ನಮ್ಮ ಪ್ರಧಾನಿ ನೀಲಕಂಠ ಇದ್ದ ಹಾಗೆ; ಮೋದಿ ಅವರನ್ನು ಬಣ್ಣಿಸಿದ ಬಸವರಾಜ ಬೊಮ್ಮಾಯಿ

ನವದೆಹಲಿ, (ಆಗಸ್ಟ್.06); ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯನ್ನು ಎಷ್ಟೇ ಟೀಕೆ ಮಾಡಿದರೂ ಅವರು ನೀಲಕಂಠನಂತೆ ವಿಷ ನುಂಗಿ ಅಮೃತ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಲೋಕಸಭೆಯಲ್ಲಿ ಇಂದು ಕೇಂದ್ರದ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಹತ್ತು ವರ್ಷದಲ್ಲಿ ಈ ದೇಶದ ಭವಿಷ್ಯವನ್ನು ಬದಲಾಯಿಸಿದ್ದಾರೆ. ನರೇಂದ್ರ ಮೋದಿಯವರು ಇಲ್ಲದಿದ್ದರೆ ಈ ದೇಶದ ಪರಿಸ್ಥಿತಿ ಏನಾಗುತ್ತಿತ್ತು ಯೋಚಿಸಿ, ಅನೇಕರು ಬಡತನ, ರೈತರು ಹಾಗೂ ಮಹಿಳೆಯರ ಬಗ್ಗೆ ಮಾತನಾಡುವುದು ಫ್ಯಾಷನ್ ಆಗಿದೆ. ನಾವು ರೈತರ ಹೆಸರನ್ನು ಮೇಲಿಂದ ಮೇಲೆ ತೆಗೆದುಕೊಳ್ಳುತ್ತೇವೆ.

ರೈತ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಆದರೆ, ಎಲ್ಲ ರಾಜಕೀಯ ಪಕ್ಷಗಳು ರೈತನಿಗೆ ಸೇರಿವೆ. ರೈತನ ಬದುಕು ಯಾವಾಗಲೂ ಅನಿಶ್ಚಿತತೆಯಿಂದ ಕೂಡಿರುತ್ತದೆ. ಕಳೆದ 75 ವರ್ಷಗಳಿಂದ ಇದು ನಿರಂತರವಾಗಿ ನಡೆಯುತ್ತಿದೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅವರ ಸಮಸ್ಯೆಗಳಿಗೆ ಪರಿಹಾರದ ಕುರಿತು ಯಾರೂ ಮಾತನಾಡುವುದಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ನಿರಂತರವಾಗಿ ಮಾತನಾಡುತ್ತಲೇ ಇವೆ. ಆದರೆ, ಅವರ ಸಮಸ್ಯೆಗಳಿಗೆ ಪರಿಹಾರ ನೀಡುವ ಕುರಿತು ಮಾತನಾಡುವುದಿಲ್ಲ. ಹೀಗಾಗಿ ರೈತರ ಸಮಸ್ಯೆಗಳು ಹಾಗೆಯೇ ಉಳಿದುಕೊಂಡಿವೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಬಡತನವನ್ನು ದೇಶದ ವೈರಿ ಎಂದು ಪರಿಗಣಿಸಿದರು. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ದೇಶಕ್ಕೆ ಬಿಟೀಷರು ಒಬ್ಬರೇ ವೈರಿಗಳಿದ್ದರು. ಆದರೆ, ಸ್ವಾತಂತ್ರ್ಯಾ ನಂತರ ಬಡತನ, ಅನಕ್ಷರತೆ, ನಿರುದ್ಯೋಗ, ಅನಾರೋಗ್ಯ ನಮ್ಮ ವೈರಿಗಳಾಗಿವೆ.

