ದೊಡ್ಡಬಳ್ಳಾಪುರ, (ಆಗಸ್ಟ್. 26): ಚೆನ್ನೈ ನಲ್ಲಿ ನಡೆದ 18ನೇ ಯೋಗಾಸನ ಚಾಂಪಿಯನ್ ಶಿಪ್ ಸೌತ್ ಇಂಡಿಯಾ 2024 ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರದ ಶ್ರೀ ವಿನಾಯಕ ಯೋಗ ಕೇಂದ್ರ ಹಾಗೂ ಚಿಣ್ಣರ ಕೂಟ ಮಕ್ಕಳು ಭಾಗವಹಿಸಿ ಬಹುಮಾನ ಪಡೆದುಕೊಂಡಿದ್ದಾರೆ ಎಂದು ಶ್ರೀ ವಿನಾಯಕ ಯೋಗ ಕೇಂದ್ರದ ಯೋಗ ಶಿಕ್ಷಕರಾದ ವಿನೋದ್ ಕುಮಾರ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಸ್ಪರ್ಧೆಯಲ್ಲಿ 14 ರಿಂದ 16 ವರ್ಷದ ಬಾಲಕರ ವಿಭಾಗದಲ್ಲಿ ರಾಧಾ ಸ್ವರೂಪ್ ಎಸ್. ಪ್ರಥಮ ಸ್ಥಾನ.
8 ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಹರ್ಷ. ಬಿಜಿ ದ್ವಿತೀಯ ಸ್ಥಾನ.
10 ರಿಂದ 12 ವರ್ಷದ ಬಾಲಕರ ವಿಭಾಗದಲ್ಲಿ ಧ್ರುವ ಕುಮಾರ್ ಜಿ ದ್ವಿತೀಯ ಸ್ಥಾನ ವಿಕಾಸ್ ಎಸ್ ತೃತೀಯ ಸ್ಥಾನ.
12 ರಿಂದ 14 ವರ್ಷದ ಬಾಲಕರ ವಿಭಾಗದಲ್ಲಿ ಕುಶಾಲ್ ಪ್ರಥಮ ಸ್ಥಾನ, ವಿನಯ್ ದ್ವಿತೀಯ ಸ್ಥಾನ, ಕೃತಿಕ್ ತೃತೀಯ ಸ್ಥಾನ, ಸೂರಜ್ ತೃತೀಯ ಸ್ಥಾನ.
12 ರಿಂದ 14 ವರ್ಷದ ಬಾಲಕಿಯರ ವಿಭಾಗದಲ್ಲಿ ಆಯುಷಿ ಎಂ ಪ್ರಥಮ ಸ್ಥಾನ ಲೇಖನ ಬಿಜಿ ಪ್ರಥಮ ಸ್ಥಾನ ಪಡೆಯುವ ಮೂಲಕ ನಮ್ಮ ತಾಲೂಕಿನ ಹೆಮ್ಮೆಗೆ ಪಾತ್ರರಾಗಿದ್ದಾರೆ ಎಂದು ಚಿಣ್ಣರ ಕೂಟದ ಮುಖ್ಯಸ್ಥೆ ಜಯಭಾರತಿ ಅರವಿಂದ್ ತಿಳಿಸಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….