ನವದೆಹಲಿ, (ಜುಲೈ 23): ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಭಾಷಣ ಮಾಡುವ ವೇಳೆ ಪ್ರಧಾನಿ ಮೋದಿ ಅವರು ಗದ್ಗದಿತರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸತತ ಹತ್ತು ವರ್ಷಗಳ ದೇಶವನ್ನಾಳಿದ ಮೋದಿ ಅವರಿಗೆ, ಮೂರನೇ ಅವಧಿಯಲ್ಲಿ ವಿರೋಧ ಪಕ್ಷಗಳ ಆಕ್ರಮಣಕಾರಿ ವಿಷಯ ಮಂಡನೆ, ನೀಟ್ ಹಗರಣ, ಭಯೋತ್ಪಾದಕ ದಾಳಿ, ಅಗ್ನಿ ವಿರ್ ವಿಚಾರ, ತನಿಖಾ ಸಂಸ್ಥೆಗಳ ದುರ್ಬಳಕೆ ಕುರಿತು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿರುವುದು ಮೋದಿ ಅವರ ಭಾಷಣದಲ್ಲಿ ಕಂಡಬಂದಿದೆ.
ಮೋದಿ ಭಾಷಣ; ಸಂಸತ್ತು ಅಂದರೆ ಪಕ್ಷದ ಸ್ವಾರ್ಥಕ್ಕಾಗಿ ಅಲ್ಲ. ದೇಶ ಏಳೆಗಾಗಿ ಇದೆ’ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೆಲವು ಪಕ್ಷಗಳು ತಮ್ಮ ರಾಜಕೀಯ ವೈಫಲ್ಯಗಳನ್ನು ಮರೆಮಾಚಲು ‘ನಕಾರಾತ್ಮಕ ರಾಜಕೀಯ’ ದಲ್ಲಿ ತೊಡಗಿವೆ ಮತ್ತು ‘ಸಂಸತ್ತನ್ನು ದುರ್ಬಳಕೆ’ ಮಾಡಿಕೊಂಡಿವೆ ಎಂದು ಗದ್ಗದಿತರಾದ ಘಟನೆ ನಡೆದಿದೆ.
ಸೋಮವಾರ ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ‘ಸುಮಾರು 60 ವರ್ಷಗಳ ನಂತರ ಸರ್ಕಾರವು 3ನೇ ಬಾರಿಗೆ ಮರಳಿ ಬಂದು 3ನೇ ಅವಧಿಯ ಮೊದಲ ಬಜೆಟ್ ಅನ್ನು ಮಂಡಿಸುವ ಸೌಭಾಗ್ಯವನ್ನು ಪಡೆದಿರುವುದು ಹೆಮ್ಮೆಯ ವಿಷಯ. ಮಂಗಳವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ ಮುಂದಿನ 5 ವರ್ಷಗಳ ಪಯಣಕ್ಕೆ ದಿಕ್ಕೂಚಿಯಾಗಲಿದೆ ಮತ್ತು 2047 ರಲ್ಲಿ ‘ವಿಕಸಿತ್ ಭಾರತ್’ ಕನಸನ್ನು ನನಸಾಗಿಸಲು ಅಡಿ ಪಾಯ ಹಾಕುತ್ತದೆ’ ಎಂದರು.
‘ಜನವರಿಯಿಂದ ನಾವು ಚುನಾವಣಾ ಕದನವನ್ನು ನಡೆಸಿದ್ದೇವೆ. ಆದರೆ ಲೋಕಸಭೆ ಚುನಾವಣೆಯಲ್ಲಿ ಜನರು ತಮ್ಮ ತೀರ್ಪನ್ನು ನೀಡಿದ್ದಾರೆ ಮತ್ತು ಈಗ ಎಲ್ಲಾ ರಾಜಕೀಯ ಪಕ್ಷಗಳು ಮುಂದಿನ 5 ವರ್ಷಗಳ ಕಾಲ ದೇಶಕ್ಕಾಗಿ ಒಟ್ಟಾಗಿ ಹೋರಾಡಬೇಕು. ಆದರೆ ಈ ಸಲವೂ 140 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸಲು ಜನಾದೇಶ ಪಡೆದಿರುವ ಸರ್ಕಾರದ ಧ್ವನಿಯನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ಪ್ರಯತ್ನ ನಡೆದಿದೆ. ದೇಶಕ್ಕಾಗಿ 24 ಗಂಟೆ ಪ್ರಧಾನಿಯ ಧ್ವನಿಯನ್ನು ಕಸಿಯುವ ಪ್ರಯತ್ನ ಮಾಡ್ತಾರೆ. ಕನಿಷ್ಠ ಅದರ ಬಗ್ಗೆ ಅವರಿಗೆ ಪಶ್ಚಾತಾಪಕೂಎ ಇಲ್ಲ’ ಎಂದು ಗದ್ಗದಿತರಾದರು.
‘2014ರ ನಂತರ ಕೆಲವು ಸಂಸದರು ಋಣಾತ್ಮಕ ರಾಜಕೀಯ ಮಾಡಿದರು. ಕೆಲವು ಪಕ್ಷಗಳು ತಮ್ಮ ರಾಜಕೀಯ ವೈಫಲ್ಯಗಳನ್ನು ಮರೆಮಾಚಲು ಸಂಸತ್ ಇನ್ನು ದುರುಪಯೋಗಪಡಿಸಿಕೊಂಡವು. ಆದರೆ ಈ ಸಲ ಸಂಸತ್ತಿನಲ್ಲಿ ಮಾತನಾಡಲು ಮೊದಲ ಬಾರಿಗೆ ಸಂಸದರಿಗೆ ಅವಕಾಶ ನೀಡಬೇಕು ಮತ್ತು ಅವರಿಗೆ ಅವಕಾಶ ನೀಡಬೇಕು’ ಎಂದು ಮೋದಿ ಎಲ್ಲಾ ಪಕ್ಷಗಳನ್ನು ಒತ್ತಾಯಿಸಿದರು.
‘ವಿರೋಧ ಅಭಿಪ್ರಾಯಗಳಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಕಾರಾತ್ಮಕ ದೃಷ್ಟಿಕೋನಗಳೇ ತಪ್ಪು. ದೇಶಕ್ಕೆ ನಕಾರಾತ್ಮಕತೆಯ ಅಗತ್ಯವಿಲ್ಲ. ಜನರು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದು ದೇಶಕ್ಕಾಗಿ, ಈ ಸಂಸತ್ತು ‘ದಳ (ಪಕ್ಷ)’ ಗಾಗಿ ಅಲ್ಲ, ‘ದೇಶ’ಕ್ಕಾಗಿ, ಈ ಸಂಸತ್ತು ಸಂಸದರಿಗೆ ಸೀಮಿತವಾಗಿಲ್ಲ, ಆದರೆ ಇದು ದೇಶದ 140 ಕೋಟಿ ಜನರಿಗೆ ಸಲ್ಲುವ ಸ್ಥಾನ. ಎಲ್ಲಾ ಸಂಸದರು ಚರ್ಚೆಗೆ ಕೊಡುಗೆ ನೀಡುತ್ತಾರೆ’ ಎಂದು ಮೋದಿ ಆಶಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….