ಪ್ಯಾರೀಸ್, (ಆಗಸ್ಟ್.06); ಪ್ಯಾರಿಸ್ ಒಲಂಪಿಕ್ಸ್‌ನ ಮಂಗಳವಾರ ನಡೆದ ರೋಚಕ ಕುಸ್ತಿ ಪಂದ್ಯದಲ್ಲಿ ಭಾರತದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೊಗಟ್ ಅವರು ವಿಶ್ವ ಚಾಂಪಿಯನ್ ಜಪಾನ್‌ನ ಯುಯಿ ಸುಸಾಕಿಯ ಅವರನ್ನು 3-2 ರಿಂದ ಸೋಲಿಸಿದ್ದಾರೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಹೋರಾಟ ಮಾಡಿ, ಬಿಜೆಪಿ ಬೆಂಬಲಿಗರಿಂದ ಟೀಕೆ, ಅವಹೇಳನಕ್ಕೆ ಒಳಗಾಗಿದ್ದ ಭಾರತದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೊಗಟ್ ಅವರು ಒಲಂಪಿಕ್ಸ್ ನಲ್ಲಿ ಭರವಸೆ ಮೂಡಿಸಿದ್ದಾರೆ.
ಈ ಗೆಲುವಿನ ಮೂಲಕ ವಿನೇಶ್ ಫೊಗಟ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎಂಟನೇ ಶ್ರೇಯಾಂಕಿತ ಕುಸ್ತಿಪಟು ಉಕ್ರೇನ್‌ನ ಒಕ್ಸಾನಾ ಲಿವಾಚ್ ಅವರ ವಿರುದ್ಧ ಸೆಣೆಸಲಿದ್ದಾರೆ.
ಇನ್ನೆರಡು ಪಂದ್ಯ ಗೆದ್ದರೆ ಸಾಕು ವಿನೇಶ್ ಫೊಗಟ್ ಒಲಿಂಪಿಕ್‌ನಲ್ಲಿ ಪದಕವನ್ನು ಖಚಿತಪಡಿಸಿಕೊಳ್ಳಲಿದ್ದಾರೆ.
ವಿನೇಶ್ ಕೊನೆಯ 5 ಸೆಕೆಂಡುಗಳವರೆಗೆ 0-2 ರಿಂದ ಹಿಂದುಳಿದಿದ್ದರು. ಆದರೆ ಕೊನೆಯಲ್ಲಿ ಮೂರು ಅಂಕಗಳನ್ನು ಪಡೆಯುವ ಮೂಲಕ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ಅನ್ನು ಸೋಲಿಸಿದರು.
ಜಂತರ್ ಮಂತರ್ ನಲ್ಲಿ ಭಾರತೀಯ ಕುಸ್ತಿ ಒಕ್ಕೂಟದ ದೌರ್ಜನ್ಯದ ವಿರುದ್ಧ ಸುದೀರ್ಘ ಕಾಲ ಹೋರಾಟ ನಡೆಸಿದ್ದ ವಿನೇಶ್ ಗೆ ಒಲಿಂಪಿಕ್ಸ್ ಆಡುತ್ತಿರುವುದೂ ದೊಡ್ಡ ವಿಷಯವಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….