ದೊಡ್ಡಬಳ್ಳಾಪುರ, (ಸೆ.15); ತಾಲೂಕಿನ ಕ್ರೀಡಾಪಟುಗಳಿಗೆ ಆಶಾಕಿರಣವಾದ ಚೊಕ್ಕನಹಳ್ಳಿಯ ANT ಅಂತರರಾಷ್ಟ್ರೀಯ ಟೆನಿಸ್ ಅಕಾಡೆಮಿಗೆ ನಗರದ ಪ್ರತಿಷ್ಠಿತ ಶಿಕ್ಷಣಸಂಸ್ಥೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯ ಮಕ್ಕಳು ಶೈಕ್ಷಣಿಕ ಹೊರ ಪ್ರವಾಸದ ಅಂಗವಾಗಿ ಭೇಟಿ ನೀಡಿದ್ದರು.
ಇಂದು ಭಾರತ ಕ್ರೀಡಾಕ್ಷೇತ್ರದಲ್ಲಿ ಅತ್ಯಂತ ಉನ್ನತ ಮಟ್ಟದಲ್ಲಿ ಸಾಧನೆ ಮಾಡುತ್ತಿದೆ. ಕ್ರೀಡೆಯು ವಿದ್ಯಾರ್ಥಿಗಳನ್ನು ದೈಹಿಕ ಹಾಗೂ ಮಾನಸಿಕವಾಗಿ ಸದೃಢರನ್ನಾಗಿಮಾಡುತ್ತದೆ.
ಅಂತಹ ಸದೃಢ ಕ್ರೀಡಾಳುಗಳನ್ನು ತಯಾರು ಮಾಡುವ ಗುರುತರ ಜವಾಬ್ದಾರಿಯನ್ನು ಹೊತ್ತು ದೊಡ್ಡಬಳ್ಳಾಪುರ ತಾಲೂಕಿನ ಕ್ರೀಡಾಪಟುಗಳಿಗೆ ಆಶಾಕಿರಣವಾದ ಚೊಕ್ಕನಹಳ್ಳಿಯ ANT ಅಂತರರಾಷ್ಟ್ರೀಯ ಟೆನಿಸ್ ಅಕಾಡೆಮಿ ಶ್ರಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ MSV ಶಾಲೆಯ ಮಕ್ಕಳು ಭೇಟಿ ನೀಡಿದ್ದರು.
ಮಕ್ಕಳು ಇಂದು ಕೇವಲ ಪುಸ್ತಕದ ಜ್ಞಾನ ಪಡೆದರೆ ಸಾಲದು ಹೊರ ಜಗತ್ತಿನ ಜ್ಞಾನಪಡೆಯುವುದು ಅಷ್ಟೇ ಮುಖ್ಯವಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗುವ ಅಂಶಗಳನ್ನು ತಿಳಿಯುವ ಉದ್ದೇಶದಿಂದ ಎಂಎಸ್‌ವಿ ವಿದ್ಯಾಸಂಸ್ಥೆಯು ಪ್ರತಿವರ್ಷ ಬೇರೆ ವಿಶೇಷ ಮತ್ತು ವಿಶಿಷ್ಟಸ್ಥಳಗಳಿಗೆ ವಿದ್ಯಾರ್ಜನೆಗಾಗಿ ಭೇಟಿ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಅಂತಹ ಉದ್ದೇಶದಿಂದ ನಗರದಿಂದ ಹೊರವಲಯದಲ್ಲಿರುವ ANT ಅಂತರರಾಷ್ಟ್ರೀಯ ಟೆನಿಸ್ ಅಕಾಡೆಮಿಗೆ ಮಕ್ಕಳೊಂದಿಗೆ ಭೇಟಿ ನೀಡಲಾಯಿತು ಎಂದು ಎಂಎಸ್‌ವಿ ಪಬ್ಲಿಕ್ ಶಾಲೆಯ ಅಧ್ಯಕ್ಷ ಎ.ಸುಬ್ರಹ್ಮಣ್ಯ ಅವರು ತಿಳಿಸಿದರು.
ಇದೇ ವೇಳೆ ಅಕಾಡೆಮಿಗೆ ಬಾಂಬೆ ಹೈಕೋರ್ಟಿನ ನಿವೃತ್ತ ಮುಖ್ಯನ್ಯಾಯಾಧೀಶರಾದ ಮಂಜುಳಾ ಚೆಲ್ಲೂರ ಅವರು ಕೂಡ ಭೇಟಿ ನೀಡಿದ್ದರು.
ಅಲ್ಲಿನ ಟೆನ್ನಿಸ್ ತರಬೇತಿದಾರರು ಕೆಲ ಸಮಯ ಮಕ್ಕಳಿಗೆ ತರಬೇತಿ ನೀಡಿದರು.
ANT ಅಕಾಡೆಮಿಯ ಸಂಸ್ಥಾಪಕರು ಹಾಗೂ ವಕೀಲರಾದ ಆದಿನಾಥ್ ನಾರಡೆ ಅವರು ಎಂ.ಎಸ್.ವಿ.ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಎ.ಸುಬ್ರಹ್ಮಣ್ಯ, ಕಾರ್ಯದರ್ಶಿ ಮಂಜುಳಾ ಸುಬ್ರಹ್ಮಣ್ಯ ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು.
ಅಲ್ಲದೆ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೆ ANT ಅಕಾಡೆಮಿ ವತಿಯಿಂದ ಪಾರಿತೋಷಕವನ್ನು ವಿತರಿಸಲಾಯಿತು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….<!–
–>