ದೊಡ್ಡಬಳ್ಳಾಪುರ, (ಸೆ.14): ತಾಲ್ಲೂಕಿನ ಕಂಟನಕುಂಟೆ ಗ್ರಾಮದಿಂದ ಚಿತ್ತೂರಿಗೆ ಹೋಗುತ್ತಿದ್ದ ಇನೋವಾ ಕಾರು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಗ್ಗುವಾರಿಪಲ್ಲಿ ಸಮೀಪ ಬೆಂಗಳೂರು-ಚನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಪ್ರಕರಣ ಶನಿವಾರ ಬೆಳಿಗ್ಗೆ ನಡೆದಿದೆ.
ಘಟನೆಯಲ್ಲಿ ಕಂಟನಕುಂಟೆ ಗ್ರಾಮದ ಗಂಗರಾಜು(50 ವರ್ಷ), ಲಕ್ಷ್ಮೀ(35 ವರ್ಷ) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ತಾಲ್ಲೂಕಿನ ಹೊರವಲಯದಲ್ಲಿರುವ ಖಾಸಗಿ ಶಾಲೆಯ ಮುಖ್ಯಸ್ಥ ಶ್ರೀನಿವಾಸ್ ಸೇರಿದಂತೆ 4 ಜನರನ್ನು ಕೋಲಾರದ ಆರ್.ಎಲ್.ಜಾಲಪ್ಪ ಮೆಡಿಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರೆಲ್ಲರು ಒಂದೇ ಕುಟುಂಬದ ಸಂಬಂಧಿಗಳಾಗಿದ್ದು, ತಿರುಪತಿ ಸಮೀಪದ ಸಂಬಂಧಿಗಳ ಮನೆಗೆ ತೆರಳುತ್ತಿದ್ದರು. ಗಂಗರಾಜು ಅವರ ಅಂತ್ಯಕ್ರಿಯೆ ಭಾನುವಾರ ಕಂಟನಕುಂಟೆ ಗ್ರಾಮದಲ್ಲಿ ಹಾಗೂ ಲಕ್ಷ್ಮೀ ಅವರ ಅಂತ್ಯಕ್ರಿಯೆ ವಾಣಿಗರಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ನಜ್ಜುಗುಜ್ಜಾದ ಕಾರು: ಕಾರಿನ ಮುಂದಿನ ಟೈರು ಹೊಡೆದಿದ್ದೆ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಚಾಲಕನ ಕಡೆಯ ಭಾಗವೇ ರಸ್ತೆ ಬದಿಯಲ್ಲಿನ ಡಿವೈಡರ್ಗೆ ಡಿಕ್ಕಿ ಹೊಡೆದಿರುವ ಕಾರಣ ಕಾರು ಚಾಲನೆ ಮಾಡುತ್ತಿದ್ದ ಗಂಗರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಂಬಂಧಿಗಳು ತಿಳಿಸಿದ್ದಾರೆ.
ಅಪಘಾತದ ಸುದ್ಧಿ ತಿಳಿಯುತ್ತಿದ್ದಂತೆ ಸ್ನೇಹಿತರು, ಸಂಬಂಧಿಗಳು ಕಂಟನಕುಂಟೆ ಗ್ರಾಮದಲ್ಲಿನ ಅವರ ಕುಟುಂಬದವರನ್ನು ಸಂತೈಸಿ ದೈರ್ಯತುಂಬುತಿದ್ದ ದೃಶ್ಯ ಕಂಡುಬಂತು. ಆದರೆ ಸಂಬಂಧಿಗಳನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮನಕಲಕುವಂತಿತ್ತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–
–>