ದೊಡ್ಡಬಳ್ಳಾಪುರ, (ಜುಲೈ.21): ಗೆಳತಿ ಪವಿತ್ರ ಗೌಡಗೆ ಅಶ್ಲೀಲ ಸಂದೇಶ ಕಳುಹಿಸಿದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ಚಾಲೆಂಜಿಗ್ ಸ್ಟಾರ್ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದರಿಂದ ದರ್ಶನ್ ಅಭಿಮಾನಿಗಳು ಕುಗ್ಗಿ ಹೋಗಿದ್ದಾರೆ. ಈ ನಡುವೆ ದರ್ಶನ್ ನಟನೆಯ 2005 ರ ಹಿಟ್ ʻಶಾಸ್ತ್ರಿʼ ಸಿನಿಮಾ ಜುಲೈ 12ರಂದು ರೀ-ರಿಲೀಸ್ ಆಗಿದ್ದು ಫ್ಯಾನ್ಸ್ಗೆ ಖುಷಿ ನೀಡಿದೆ.
ಅಂತೆಯೇ ದೊಡ್ಡಬಳ್ಳಾಪುರದ ವೈಭವ್ ಚಿತ್ರಮಂದಿರಲ್ಲಿ ಶಾಸ್ತ್ರಿ ಸಿನಿಮಾ ಪ್ರದರ್ಶನ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಇಂದು ಚಿತ್ರ ಮಂದಿರದ ಬಳಿ ಅಭಿಮಾನಿಗಳು ದರ್ಶನ್ ಭಾವಚಿತ್ರಕ್ಕೆ ಹಾರ, ತೆಂಗಿನ ಕಾಯಿ, ಬೂದಕುಂಬಕಾಯಿ ಹೊಡೆದು ಚಿತ್ರದ ಯಶಸ್ವಿಗೆ ಹಾರೈಸಿದ್ದಾರೆ.
ಈ ವೇಳೆ ಅಭಿಮಾನಿಗಳಾದ ಭರತ್ ಚಕ್ರವರ್ತಿ, ಸಂಪತ್, ಶರತ್ ಕೆಂಚ, ಲೋಕೇಶ್, ವಿನಯ್, ಶಶಿ, ಸಿಎಂ ಗೋಪಾಲಕೃಷ್ಣ ಮತ್ತಿತರರಿದ್ದರು.
ಪಿ.ಎನ್ ಸತ್ಯ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದ ರೌಡಿಸಂ ಸಿನಿಮಾ ಇದು. ದರ್ಶನ್ ಜೋಡಿಯಾಗಿ ಮಾನ್ಯ ನಟಿಸಿದ್ದರು. ಆಪ್ತ ಅಣಜಿ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಸಾಧು ಕೋಕಿಲ ಸಂಗೀತ ಸಂಯೋಜನೆ ಮಾಡಿದ್ದು, 2005ರಲ್ಲಿ ಈ ಸಿನಿಮಾ ತೆರೆಕಂಡಿತ್ತು.
ವೈದ್ಯಕೀಯ ವಿದ್ಯಾರ್ಥಿ ನಂತರ ಹೇಗೆ ಗ್ಯಾಂಗ್ ಸ್ಟರ್ ಆಗುತ್ತಾನೆ ಎಂಬುದು ಚಿತ್ರದ ಕಥೆಯಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….