದೇ ರೀತಿ ಬದುಕಿದ್ದಾರೆ ಎಂದಾಗ ಆಶ್ಚರ್ಯಗೊಳ್ಳಬಾರದು, ಅದೂ ಸತ್ಯ!

ದ್ರೌಪದಿ ಐವರನ್ನು ವಿದ್ಯುಕ್ತವಾಗಿ ವರಿಸಿದಳು. ಸತ್ಯವತಿ ಸೇರಿ ಮೇಲೆ ಉಲ್ಲೇಖೀಸಿದ ಇತರೆ ಸ್ತ್ರೀಯರೆಲ್ಲ ಸಂತಾನಾರ್ಥವಾಗಿ ಪರಪುರುಷರನ್ನು ಸೇರಿರುತ್ತಾರೆ. ಸತ್ಯವತಿಯದ್ದು ಸ್ವಲ್ಪ ಬೇರೆಯದ್ದೇ ಆದ ಕಥೆ. ಆಕೆ ಪರಾಶರ ಮುನಿಗಳ ಆಸೆಯನ್ನು ಒಪ್ಪಿ ಅವರನ್ನು ಸೇರುತ್ತಾಳೆ.

ಆಕೆಗೇನು ಸಂತಾನದ ಅಪೇಕ್ಷೆ ಇರುವುದಿಲ್ಲ. ಮುಂದೆ ಶಂತನುವನ್ನು ವರಿಸುತ್ತಾಳೆ. ಉಳಿದ ಸ್ತ್ರೀಯರೆಲ್ಲ ಸಂತಾನಕ್ಕಾಗಿ ಮಾತ್ರ ಪರಪುರುಷರನ್ನು ಸೇರಿದ್ದು. ಪರೋಕ್ಷವಾಗಿ ನೋಡಿದಾಗ ಇದೂ ಬಹುಪತಿತ್ವದಂತೆಯೇ ಕಂಡರೂ, ಪರಿಸ್ಥಿತಿಯ ಅನಿವಾರ್ಯತೆಯನ್ನು ಅರ್ಥ ಮಾಡಿಕೊಳ್ಳುವ ಜನರು ಅದನ್ನು ಬಹುಪತಿತ್ವ ಎಂದು ಹೇಳುವುದಿಲ್ಲ ಅಷ್ಟೇ.

ದ್ರೌಪದಿಯ ಅತ್ತೆ, ಮಹಾಭಾರತದ ಮಹಾನಾಯಕ ಕೃಷ್ಣನ ಅತ್ತೆ, ಪಾಂಡವರ ತಾಯಿ, ಪಾಂಡುರಾಜನ ಪತ್ನಿ, ವರಸೆಯಲ್ಲಿ ಮಾದ್ರಿಗೆ ಅಕ್ಕ, ಗಾಂಧಾರಿಗೆ ತಂಗಿಯಾಗುವ ಕುಂತಿಯ ವಿಷಯಕ್ಕೆ ಬರೋಣ. ಆಕೆಯ ಜೀವನ ಬಹಳ ವಿಶಿಷ್ಟವಾದ ಕಥೆಯನ್ನು ಹೊಂದಿದೆ. ಅದನ್ನಿಟ್ಟುಕೊಂಡು ಒಂದು ದೊಡ್ಡ ಪುಸ್ತಕವನ್ನೇ ಬರೆಯಬಹುದು. ಶ್ರೀಕೃಷ್ಣನ ಅಜ್ಜ ಶೂರಸೇನನ ಮಗಳು ಕುಂತಿ. ಅಂದರೆ ಕೃಷ್ಣನ ಅಪ್ಪ ವಸುದೇವನ ಸ್ವಂತ ತಂಗಿ! ಈಕೆಯ ಮೂಲ ಹೆಸರು ಪೃಥಾ. ಈಕೆಯನ್ನು ಮಕ್ಕಳಿಲ್ಲದ ಕುಂತಿಭೋಜನಿಗೆ ಶೂರಸೇನ ಸಾಕಿಕೊಳ್ಳಲು ನೀಡುತ್ತಾನೆ.

