ಬೆಂಗಳೂರು, (ಜುಲೈ.23); ಕೇಂದ್ರದ ಬಿಜೆಪಿಯವರು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಹೆಸರಿಗೆ ಕಳಂಕವನ್ನು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದ್ದಾರೆ.
ಇಂದು ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಗರಣದಲ್ಲಿ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ,ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಅವರನ್ನು ತನಿಖೆಗೆ ಕರೆದು, 17 ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಹೇಳಿದ್ದಾರೆ. ಇದರಲ್ಲಿ 14 ಪ್ರಶ್ನೆಗೆ ಉತ್ತರಿಸಿರುವ ಕಲ್ಲೇಶ್ ಉಳಿದ ಮೂರು ಪ್ರಶ್ನೆಗೆ ಇತರೆ ಅಧಿಕಾರಿಗಳ ನೆರವನ್ನು ಪಡೆದು ಉತ್ತರ ನೀಡುವುದಾಗಿ ಹೇಳಿದ್ದಾರೆ.
ಅವಾಗ ಮನೋಜ್ ಮಿತ್ತಲ್, ಮುರುಳಿ ಕಣ್ಣನ್ ಎಂಬ ಇಡಿ ಅಧಿಕಾರಿಗಳು ಇರ್ತಾರೆ. ಈ ಸಂದರ್ಭದಲ್ಲಿ ಮನೋಜ್ ಮಿತ್ತಲ್ ಹೇಳ್ತಾರೆ ಸಿಎಂ ಹೆಸರು ಹೇಳಬೇಕು, ಸಿಎಂಯಿಂದ ಒತ್ತಡವಿದೆ ಎಂದು ಹೇಳಬೇಕು, ನಮಗೆ ಬರೆದು ಕೊಡಬೇಕು, ಬರೆದುಕೊಡಲಿಲ್ಲ ಅಂದರೆ ಎರಡು ವರ್ಷ ಬೇಲ್ ಸಿಗದಂತೆ ಮಾಡ್ತೆವೆ, ನಿನಗೆ ಏಳು ವರ್ಷ ಶಿಕ್ಷೆ ಆಗುವಂತೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.
ಆಗ ಕಲ್ಲೇಶ್ ಅವರು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸುತ್ತಾರೆ. ಇದು FIR ಕಾಪಿಯಲ್ಲಿ ಉಲ್ಲೇಖವಾಗಿರೋದು.
ನಾನು ಸೆಂಟ್ರಲ್ ಬಿಜೆಪಿ ನಾಯಕರಿಗೆ ಒಂದು ಪ್ರಶ್ನೆ ಮಾಡ್ತಿನಿ, ಒಬ್ಬ ಅಹಿಂದ ನಾಯಕ ಯಶಸ್ವಿ ಮುಖ್ಯಮಂತ್ರಿ ಆಗೋದು ನಿಮಗೆ ಇಷ್ಟ ಇಲ್ವಾ…?, ಭ್ರಷ್ಟಾಚಾರ ಎನ್ನುವ ಪದ ಸಿದ್ದರಾಮಯ್ಯ ಅವರ ಡಿಕ್ಸ್ಟನೆರಿಲೇ ಇಲ್ಲ. ಅಂತಹ ಪ್ರಾಮಾಣಿಕ ವ್ಯಕ್ತಿಗೆ ಕಳಂಕ ತರಲು ಬಿಜೆಪಿಯವರು ಪ್ರಯತ್ನ ಮಾಡುತ್ತಿದ್ದಾರೆ.
ನಾನು ಬಿಜೆಪಿಯವರಿಗೆ ಹೇಳ್ತಿನಿ, ನಿಮಗೆ ನೇರವಾಗಿ ಹೋರಾಟ ಮಾಡೋ ದಮ್ಮು ತಾಕತ್ತು ಇಲ್ಲ, ವಿಚಾರವಾಗಿ ಹೋರಾಟ ಮಾಡಲು ನೀವ್ ಯಾರು ರೆಡಿಯಿಲ್ಲ. ವಯಕ್ತಿಕ ತೇಜೋವಧೆಗೆ ಹಿಳಿತೀರಾ, ಈ ರೀತಿ ಕಳಂಕತರಲು ಪ್ರಯತ್ನ ಪಡ್ತಿರಾ.
ಇಡಿನಾ, ಐಟಿನಾ ದುರ್ಬಳಕೆ ಮಾಡ್ಕೋತಾ ಇದ್ದೀರಾ. 175 ಇಡಿ ಕೇಸಲ್ಲಿ, 125 ಕೇಸು ಕಾಂಗ್ರೆಸ್ ಅವರ ಮೇಲೆ ಇದೆ. ಸೆಂಟ್ರಲ್ ಬಿಜೆಪಿಗೆ ಚಾಲೆಂಜ್ ಹಾಕ್ತಿನಿ ನಿಮಗೆ ಸಿದ್ದರಾಮಯ್ಯ ಅವರ ಒಂದು ಕೂದಲು ಟಚ್ ಮಾಡಲು ತಾಕತ್ತಿಲ್ಲ. ಮಾನ ಮರ್ಯಾದೆ ಇದ್ರೆ, ನಮ್ ಜೊತೆ ಸ್ಟ್ರೈಟಾಗಿ ಫೈಟ್ ಮಾಡಿ ಎಂದರು. (ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….