ಚಿಕ್ಕಬಳ್ಳಾಪುರ, (ಆಗಸ್ಟ್27): ನಗರಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ 16 ಸದಸ್ಯರು ಪಕ್ಷನಿಷ್ಟೆಗೆ ಬದ್ದರಾಗಿ ಪಕ್ಷ ಸೂಚಿಸುವ ಅಭ್ಯರ್ಥಿಗೆ ತಪ್ಪದೆ ಮತ ಚಲಾಯಿಸಬೇಕು. ಪಕ್ಷನಿಷ್ಟೆ ತೋರಲಿಲ್ಲ ಎಂದವರನ್ನು ಮುಲಾಜಿಲ್ಲದೆ 6 ವರ್ಷಗಳ ಕಾಲ ಪಕ್ಷದ ಪ್ರಾಥಮಿಕ ಸದಸ್ಯತ್ವ ದಿಂದ ಉಚ್ಚಾಟನೆ ಮಾಡಲಾಗುವುದು ಎಂದು ಪಕ್ಷದ ಸದಸ್ಯರಿಗೆ ಗಳಿಗೆ ಶಾಸಕ ಪ್ರದೀಪ್ ಈಶ್ವರ್ ಎಚ್ಚರಿಕೆ ಸಂದೇಶ ನೀಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ನಗರಸಭೆ ಚುನಾವಣೆ ಸಂಬಂಧ ಕೇಳಿದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು.
ನಾನು ಶಾಸಕ ಆಗಿರಬಹುದು ಆದರೆ ನಿಜವಾದ ರಾಜಕಾರಣ ಎಂದರೇನು ಎಂಬುದು ಇಂದಿಗೂ ನನಗೆ ಅರ್ಥವಾಗಿಲ್ಲ. ನನ್ನ ಸ್ಟೈಲ್ ಆಫ್ ರಾಜಕಾರಣ ಅಂದರೆ ಹೀಗೆಯೇ ಇರುತ್ತದೆ. ನಾನು ತಲೆಹಿಡಿದು ರಾಜಕಾರಣ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರತಿ ನಗರಸಭಾ ಸದಸ್ಯರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಆದರೆ ಬ್ಯಾಗ್‌ಗಳಲ್ಲಿ ತುಂಬಿಸಿ ಕೊಡುತ್ತಾರಲ್ಲಾ ಆ ವಿಶ್ವಾಸ ಮಾಡುವುದಿಲ್ಲ. ಯಾವ ಕೌನ್ಸಿಲರ್‌ಗೂ, ನಯಾ ಪೈಸೆ ದುಡ್ಡು ಕೊಡುವುದಿಲ್ಲ. ಟ್ರಿಪ್ ಕಳಿಸುವುದಿಲ್ಲ, ಪಾರ್ಟಿಕೊಡಿಸಲ್ಲ, ಪಕ್ಷದಿಂದ ಟಿಕೆಟ್ ಕೊಟ್ಟು ಗೆಲ್ಲಿಸಿದ್ದೇವೆ. ಪಕ್ಷನಿಷ್ಟೆಯಿದ್ದರೆ ಓಟು ಮಾಡುತ್ತಾರೆ ಚುನಾವಣೆಯಲ್ಲಿ ಕ್ರಾಸ್ ಓಟ್ ಮಾಡಿದರೋ ವಾರಕ್ಕೆ 6 ವರ್ಷಗಳ ಕಾಲ ಡಿಸ್ ಕ್ಯಾಲಿಫೈ ಮಾಡಿ ಬಿಸಾಕುತ್ತೇನೆ. ನನಗೆ ಅಧಿಕಾರ ಮುಖ್ಯವಲ್ಲ. ಕಾಂಗ್ರೆಸ್ ಪಕ್ಷವನ್ನು ನಿಯತ್ತಾಗಿ ಚಿಕ್ಕಬಳ್ಳಾಪುರದಲ್ಲಿ ಕಟ್ಟಬೇಕು ಅಷ್ಟೇ ಎಂದರು.
ಬಿಜೆಪಿಯವರು ಏನೋ ಒಂದು ವೋಟಿಗೆ 30 ರಿಂದ 40 ಲಕ್ಷ ಕೊಡುತ್ತಿದ್ದಾರಂತೆ ಕೊಡಲಿ. ನಾವು ಒಂದು ರೂಪಾಯಿ ಕೊಡಲ್ಲ. ಕಾಂಗ್ರೆಸ್ ಪಕ್ಷಕ್ಕೆ ಯಾರು ನಿಷ್ಟೆಯಿಂದ ಇರುತ್ತಾರೋ ಅವರೇ ಅಧ್ಯಕ್ಷ ಉಪಾಧ್ಯಕ್ಷರು.
ಕ್ರಾಸ್ ಓಟ್ ಹಾಕಿರೋರನ್ನು, ಬಿಜೆಪಿ ಪರ ನಿಂತವರನ್ನು ಒಬ್ಬರನ್ನೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನದಲ್ಲಿ ಕೂರಿಸುವುದಿಲ್ಲ. ಅಕಸ್ಮಾತ್ ಆ ಚೇರ್ ಸಿಗಲಿಲ್ಲ ಎಂದರೂ ಚಿಂತೆಯಿಲ್ಲ. ಮುಂದಿನ 12 ತಿಂಗಳಿಗೆ ಚುನಾವಣೆ ಬರುತ್ತದೆ ಅದೇ ನಮ್ಮ ಟಾರ್ಗೆಟ್ ಆಗಿರಲಿದೆ ಎಂದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….