ಕುಂತಿಭೋಜನ ಅರಮನೆಗೆ ಒಮ್ಮೆ ದೂರ್ವಾಸ ಮುನಿಗಳು ಬಂದಿರುತ್ತಾರೆ. ಅವರ ಸೇವೆಯನ್ನು ಕುಂತಿ ಬಹಳ ಶ್ರದ್ಧೆಯಿಂದ ಮಾಡುತ್ತಾಳೆ. ಅದನ್ನು ಮೆಚ್ಚಿದ ದೂರ್ವಾಸರು ಆಕೆಗೆ ಐದು ಮಂತ್ರಗಳನ್ನು ನೀಡುತ್ತಾರೆ. ಅದನ್ನು ಜಪಿಸಿದರೆ, ಸಂಬಂಧಪಟ್ಟ ದೇವತೆಗಳು ಆಗಮಿಸಿ ಆಕೆಗೆ ಸಂತಾನವುಂಟಾಗುವಂತೆ ಮಾಡುತ್ತಾರೆನ್ನುವುದೇ ಅದು. ಇದು ಒಂದು ರೀತಿಯಲ್ಲಿ ಆಕೆಗೆ ವರವೂ ಹೌದು, ಶಾಪವೂ ಹೌದು ಎನ್ನುವಂತಾಯಿತು.

ಆಕೆ ವಿವಾಹಕ್ಕೆ ಮುನ್ನ ಸೂರ್ಯನಿಂದ ಕರ್ಣನನ್ನು ಪಡೆಯುತ್ತಾಳೆ. ಆ ಕರ್ಣ ಕುಂತಿಗೆ ಕೊನೆಯ ತನಕ ಕಾಡುತ್ತಾನೆ. ಮಹಾಭಾರತದಲ್ಲಿ ಕುಂತಿ ಒಂದೊಮ್ಮೆ ನಾನೇ ನಿನ್ನ ತಾಯಿ, ನನ್ನ ಮಕ್ಕಳಿಗೆ ಏನೂ ಮಾಡಬೇಡ ಎಂದು ಕರ್ಣನಲ್ಲಿ ಕೇಳಿಕೊಳ್ಳಲು ಹೋಗಬೇಕಾಗುತ್ತದೆ. ಆಗ ಕರ್ಣ; ಅರ್ಜುನನೊಬ್ಬನನ್ನು ಬಿಟ್ಟು, ಉಳಿದವರಿಗೆ ಏನೂ ಮಾಡುವುದಿಲ್ಲ ಎಂದು ಮಾತು ಕೊಡುತ್ತಾನೆ. ವಾಸ್ತವವಾಗಿ ಯುದ್ಧರಂಗದಲ್ಲಿದ್ದಾಗ ಈ ವಚನಗಳೆಲ್ಲ ಹೇಗೆ ಕಾರ್ಯಸಾಧುವೋ ಗೊತ್ತಾಗುವುದಿಲ್ಲ. 

ಪತಿ ಪಾಂಡು ಶಾಪಕ್ಕೊಳಗಾಗಿ ಕುಂತಿಯನ್ನು ಸೇರುವ ಅವಕಾಶವನ್ನೇ ಕಳೆದುಕೊಳ್ಳುತ್ತಾನೆ. ಆಗ ವಂಶವನ್ನು ಮುಂದುವರಿಸುವ ಹೊಣೆ ಕುಂತಿಯ ಮೇಲೇರುತ್ತದೆ. ಈ ಹಂತದಲ್ಲಿ ತನಗೆ ದೂರ್ವಾಸರಿಂದ ಸಿಕ್ಕಿದ ಮಂತ್ರವನ್ನು ಆಕೆ ಬಳಸಿಕೊಂಡು ಐವರ ಜನನಕ್ಕೆ ಕಾರಣವಾಗುತ್ತಾಳೆ.

