ಬೆಂಗಳೂರು, (ಸೆ.12): ಭಾರತೀಯ ಯುವಕರು ಯಾರೂ ಗಲಾಟೆ ಬಯಸುವುದಿಲ್ಲ. ಇಂತಹ ರಾಜಕಾರಣಿಗಳ ಹೇಳಿಕೆಯಿಂದಲೇ ಗಲಾಟೆ ಆಗುತ್ತಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದರು.
ಈ ರೀತಿಯ ಘಟನೆ ಆಗಬಾರದು. ಡಾಲಿ ರಸ್ತೆಯಲ್ಲಿರುವ ಮದರಾಸಾದಲ್ಲಿ ಗಣೇಶ ಮೆರವಣಿಗೆ ಹೋಗಿದೆ. ಆಗ ಅಲ್ಲಿ ಮುಸ್ಲಿಂನ ಎಲ್ಲಾ ಧರ್ಮ ಗುರುಗಳು ನಿಂತುಕೊಂಡು ಕಳುಹಿಸಿಕೊಟ್ಟಿದ್ದಾರೆ. ಕ್ರಿಸ್‌ಮಸ್, ಬಕ್ರಿದ್, ಗಣೇಶೋತ್ಸವವಂತಹ ಎಲ್ಲಾ ಹಬ್ಬವನ್ನು ಒಟ್ಟಾಗಿ ಆಚರಿಸಬೇಕು ಎಂದರು.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬದರಿಕೊಪ್ಪಲದಲ್ಲಿ ಗಣಪತಿ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು, ಸೆಪ್ಟಂಬರ್ 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….