ಬೆಂಗಳೂರು, (ಸೆ.15); ಮಹಿಳೆಯೋರ್ವರಿಗೆ ಅಶ್ಲೀಲ ಸಂದೇಶ ಕಳಿಸಿದ ಕಾರಣ ವ್ಯಕ್ತಿಯೋರ್ವನ ಹತ್ಯೆ ಆರೋಪದಡಿಯಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಕುರಿತು ಇತ್ತೀಚಿಗೆ ಜನ್ಮದಿನದ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರು ಆಡಿದ್ದ ಮಾತು ದರ್ಶನ್ ಅಭಿಮಾನಗಳ ಬೇಸರಕ್ಕೆ ಕಾರಣವಾಗಿತ್ತು.
ಈ ಬೆನ್ನಲ್ಲೇ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ ಅವರು ಮತ್ತೆ ದರ್ಶನ್ ಬಗ್ಗೆ ಮಾತನಾಡಿದ್ದು, ಅಭಿಮಾನಿಗಳಲ್ಲಿ ಹರ್ಷಕ್ಕೆ ಕಾರಣವಾಗಿದೆ.
ದರ್ಶನ್ ನ್ಯಾಯಾಂಗ ಬಂಧನ ಕುರಿತು ಪ್ರತಿಕ್ರಿಯೆ ನೀಡಿರುವ ಸುದೀಪ್, ನಮ್ಮಿಬ್ಬರ ಜಗಳ, ಸ್ಪರ್ಧೆ ವೈಯಕ್ತಿಕವಾಗಿದೆ. ಆದರೆ ಇಂದು ಆ ವ್ಯಕ್ತಿ ತೊಂದರೆಯಲ್ಲಿ ಇದ್ದಾನೆ ಅಂದಾಗ ನೋಡಿ ಖುಷಿ ಪಡುವ ವ್ಯಕ್ತಿ ನಾನಲ್ಲ ಎಂದು ಜೈಲು ಸೇರಿರುವ ನಟ ದರ್ಶನ್ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ.
ಅವರು ಜೈಲು ಸೇರಿದಾಗ ಯಾಕೆ ಹೀಗಾಯಿತು ಎಂದು ನನಗೂ ನೋವಾಯಿತು. ಕೆಲವು ವ್ಯಕ್ತಿಗಳು ಮಾತನಾಡದಿದ್ದರೂ ಪರವಾಗಿಲ್ಲ, ಆದರೆ ಅವರು ಕಣ್ಮುಂದೆ ಚೆನ್ನಾಗಿ ಓಡಾಡುತ್ತಿದ್ದರೆ ಸಾಕು ಎನಿಸುತ್ತದೆ ಎಂದು ಹೇಳುವ ಮೂಲಕ ದರ್ಶನ್ ಅವರ ಜೈಲು ಸೇರಿರುವ ಬಗ್ಗೆ ಪರೋಕ್ಷವಾಗಿ ಸುದೀಪ್ ನೋವು ತೋಡಿಕೊಂಡರು.
ದರ್ಶನ್ ಹಾಗೂ ಸುದೀಪ್ ಅವರು ಮಾತು ಬಿಟ್ಟು ದಶಕಗಳ ಕಳೆದಿವೆ. ಈ ನಡುವೆ ಸುದೀಪ್ ಅವರು ದರ್ಶನ್ ಜೊತೆಗಿನ ಸ್ನೇಹದ ಬಗ್ಗೆ ಹೇಳಿರುವ ಈ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸುದೀಪ್ ಮಾತಿನಿಂದ ದರ್ಶನ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಯಾಕೆಂದರೆ ಇಬ್ಬರ ನಟರ ಅಭಿಮಾನಿಗಳು ಕೂಡ ಇವರಿಬ್ಬರು ಆದಷ್ಟು ಬೇಗ ಜೊತೆಯಾಗಿ ಕಾಣಿಸಿಕೊಳ್ಳಲಿ ಎಂದು ಹಾರೈಸುತ್ತಿರುತ್ತಾರೆ.
ಸಂದರ್ಶನದಲ್ಲಿ ಖಾಸಗಿ ಸುದ್ದಿವಾಹಿನಿ ನಿರೂಪಕ ದರ್ಶನ್ ಕುರಿತು ಪದೇ ಪದೇ ನಕಾರಾತ್ಮಕ ಪ್ರಶ್ನೆಗಳನ್ನು ಕೇಳಿದರು ಡಿಬಾಸ್ ಬಗ್ಗೆ ಸುದೀಪ್ ಅವರು ತುಂಬಾ ಪ್ರಬುದ್ಧವಾಗಿ ಮಾತನಾಡಿದ್ದಾರೆ. ಅಲ್ಲದೆ ರಪ್ ರಪ್ ಅಂತ ನಿರೂಪಕನಿಗೆ ರೇಷ್ಮೆ ಬಟ್ಟೆಲ್ಲಿ ಸುತ್ತಿ ಹೊಡಿದಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಬರೆದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….