ನಾವು 140 ಕೋಟಿ ಜನರಿದ್ದೇವೆ. ಆರ್ಥಿಕತೆಯಲ್ಲಿ ಯಾವುದೇ ಮ್ಯಾಜಿಕ್ ನಡೆಯುವುದಿಲ್ಲ. ಇದರಲ್ಲಿ ಫಲಿತಾಂಶ ಮಾತ್ರ. ಸಂಸದೆ ಮಹುವಾ ಮೊತ್ತಾ ಅವರು ಪ್ರತಿ ಹಣಕಾಸು ಮಂತ್ರಿ ವಿವಿಧ ಕ್ಷೇತ್ರಗಳಲ್ಲಿ ಹಂಚಿಕೆ ಮಾಡಿರುವ ಹಣದ ಹಂಚಿಕೆ ಬಗ್ಗೆ ಮಾತನಾಡಿ ಅವರು ಹಣದುಬ್ಬರದ ಬಗ್ಗೆ ಮಾತನಾಡುತ್ತಿದ್ದರು. ನಾನು ಕೇಳುತ್ತೇನೆ ಇದುವರೆಗೂ ಯಾವ ಬಜೆಟ್‌ ಹಣದುಬ್ಬರದ ಆಧಾರದಲ್ಲಿ ಹಂಚಿಕೆ ಮಾಡಿದೆ. ಅದು ಸಾಧ್ಯವೇ ? ನಮ್ಮ ಆದಾಯದಲ್ಲಿ ಅವಕಾಶ ಇದೆಯಾ ? ನೀವು ವಾಸ್ತವ ಸಮಸ್ಯೆಗಳಿಂದ ದೂರ ಓಡಿ ಹೋಗುತ್ತಿದ್ದೀರಿ, ನಾವು ಸಮಸ್ಯೆಗಳನ್ನು ಅರಿತು ಅವುಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ಪಯತ್ನ ಮಾಡಬೇಕು ಹೊರತು ರಾಜಕೀಯ ಮಾರ್ಗದಿಂದ ಅಲ್ಲ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಜನಸಂಖ್ಯೆಯನ್ನು ಪ್ರಜಾಪ್ರಭುತ್ವದ ಆಸ್ತಿಯನ್ನಾಗಿ ಮಾಡಿದರು. ದೇಶದ ಜನರಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಸಂಪನ್ಮೂಲವನ್ನಾಗಿ ಬಳಸಿಕೊಂಡರು. ಜಿಎಸ್‌ಟಿ, ಬ್ಯಾಂಕಿಂಗ್, ಉತ್ಪಾದನಾ ವಲಯದಲ್ಲಿ ಸಾಕಷ್ಟು ಪರಿವರ್ತನೆ ಮಾಡಿದ್ದಾರೆ.

ಜಿಎಸ್‌ಟಿ ಜಾರಿಗೆ ತಂದವರೇ ಈಗ ಜಿಎಸ್‌ಟಿ ಬಗ್ಗೆ ಮಾತನಾಡುತ್ತಿದ್ದಾರೆ. 2012-2017 ರ ವರಗೆ ಜಿಎಸ್‌ಟಿ 38 ಲಕ್ಷ 52 ಸಾವಿರ ಕೋಟಿ ಇತ್ತು. 2017ರಿಂದ 2022ರ ವರೆಗೆ 57.05 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹವಾಗಿದೆ. ಆದಾಯ ಬಂದರೆ ಅಭಿವೃದ್ಧಿ ಮಾಡಲು ಸಾಧ್ಯವಾಗಲಿದೆ. ಕಳೆದ ತಿಂಗಳ ಜಿಎಸ್‌ಟಿ ಸಂಗ್ರಹ 1.8 ಲಕ್ಷವಾಗಿದೆ. ನರೇಂದ ಮೋದಿಯವರ ಪರಿಜ್ಞಾನದಿಂದ ಜಿಎಸ್‌ಟಿ ಸಂಗ್ರಹ ಪ್ರಮಾಣ ಹೆಚ್ಚಾಗಿದೆ ಎಂದರು.

