ನವದೆಹಲಿ, (ಜುಲೈ.23): ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮೂರನೇ ಅವಧಿಯ ಮೊದಲ ಕೇಂದ್ರ ಬಜೆಟ್ ಅನ್ನು ಶ್ಲಾಘಿಸಿದ್ದಾರೆ.
ಬಜೆಟ್ ಕುರಿತು ವಿಡಿಯೋ ಸಂದೇಶ ರವಾನಿಸಿದ ಪ್ರಧಾನಿ ಮೋದಿ, ಈ ಬಜೆಟ್ ಸಮಾಜದ ಪ್ರತಿಯೊಂದು ವಿಭಾಗವನ್ನು ಬಲಪಡಿಸುತ್ತದೆ. ಇದು ದೇಶದ ಬಡವರು, ಹಳ್ಳಿಗಳು ಮತ್ತು ರೈತರನ್ನು ಸಮೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುತ್ತದೆ ಎಂದು ಹೊಗಳಿದ್ದಾರೆ.
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ. ಈ ಬಜೆಟ್ ಹೊಸ ಮಧ್ಯಮ ವರ್ಗದ ಸಬಲೀಕರಣಕ್ಕಾಗಿದೆ. ಅಲ್ಲದೇ ಯುವಕರಿಗೆ ಅನಿಯಮಿತ ಉದ್ಯೋಗ ಅವಕಾಶಗಳು ಸಿಗಲಿವೆ. ಈ ಬಜೆಟ್ನಿಂದ ಶಿಕ್ಷಣ ಮತ್ತು ಕೌಶಲ್ಯಕ್ಕೆ ಹೊಸ ಪ್ರಮಾಣ ಸಿಗಲಿದೆ.
ಮಧ್ಯಮ ವರ್ಗಕ್ಕೆ ಶಕ್ತಿಯನ್ನು ನೀಡುತ್ತದೆ. ಹಾಗೂ ಮಹಿಳೆಯರು, ಸಣ್ಣ ಉದ್ಯಮಿಗಳು, ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (MSME) ಗಳಿಗೆ ಸಹಾಯ ಮಾಡುತ್ತದೆ ಎಂದು ಮೋದಿ ಹೇಳಿದರು.
ಬಜೆಟ್ ಶಿಕ್ಷಣ ಮತ್ತು ಕೌಶಲ್ಯಕ್ಕೆ ಹೊಸ ಪ್ರಮಾಣವನ್ನು ಒದಗಿಸುತ್ತದೆ. ಮಧ್ಯಮ ವರ್ಗದವರಿಗೆ ಹೊಸ ಶಕ್ತಿ ನೀಡಲಿದೆ. ಆದಿವಾಸಿಗಳು, ದಲಿತರು ಮತ್ತು ಹಿಂದುಳಿದವರನ್ನು ಬಲಪಡಿಸುವ ಉದ್ದೇಶದಿಂದ ಬಲವಾದ ಯೋಜನೆಗಳನ್ನು ಹೊಂದಿದೆ. ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಪ್ರಧಾನಿಯವರು ಸರ್ಕಾರ ಘೋಷಿಸಿದ ‘ಉದ್ಯೋಗ ಲಿಂಕ್ಸ್ ಇನ್ಸೆಂಟಿವ್ ಯೋಜನೆ’ಯನ್ನು ಉಲ್ಲೇಖಿಸಿದರು. ಇದು ಅನೇಕ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಈ ಯೋಜನೆಯಡಿ ಹೊಸದಾಗಿ ಉದ್ಯೋಗಕ್ಕೆ ಸೇರುವವರಿಗೆ ಸರ್ಕಾರ ಮೊದಲ ಸಂಬಳ ನೀಡುತ್ತದೆ. ಹಳ್ಳಿಗಳ ಯುವಕರು ಅಪ್ರೆಂಟಿಸ್ಶಿಪ್ ಕಾರ್ಯಕ್ರಮದ ಅಡಿಯಲ್ಲಿ ದೇಶದ ಉನ್ನತ ಕಂಪನಿಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ವಿತ್ತಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಲೋಕಸಭೆಯಲ್ಲಿ 2024-25 ನೇ ಸಾಲಿನ ಬಜೆಟ್ ಮಂಡಿಸಿದರು.
ಈ ವೇಳೆ ಅವರು ಉದ್ಯೋಗದಿಂದ ಹಿಡಿದು ಯುವಕರಿಗೆ ಹಣಕಾಸು ವರ್ಷದಲ್ಲಿ ಸರ್ಕಾರದ ಆದ್ಯತೆಗಳವರೆಗೆ ಹಲವಾರು ಘೋಷಣೆಗಳನ್ನು ಮಾಡಿದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….