ದೊಡ್ಡಬಳ್ಳಾಪುರ, (ಸೆ.14); ಹಿಂದೂಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ನಗರದ ಕಲ್ಲುಪೇಟೆ ನಿವಾಸಿ ಸುಬ್ರಮಣಿ (ಸುಬ್ಬ) ನಿಧನರಾಗಿದ್ದಾರೆ.
ಅವರಿಗೆ 41 ವರ್ಷ ವಯಸ್ಸಾಗಿತ್ತು. ಅಪಘಾತದಲ್ಲಿ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದು, ಅಂತ್ಯಕ್ರಿಯೆ ತಿಪ್ಪಾಪುರ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ದೊಡ್ಡತುಮಕೂರು ಆನಂದ್ ತಿಳಿಸಿದ್ದಾರೆ.
ಸುಬ್ಬ ಎಂದೇ ಪರಿಚಿತರಾಗಿದ್ದ ಸುಬ್ರಮಣಿ ಅವರು, ಧರ್ಮ ಜಾಗರಣಾ, ಹಿಂದೂ ಜಾಗರಣಾ ವೇದಿಕೆಯ ಪೂರ್ಣಾವಧಿಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಸುಬ್ರಮಣಿ ಅಗಲಿಕೆಗೆ ಅವರ ಕುಟುಂಬ ವರ್ಗ, ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಕಂಬನಿ ಮಿಡಿದಿದ್ದಾರೆ.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….