ತಮಿಳು ಸಾಹಿತಿ ತಿರುವಳ್ಳುವರ್ ಅವರ ಹೇಳಿಕೆಯಂತೆ ಇನ್ ಬಿಟ್ರಿನ್ ಕನ್ಸೆಪ್ಟ್ ಆಂಡ್ ಕ್ರಿಯೇಷನ್ ಲೈವ್ಸ್  ಶ್ಯಾಡೊ ಅನ್ನುವ ಅವರ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ಜಿಎಸ್‌ಟಿ ಬಗ್ಗೆ ಇದ್ದ ನೆರಳನ್ನು ತೆಗೆದು ಹಾಕಿದರು. ಇದಕ್ಕಾಗಿ ದೇಶ ಅವರನ್ನು ಸ್ಮರಿಸಲಿದೆ. ಡಿಜಿಟಲ್ ಆರ್ಥಿಕತೆಯಿಂದ ಮಧ್ಯವರ್ತಿಗಳ ಹಾವಳಿ ಕಡಿಮೆಯಾಗಿದೆ. ಇದರಿಂದ 3.8 ಲಕ್ಷ ಕೋಟಿ ರೂ. ನೇರ ಹಣ ವರ್ಗಾವಣೆಯಿಂದ ಉಳಿತಾಯವಾಗಿದೆ. ನಾವು ಏನಾದರೂ ಆಗಲಿ ಎಂದು ಕಾಯುವುದಿಲ್ಲ. ನಾವು ಡೆಸ್ಟಿನಿಗಾಗಿ ಕಾಯುವುದಿಲ್ಲ. ನಾವು ಎಲ್ಲ ಮುಂದುವರೆದ ದೇಶಗಳೊಂದಿಗೆ ಸ್ಪರ್ಧೆ ಮಾಡುತ್ತಿದ್ದೇವೆ. ಅಷ್ಟೇ ಅಲ್ಲ. ನಾವು ಸಮಯದ ಜೊತೆಗೂ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ಹೇಳಿದರು.

ತೆರಿಗೆಯಲ್ಲಿ ಸುಧಾರಣೆ; ತೆರಿಗೆ ನಾಲ್ಕು ಸ್ತಂಭಗಳನ್ನು ಹೊಂದಿದೆ. ತೆರಿಗೆಗೆ ಕಾರಣ ಇರಬೇಕು. ಅವು ಎಲ್ಲರಿಗೂ ಒಪ್ಪಿತವಾಗಿರಬೇಕು. ಮತ್ತು ಅಕೌಂಟೇಬಲ್ ಆಗಿರುವುದರಿಂದ ನಮ್ಮ ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ತೆರಿಗೆದಾರರ ಸಂಖ್ಯೆ ಹೆಚ್ಚಳ ಮಾಡುವ ಮೂಲಕ ದೇಶದ ಆದಾಯ ಹೆಚ್ಚಳ ಮಾಡಲಾಗುತ್ತಿದೆ. ದೇಶದ ಜನರು ಕೇವಲ ಒಬ್ಬರು ಇಬ್ಬರು ಯಶಸ್ವಿ ಸಾಧಕ ವ್ಯಕ್ತಿಗಳ ಸಾಧನೆಗಳ ಬಗ್ಗೆ ರಾಜಕೀಯ ವಿಷಯವಾಗಿ ಮಾತನಾಡುತ್ತಾರೆ. ಆದರೆ, ದೇಶದಲ್ಲಿ 2014ರಲ್ಲಿ 3.6 ಕೋಟಿ ಜನರು ತೆರಿಗೆ ಕಟ್ಟಿದ್ದರು. 2023ಯಲ್ಲಿ 8.18 ಕೋಟಿ ಜನರು ತೆರಿಗೆ ಕಟ್ಟಿದ್ದಾರೆ. ಪ್ರತಿ ವರ್ಷ ಶೇ 9 ರಷ್ಟು ಹೆಚ್ಚಳವಾಗುತ್ತಿದೆ. 1 ಕೋಟಿಗಿಂತ ಹೆಚ್ಚು ಆದಾಯ ಗಳಿಸುವವರು 48.417 ಜನರು ಮಾತ್ರ ತೆರಿಗೆ ಕಟ್ಟುತ್ತಿದ್ದರು. ಈಗ ಸುಮಾರು 2 ಲಕ್ಷ 16ಸಾವಿರ ಜನರು 1 ಕೋಟಿಗಿಂತ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.

