ಪ್ಯಾರೀಸ್, (ಆಗಸ್ಟ್.04): ಒಲಂಪಿಕ್ಸ್ ನಲ್ಲಿ ಚಿನ್ನ ಪದಕ ಗೆದ್ದ ಖುಷಿಗೆ ಸಹ ಆಟಗಾರ್ತಿಗೆ ಚೀನಾದ ಬ್ಯಾಡ್ಮಿಂಟನ್ ಆಟಗಾರ ಲವ್ (ಮದುವೆ) ಪ್ರಪೋಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಗಸ್ಟ್ 2 ರಂದು ನಡೆದ ಮಿಶ್ರ ಡಬಲ್ಸ್ನಲ್ಲಿ ಚೀನಾದ ಹುವಾಂಗ್ ಯಾ ಕಿಯೊಂಗ್ ಹಾಗೂ ಯಿಂಗ್ ಸಿವಿ ಜೋಡಿ, ದಕ್ಷಿಣ ಕೊರಿಯಾದ ಕಿಮ್ ವಾನ್ ಹೊ ಮತ್ತು ಜಿಯೋಂಗ್ ನಾ ಯುನ್ ಜೋಡಿಯನ್ನು ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು.
ಈ ಪಂದ್ಯದಲ್ಲಿ ಚೀನಾ ಜೋಡಿ ಪ್ರಾಬಲ್ಯ ಮೆರೆದಿದ್ದು, ದಕ್ಷಿಣ ಕೊರಿಯಾ ಜೋಡಿಯನ್ನು 41 ನಿಮಿಷಗಳಲ್ಲಿ 21-8, 21-11 ಅಂತರದಿಂದ ಸೋಲಿಸಿತು. ಮಿಶ್ರ ಡಬಲ್ಸ್ ಈವೆಂಟ್ ಮುಗಿದ ನಂತರ, ಪದಕ ಪ್ರದಾನ ಸಮಾರಂಭದ ಬಳಿಕ ಈ ಅವಿಸ್ಮರಣೀಯ ಘಟನೆ ನಡೆದಿದೆ.
ಪದಕ ಪ್ರದಾನ ಸಮಾರಂಭದ ಬಳಿಕ ವೇದಿಕೆಯಿಂದ ಹೊರಬಂದ ಹುವಾಂಗ್ ಯಾ ಕಿಯೊಂಗ್ ಅವರಿಗೆ ಚೀನಾದ ಮತ್ತೊಬ್ಬ ಬ್ಯಾಡ್ಮಿಂಟನ್ ಆಟಗಾರ ಲಿ ಯುಚೆನ್ ತಮ್ಮ ಸಹ ಆಟಗಾರ್ತಿಗೆ ಮಂಡಿಯೂರಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.
ಇದನ್ನು ನೋಡಿದ ಹುವಾಂಗ್ ಯಾ ಕಿಯೊಂಗ್ ಕೆಲ ಸಮಯ ಅಶ್ಚರ್ಯಚಕಿತರಾದರು. ನಂತರ ಯುಚೆನ್ ಅವರ ಮದುವೆ ಪ್ರಸ್ತಾಪಕ್ಕೆ ಸಮ್ಮತಿಯನ್ನು ಸೂಚಿಸಿದರು.
ಇದೇ ವೇಳೆ ಯುಚೆನ್, ಹುವಾಂಗ್ ಅವರಿಗೆ ಉಂಗುರವನ್ನು ತೊಡಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಸಂಭ್ರಮದಿಂದ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….