ಈ ಐವರು ಪುತ್ರರನ್ನು ಆಕೆ ಎಷ್ಟು ಪ್ರೀತಿಯಿಂದ ಸಾಕುತ್ತಾಳೆ ಎಂದರೆ, ಮಾದ್ರಿಯಿಂದ ಹುಟ್ಟಿದ ನಕುಲ-ಸಹದೇವರು ಕೂಡ ಆಕೆಯನ್ನು ಸಂಪೂರ್ಣವಾಗಿ ತಾಯಿಯೆಂದು ಸ್ವೀಕರಿಸುತ್ತಾರೆ. ತನ್ನ ಪ್ರೀತಿಯಿಂದ ಈ ಐವರು ಮಕ್ಕಳಲ್ಲಿ ಒಗ್ಗಟ್ಟು ಮೂಡಿಸುತ್ತಾಳೆ. ಆ ಒಗ್ಗಟ್ಟೇ ಮಹಾಭಾರತ ಯುದ್ಧದಲ್ಲಿ ನಿರ್ಣಯಕವಾಗುವುದು.

ಕೃಪೆ: ಸಾಮಾಜಿಕ ಜಾಲತಾಣ. (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ರಣದೀಪ್ ಸುರ್ಜೇವಾಲ ಕರ್ನಾಟಕದ ಸೂಪರ್ ಸಿಎಂ: ನಿಖಿಲ್ ಕುಮಾರಸ್ವಾಮಿ ಟೀಕೆ

ಬೆಂಗಳೂರು: ಕರ್ನಾಟಕದ ಸೂಪರ್ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ರಣದೀಪ್ ಸುರ್ಜೇವಾಲ (Randeep Surjewala) ಅವರಿಗೆ ಅಭಿನಂದನೆಗಳು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy)

[ccc_my_favorite_select_button post_id="111193"]
ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಿ: ಬಿ.ವೈ.ವಿಜಯೇಂದ್ರ

ಸಿದ್ದರಾಮಯ್ಯನವರು ಮತ್ತು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಪ್ರಶ್ನಿಸಲು ಬಯಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ತಿಳಿಸಿದ್ದಾರೆ.

[ccc_my_favorite_select_button post_id="111198"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಕಾಲ್ತುಳಿತ; ತುರ್ತು ಅಧಿವೇಶನ ಕರೆಯಲು ಆರ್‌ ಅಶೋಕ ಆಗ್ರಹ

RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಾದ ಕಾಲ್ತುಳಿತ ದುರಂತದ ಕುರಿತು ಚರ್ಚಿಸಲು ವಿಧಾನಮಂಡಲದ ತುರ್ತು ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಆರ್‌.ಅಶೋಕ

[ccc_my_favorite_select_button post_id="109276"]
ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಹೆಡ್ ಕಾನ್ಸ್ಟೆಬಲ್ ಆತ್ಮಹತ್ಯೆ..!

ಪೊಲೀಸ್ ಠಾಣೆ ಆವರಣದಲ್ಲಿರುವ ರೆಸ್ಟ್ ರೂಮ್ ನಲ್ಲಿ ಹೆಡ್ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ (Suicide) ಘಟನೆ

[ccc_my_favorite_select_button post_id="111207"]
FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

FROM DODDABALAPURA RAILWAY POLICE: ರೈಲಿಗೆ ಸಿಲುಕಿ ವ್ಯಕ್ತಿ ಸಾವು..

ಸುಮಾರು 35 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೋರ್ವ ರೈಲಿಗೆ ಸಿಲುಕಿ ಸಾವನಪ್ಪಿರುವ (Dies) ಘಟನೆ ದೊಡ್ಡಬಳ್ಳಾಪುರ- ರಾಜಾನುಕುಂಟೆ ನಡುವಿನ ***

[ccc_my_favorite_select_button post_id="111089"]

ಆರೋಗ್ಯ

ಸಿನಿಮಾ

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ನಟಿ ಶೆಫಾಲಿ ಜರಿವಾಲಾ ಅನುಮಾನಾಸ್ಪದ ಸಾವು..!

ಕಾಂಟಾ ಲಾಗಾ ಪ್ರಸಿದ್ಧ ಹಿಂದಿ ಗೀತೆಯ ನಟಿ ಶೆಫಾಲಿ ಜರಿವಾಲಾ (Shefali Jariwala) ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ‌.

[ccc_my_favorite_select_button post_id="110113"]
error: Content is protected !!