ನಾವು ಒಂದು ಕೋಟಿಗಿಂತ ಹೆಚ್ಚು ಆದಾಯ ಗಳಿಸುವವರನ್ನು ಹುಟ್ಟು ಹಾಕುತ್ತಿದ್ದೇವೆ. ಕೇವಲ ಒಬ್ಬಿಬ್ಬರು ಈ ದೇಶವನ್ನು ನಡೆಸುತ್ತಿಲ್ಲ. ಈ ದೇಶದ ನೀತಿ ನಿಯಮಗಳನ್ನು ಪಾಲಿಸುವವರು ಈ ದೇಶವನ್ನು ನಡೆಸುತ್ತಿದ್ದಾರೆ. ಸಾಮಾನ್ಯ ಜನರ ತಲಾ ಆದಾಯ 2013-14 ರಲ್ಲಿ 89ಸಾವಿರ ಇತ್ತ. 2022-23 ರಲ್ಲಿ 1,94,879 ರೂ. ಆಗಿದೆ. ಇದು ಹತ್ತು ವರ್ಷದಲ್ಲಿ ಡಬಲ್ ಆಗಿದೆ. ಇದಕ್ಕೆ ಕಾರಣ ತೆರಿಗೆ ನೀತಿಗಳು ಕಾರಣ ಎಂದು ಹೇಳಿದರು.

ವಿಕಸಿತ ಭಾರತಕ್ಕಾಗಿ ನಿರ್ಣಯ: ಯಾವುದೇ ವ್ಯವಸ್ಥೆ ಪರಿಪೂರ್ಣ ಅಲ್ಲ. ಆದರೆ, ನಾವು ಯಾವ ದಾರಿಯಲ್ಲಿ ಸಾಗುತ್ತಿದ್ದೇವೆ ಎನ್ನುವುದು ಮುಖ್ಯ. ನಾವು 2047 ಕೈ ದೇಶದ ಅಭಿವೃದ್ಧಿಯನ್ನು ಕಾಣುತ್ತೇವೆ. ನಮ್ಮ ಪೂರ್ವಜರ ಕಠಿಣ ಶ್ರಮದ ಫಲವಾಗಿ ನಾವು ಈಗ ಫಲ ಉನ್ನುತ್ತಿದ್ದೇವೆ.

ಈಗ ನಮ್ಮ ಪ್ರಧಾನಿಯವರು ಆತ್ಮನಿರ್ಭರ ಭಾರತ ಪರಿಕಲ್ಪನೆಯಿಂದ 2047 ರ ವರೆಗೆ ವಿಕಸಿತ ಭಾರತಕ್ಕೆ ಬಲಿಷ್ಠ ಬುನಾದಿ ಹಾಕಿದ್ದಾರೆ. ನಾವು ಇರುತ್ತೇವೋ ಇಲ್ಲವೋ ಈ ದೇಶವಂತೂ ಇರುತ್ತದೆ. ನಮ್ಮ ಮಕ್ಕಳು ಇರುತ್ತಾರೆ. ಅವರಿಗಾಗಿ ನಾವು ಯಾವ ಉದಾಹರಣೆ ಬಿಟ್ಟು ಹೋಗುತ್ತೇವೆ. ನಮ್ಮ ಪ್ರತಿ ನಿರ್ಣಯವೂ ವಿಕಸಿತ ಭಾರತಕ್ಕಾಗಿ ಇರುತ್ತದೆ. ಅದನ್ನು ಮಾಡಿತೋರಿಸುತ್ತೇವೆ. ನೀವು ಇದ್ದರೂ ಇಲ್ಲದಿದ್ದರೂ ನಾವು ಮಾಡಿ ತೋರಿಸುತ್ತೇವೆ ಎಂದು ಹೇಳಿದರು.

