ಆನೇಕಲ್, (ಸೆ.12); ಹಿಂದಿ ಮಾತನಾಡದ ಕಾರಣಕ್ಕೆ ಕನ್ನಡಿಗ ಕಾರ್ಮಿಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಗ್ರಾಮಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬ ಪ್ರತಿಕ್ರಿಯಿಸಿದ್ದು, ಭಾಷೆ ವಿಚಾರವಾಗಿ ಈ ಹಲ್ಲೆ ನಡೆದಿಲ್ಲ ಎಂಬ ಸ್ಪಷ್ಟಿಕರಣ ನೀಡಿದ್ದಾರೆ.
ಹಲ್ಲೆಗೆ ಒಳಗಾಗಿರುವ ವ್ಯಕ್ತಿ ಶಿವಲಿಂಗ ಪ್ರತಿನಿತ್ಯ ಪರ್ಪ್ಯೂಮ್ ಹಾಕಿಕೊಂಡು ಬರುತ್ತಿದ್ದ. ಇದರ ವಾಸನೆ ಸಹಿಸಲಾಗದೆ ಉಳಿದ ಮೂವರು ಕಾರ್ಮಿಕರು ಈತನ ಬಳಿ ಜಗಳ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜಗಳ ವಿಕೋಪಕ್ಕೆ ತಿರುಗಿ ಮೂವರು ಸೇರಿ ಈತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ಸರಿಯಾದ ಮಾಹಿತಿ ತಿಳಿಯದೆ, ಕೆಲವರು ಕನ್ನಡ ಮಾತನಾಡಿದ್ದಕ್ಕೆ ಈತನ ಮೇಲೆ ಹಿಂದಿ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿಸಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರವಾಗಿದ್ದು ಈ ಗಲಾಟೆಗೂ ಭಾಷೆಗೂ ಯಾವುದೇ ಸಂಭಂದವಿಲ್ಲ ಎಂದಿದ್ದಾರೆ. (ಸಂಗ್ರಹ ಚಿತ್ರ ಬಳಸಲಾಗಿದೆ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….