ಆದಾಯ ತೆರಿಗೆಯಲ್ಲಿ ಬದಲಾವಣೆ: ಆದಾಯ ತೆರಿಗೆಯಲ್ಲಿ ಹಂತ ಹಂತವಾಗಿ ಬದಲಾವಣೆಯಾಗುತ್ತಿದೆ. ಸಂಬಳ ಪಡೆಯುವ ಸ್ಟ್ಯಾಂಡರ್ಡ್ ಡಿಡಕ್ಷನ್ 50 ಸಾವಿರದಿಂದ 75 ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ. ಫ್ಯಾಮಿಲಿ ಪೆನ್ಸೆನ್ ಡಿಡಕ್ಷನ್ 15 ಸಾವಿರದಿಂದ 25 ಸಾವಿರಕ್ಕೆ ಹೆಚ್ಚಳ ಮಾಡಿದ್ದಾರೆ. ಸಂಬಳ ಪಡೆಯುವವರ ಅನುಕೂಲಕ್ಕಾಗಿ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ತರಲಾಗುತ್ತಿದೆ. ನಾಸ್ ರೆಸಿಡೆನ್ಸ್ ಇ ಕಾಮರ್ಸ್‌ಗೆ ಹಾಕುತ್ತಿದ್ದ ಲೆವಿ ಶೇ 2ರಷ್ಟನ್ನು ತೆಗೆದು ಹಾಕಲಾಗಿದೆ. ಬೇನಾಮಿ ಆಸ್ತಿ ಪತ್ತೆ ಹಚ್ಚಲು ಕಾಯ್ಕೆ ಮಾಡಲಾಗಿದೆ. ಇದು ನಮ್ಮ ನಾಯಕ ಪಧಾನಿ ನರೇಂದ್ರ ಮೋದಿಯವರ ಪ್ರಾಮಾಣಿಕತೆ, ಅವರು ತಿನ್ನುವುದಿಲ್ಲ. ತಿನ್ನಲು ಬಿಡುವುದಿಲ್ಲ ಎಂದು ಹೇಳಿದರು.

ಬಜೆಟ್ ಸರಿಯಾದ ಮಾರ್ಗದಲ್ಲಿ ಇದ್ದು, ದೇಶದ ಆರ್ಥಿಕತೆಯನ್ನು ಎರಡು ದೃಷ್ಟಿಯಿಂದ ನೋಡಬೇಕು. ಕೊವಿಡ್ ಪೂರ್ವ ಹಾಗೂ ಕೊವಿಡ್ ನಂತರದ ಆರ್ಥಿಕತೆಯನ್ನು ನೋಡಬೇಕು. ಕೊವಿಡ್ ದೇಶದ ಜನರ ಬದುಕು ಹಾಗೂ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಿತು.

ಪ್ರಧಾನಿ ನರೇಂದ್ರ ಮೋದಿಯವರು ಸಮಸ್ಯೆಯನ್ನು ಅವಕಾಶವನ್ನಾಗಿ ಮಾಡಿಕೊಂಡರು. ಲಕ್ಷಾಂತರ ಜನರ ಜೀವನ ಉಳಿಸಿದರು. ಅಷ್ಟೇ ಅಲ್ಲದೇ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಪಗತಿ ಕೇವಲ ಶೇ 2 ರಷ್ಟಿದ್ದರೆ, ನಮ್ಮ ಆರ್ಥಿಕ ಪ್ರಗತಿ ಶೇ 6 ರಿಂದ 7 ರಷ್ಟಿದೆ. ಶೀಘ್ರವೇ ನಮ್ಮ ಆರ್ಥಿಕ ಪ್ರಗತಿ ಡಬಲ್ ಡಿಜಿಟ್ ಆಗಲಿದೆ ಎಂದು ಹೇಳಿದರು.

ಈ ಸರ್ಕಾರ ಗುರಿ ಹೊಂದಿದೆ. ಜನಸಂಖ್ಯೆ ಅಭಿವೃದ್ಧಿಗೆ ಮಾರಕ ಎಂದುಕೊಂಡಿದ್ದರು. ನಮ್ಮ ಪ್ರಧಾನಿಯವರು ಅದನ್ನು ದೇಶದ ಉತ್ಪಾದಕರನ್ನಾಗಿ ಮಾಡಿದರು. ಸುಮಾರು 25 ಕೋಟಿ ಜನರನ್ನು ಬಡತನದಿಂದ ಮೇಲೆ ತಂದರು. ಡಿಬಿಟಿ ಮೂಲಕ ಭ್ರಷ್ಟಾಚಾರವನ್ನು ತೆಗೆದು ಹಾಕುವ ಕೆಲಸ ಮಾಡಿದರು.

ಪ್ರತಿಯೊಬ್ಬರಿಗೂ ಘನತೆ ಮತ್ತು ಸ್ವೀಕಾರಾರ್ಹತೆ ಮುಖ್ಯ ಲಾಲಬಹದ್ದೂರ ಶಾಸ್ತ್ರಿ ನಂತರ ನರೇಂದ ಮೋದಿಯವರು ಜನರ ಹೃದಯ ಗೆದ್ದರು. ಲಾಲ ಬಹದ್ದೂರು ಶಾಸ್ತ್ರಿ ಅವರು ಒಂದು ಹೊತ್ತಿನ ಊಟ ಕೊಡಿ ಎಂದು ಹೇಳಿದರು. ಜನರು ಅದನ್ನು ಮಾಡಿದರು. ಮೋದಿಯವರು ಎಲ್‌ಪಿಜಿ ಗ್ಯಾಸ್ ಸಬ್ಸಿಡಿ ಬಿಟ್ಟುಕೊಡುವಂತೆ ಮನವಿ ಮಾಡಿದರು. ಸುಮಾರು 6 ಕೋಟಿ ಜನರು ಒಪ್ಪಿಕೊಂಡರು. ಇದನ್ನು ಮಾಡಲು ಆತ್ಮಸ್ಥೆರ್ಯ ಬೇಕು. ನರೇಂದ್ರ ಮೋದಿಯವರಲ್ಲಿ ಆ ಆತ್ಮಸ್ಥೆರ್ಯ ಇದೆ ಎಂದು ಹೇಳಿದರು.

ಸಂವಿಧಾನ ಬದಲಾವಣೆಯ ಭಯ: ನಮ್ಮ ದೇಶದಲ್ಲಿ ಸಂವಿಧಾನ ಬದಲಾವಣೆಯ ಭಯ ಹುಟ್ಟಿಸಲಾಯಿತು. ಆದರೆ, ಕಳೆದ ಹತ್ತು ವರ್ಷದಲ್ಲಿ ಸಂವಿಧಾನವನ್ನು ಬಲಗೊಳಿಸುವ ಕೆಲಸ ಮಾಡಲಾಗಿದೆ. ಎಸ್ಸಿ ಎಸ್ಟಿ ಜನರಿಗೆ ಭಯ ಹುಟ್ಟಿಸಲಾಯಿತು. ಮೀಸಲಾತಿಯನ್ನು ಪ್ರಧಾನಿ ನರೇಂದ್ರ ಮೋದಿ 10 ವರ್ಷ ವಿಸ್ತರಣೆ ಮಾಡಿದರು.

ರಾಜ್ಯಗಳ ಹಿಂದುಳಿದ ವರ್ಗಗಳ ಆಯೋಗಗಳಿಗೆ ಸಂವಿಧಾನಿ ಮಾನ್ಯತೆಯನ್ನು ನರೇಂದ್ರ ಮೋದಿಯವರು ನೀಡಿದ್ದಾರೆ. ಜಮ್ಮು ಕಾಶ್ಮೀರದ ಎಸ್ಸಿ ಎಸ್ಟಿ ಜನರಿಗೆ ಆರ್ಟಿಕಲ್ 370 ರದ್ದುಗೊಳಿಸುವ ಮೂಲಕ ಅವಕಾಶ ನೀಡಿದರು. ಮುದ್ರಾ ಯೋಜನೆ ಮೂಲಕ ಎಸ್ಸಿ ಎಸ್ಟಿ ಜನರಿಗೆ ಆರ್ಥಿಕ ಶಕ್ತಿ ನೀಡಿ ಸ್ವಾವಲಂಬಿಯನ್ನಾಗಿ ಮಾಡುವ ಕೆಲಸ ಮಾಡಿದ್ದಾರೆ.

ನಮ್ಮ ಪಧಾನಿ ಬಗ್ಗೆ ಸಾಕಷ್ಟು ಟೀಕೆಗಳನ್ನು ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಒಳ್ಳೆಯ ಜನರನ್ನು ಕೆಟ್ಟವರನ್ನಾಗಿ ಬಿಂಬಿಸುವ ಚಾಳಿ ಈ ದುನಿಯಾದ ಹಳೆಯ ಚಾಳಿಯಾಗಿದೆ. ನಮ್ಮ ಪ್ರಧಾನಿ ನೀಲಕಂಠ ಇದ್ದ ಹಾಗೆ ಅವರು ಏನೇ ಹೇಳಿದರು. ಅದನ್ನು ಸ್ವೀಕರಿಸಿ ಅವರು ಅಮೃತವನ್ನು ಮಾತ್ರ ಕೊಡುತ್ತಾರೆ. 2047 ರಲ್ಲಿ ನಮ್ಮ ಮಕ್ಕಳು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಗೂ ಅವರ ಕಾರ್ಯಗಳನ್ನು ನೆನಪಿಸಿಕೊಳ್ಳುತ್ತಾರೆ ಎಂದು ಹೇಳಿದರು.

ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….

ರಾಜಕೀಯ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್ ಟ್ರೈಲರ್ ಇಲ್ಲಿದೆ ನೋಡಿ

ಹೆಚ್ಚು ಹೊತ್ತು ಗ್ರಹಣ ಹಿಡಿಯಲ್ಲ. ನಾನ್ ಬರ್ತಿದೀನಿ ಚಿನ್ನ: ದರ್ಶನ್| ದಿ ಡೆವಿಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಟನೆಯ ‘ ದಿ ಡೆವಿಲ್’ (The Devil) ಸಿನಿಮಾ ಇದೇ ತಿಂಗಳ 11ರಂದು ಬಿಡುಗಡೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

[ccc_my_favorite_select_button post_id="117049"]
ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP): ಗೋಯೆಲ್‌ ಜೊತೆ ಕೇಂದ್ರ ಸಚಿವ ಹೆಚ್.ಡಿ.ಕೆ ಮಹತ್ವದ ಚರ್ಚೆ

ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮ (NICDP):

ಕರ್ನಾಟಕದ ಕೈಗಾರಿಕಾಭಿವೃದ್ದಿಗೆ ಪರಿವರ್ತನಾತ್ಮಕ ಹೆಜ್ಜೆ ಎಂದೇ ನಂಬಲಾಗಿರುವ 9 ಜಿಲ್ಲೆಗಳನ್ನು ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಯೋಜನೆಯನ್ನು (NICDP- National Industrial Corridor Development Programme) ಅನುಷ್ಠಾನಗೊಳಿಸಬೇಕೆಂದು ಕೋರಿ ಕೇಂದ್ರದ ಬೃಹತ್‌ ಕೈಗಾರಿಕೆ

[ccc_my_favorite_select_button post_id="116156"]
ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಸಂಸದ ಡಾ.ಕೆ.ಸುಧಾಕರ್‌ ಭಾಗಿ

ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗದ 11ನೇ ಸಮ್ಮೇಳನದಲ್ಲಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರೊಂದಿಗೆ, ಸಂಘಟನೆಯ ಟ್ರಸ್ಟಿಯೂ ಆಗಿರುವ ಸಂಸದ ಡಾ.ಕೆ.ಸುಧಾಕರ್‌ (Dr.K.Sudhakar)

[ccc_my_favorite_select_button post_id="113863"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ ಘೋಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಶ್ವಕಪ್ ವಿಜೇತ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ನಗದು ಬಹುಮಾನ, ಸರ್ಕಾರಿ ಉದ್ಯೋಗ

ವಿಶ್ವಕಪ್ ವಿಜೇತ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿ ಅಭಿನಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Cmsiddaramaiah) ಕರ್ನಾಟಕದ ಕ್ರಿಕೆಟ್ ಪಟುಗಳಿಗೆ ತಲಾ ಹತ್ತು ಲಕ್ಷ ನಗದು ಬಹುಮಾನದ ಜೊತೆಗೆ ಸರ್ಕಾರಿ ಉದ್ಯೋಗ ಘೋಷಿಸಿದರು.

[ccc_my_favorite_select_button post_id="116681"]
ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ದೊಡ್ಡಬಳ್ಳಾಪುರ: ನಡು ರಸ್ತೆಯಲ್ಲಿ ಯುವಕನ ಬರ್ಬರ ಹತ್ಯೆ..!

ಜಾಲಪ್ಪ ಕಾಲೇಜು ವಸತಿ ಗೃಹದಲ್ಲಿ ವಾಸವಿದ್ದ ವ್ಯಕ್ತಿಯೋರ್ವನ ನಡು ರಸ್ತೆಯಲ್ಲಿ ಕೊಚ್ಚಿಕೊಂದಿರುವ (Brutally Murdered) ಘಟನೆ ಡಿಕ್ರಾಸ್-ಟಿಬಿ ವೃತ್ತದ ನಡುವಿನ ಚರ್ಚ್‌ ಗೇಟ್ ಬಳಿ ಸೋಮವಾರ ರಾತ್ರಿ 11.30ಕ್ಕೆ ನಡೆದಿದೆ

[ccc_my_favorite_select_button post_id="117043"]
ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ದೊಡ್ಡಬಳ್ಳಾಪುರ: ನಿಂತಿದ್ದ ಬಸ್‌ಗೆ ಆಟೋ ಡಿಕ್ಕಿ.. ಮೂವರಿಗೆ ಪೆಟ್ಟು

ಖಾಸಗಿ ಬಸ್ಗೆ ಹಿಂದಿನಿಂದ ಪ್ಯಾಸೆಂಜರ್ ಆಟೋ ಡಿಕ್ಕಿ ಹೊಡೆದ ಪರಿಣಾಮ (Accident) ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಸಂಜೆ ತಾಲೂಕಿನ ಕಂಟನಕುಂಟೆ ಸಮೀಪ ಸಂಭವಿಸಿದೆ.

[ccc_my_favorite_select_button post_id="116950"]

ಆರೋಗ್ಯ

ಸಿನಿಮಾ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್ ಇಲ್ಲಿದೆ ನೋಡಿ

ದರ್ಶನ್ ಸೆಲೆಬ್ರಿಟಿಸ್ಗೆ ಗುಡ್‌ನ್ಯೂಸ್: ಡೆವಿಲ್ ಸಿನಿಮಾದ 3ನೇ ಸಾಂಗ್ ಬಿಡುಗಡೆ| Video ಲಿಂಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ( Actor Darshan) ಅಭಿನಯದ "ದಿ ಡೆವಿಲ್" (The Devil) ಸಿನಿಮಾದ ಮೂರನೇ ಗೀತೆ ಬಿಡುಗಡೆಯಾಗಿದೆ.

[ccc_my_favorite_select_button post_id="116277"]
error: Content is protected !!