Dasara: ಖ್ಯಾತ ನಟ ಶಿವರಾಜ್ ಕುಮಾರ್ ಅವರಿಂದ ಶ್ರೀರಂಗಪಟ್ಟಣ ದಸರಾಗೆ ಚಾಲನೆ

ಮಂಡ್ಯ: ಶ್ರೀರಂಗಪಟ್ಟಣದ ಕಿರಂಗೂರು ಬನ್ನಿಮಂಟಪದಲ್ಲಿ ಇಂದು ಖ್ಯಾತ ನಟ ಡಾ.ಶಿವರಾಜ್‌ಕುಮಾರ ಅವರು ಪಾರಂಪರಿಕ ಶ್ರೀರಂಗಪಟ್ಟಣ ದಸರಾ (Dasara) ಜಂಬೂ ಸವಾರಿಗೆ ಚಾಲನೆ ನೀಡಿದರು.

ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಶ್ರೀರಂಗಪಟ್ಟಣ ಶಾಸಕ ಹಾಗೂ ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷ ಎ.ಬಿ ರಮೇಶ್ ಬಂಡಿಸಿದ್ದೇಗೌಡ, ಶಾಸಕರಾದ ಪಿ ರವಿಕುಮಾರ್, ದರ್ಶನ್ ಪುಟ್ಟಣಯ್ಯ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅಪರ ಜಿಲ್ಲಾಧಿಕಾರಿ ಡಾ: ಹೆಚ್.ಎಲ್ ನಾಗರಾಜು, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Dasara ಚಾಮುಂಡೇಶ್ವರಿ ವಿಗ್ರಹದ ಅಂಬಾರಿ ಹೊತ್ತ
ಮಹೇಂದ್ರ ಗಾಂಭೀರ್ಯದೊಂದಿಗೆ ಬನ್ನಿಮಂಟಪ ಕಿರಂಗೂರಿನಿಂದ ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಸಾಗಿತು.

ಕಲಾತಂಡಗಳು ಹಾಗೂ ಸ್ಥಬ್ಥಚಿತ್ರಗಳು ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರಗು ನೀಡಿತು.

ಪೂಜಾ ಕುಣಿತ
ಶ್ರೀರಂಗಪಟ್ಟಣ ತಾಲೂಕಿನ ದೊಡ್ಡಪಾಳ್ಯ ಗ್ರಾಮದ ಶ್ರೀ ಚಾಮುಂಡೇಶ್ವರಿ ಸಾಂಸ್ಕೃತಿಕ ಕಲಾತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಕೆ.ಬಿ.ಸ್ವಾಮಿ ತಂಡ, ಮದ್ದೂರು ತಾಲೂಕು ಕಡಿಲುವಾಗಿಲು ಗ್ರಾಮದ ಚೇತನ್.ಡಿ.ಸಿ ತಂಡ, ಬಾಬುರಾಯನಕೊಪ್ಪಲು ಪ್ರೇಮ್ ಕುಮಾರ್ ಬಿ.ಎನ್ ತಂಡ, ಶ್ರೀರಂಗಪಟ್ಟಣ ರವಿ.ಸಿ ತಂಡ ಮತ್ತು ಮಂಡ್ಯ ತಾಲೂಕು ಕಾರಸವಾಡಿ ವಿಕಾಸ್ ಕೆ.ಎಸ್ ತಂಡ ಭಾಗವಹಿಸಿತು.

ವೀರಗಾಸೆ
ಬಾಬುರಾಯನಕೊಪ್ಪಲು ಕಿರಣ್.ಎಚ್.ವಿ ತಂಡ, ಮಂಡ್ಯ ತಾಲೂಕು ಹುಳ್ಳೇನಹÀಳ್ಳಿ ಗ್ರಾಮದ ಚಂದನ ಡಿ.ಸಿ ತಂಡ, ಶ್ರೀರಂಗಪಟ್ಟಣ ತಾಲೂಕು ಕಿರಂಗೂರು ಗ್ರಾಮದ ವಿನಯ್.ಎಸ್ ತಂಡ, ಪಾಂಡವಪುರ ತಾಲೂಕು ದೊಡ್ಡಬೋಗನಹಳ್ಳಿ ಗ್ರಾಮ ರುದ್ರಸ್ವಾಮಿ ಡಿ.ವಿ ತಂಡ.

ಇದನ್ನೂ ಓದಿ; ನಾಡ ದೇವತೆಗೆ ಅಗ್ರಪೂಜೆಯೊಂದಿಗೆ ಮೈಸೂರು ದಸರಾಗೆ ಚಾಲನೆ

ಸೋಮನ ಕುಣಿತ
ಮಂಡ್ಯ ತಾಲ್ಲೂಕು ಕಾರಸವಾಡಿ ಸಂತೋಷ್ ಕುಮಾರ್ ಕೆ.ಎಂ ತಂಡ, ನಾಗಮಂಗಲ ಹಳ್ಳಿಸಂದ್ರ ಗ್ರಾಮ ಎ.ವಿಕಾಸ್‌ಗೌಡ ತಂಡ, ದುದ್ದ ಹೋಬಳಿ ಮುದಗಂದೂರು ಗ್ರಾಮದ ದೇವಲಿಂಗಯ್ಯ ತಂಡ, ವಿಕಾಸ್ ಎಂಬಿ ತಂಡ, ನಾಗಮಂಗಲ ಸಿ ಎಸ್ ಮಂಜೇಶ ತಂಡ.

ಡೊಳ್ಳು ಕುಣಿತ
ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ಜನ್ಮಭೂಮಿ ಜನಪದ ಕಲಾಸಂಘ, ಶ್ರೀರಂಗಪಟ್ಟಣ ತಾಲ್ಲೂಕು ಮೇಳಾಪುರ ಗ್ರಾಮ ಸುಮಂತ ಎಂ.ಸಿ ತಂಡ, ಕಾರಸವಾಡಿ ಗ್ರಾಮದ ಲೋಕೇಶ್.ಎಂ ತಂಡ.

ನಗಾರಿ/ತಮಟೆ
ಶ್ರೀರಂಗಪಟ್ಟಣ ತಾಲೂಕು ನೀಲನಕೊಪ್ಪಲು ಸಿದ್ದಲಿಂಗಸ್ವಾಮಿ ತಂಡ, ಶ್ರೀರಂಗಪಟ್ಟಣ ತಾಲೂಕು ಅರಕೆರೆ ಗ್ರಾಮ ಹರ್ಷಕುಮಾರ್‌ಗೌಡ ತಂಡ, ಶ್ರೀರಂಗಪಟ್ಟಣ ಕೀರ್ತಿಕುಮಾರ್.ಆರ್ ತಂಡ, ಮಂಡ್ಯ ಕೊಪ್ಪಲು ಕಲಾತಂಡ, ಶ್ರೀರಂಗಪಟ್ಟಣ ತಾಲೂಕು ಗಾಂಧಿನಗರ ಅಶೋಕ.ಬಿ ಮತ್ತು ತಂಡ.

ನಂದಿದ್ವಜ ಕುಣಿತ
ಮಂಡ್ಯ ತಾಲೂಕು ಕಾರಸವಾಡಿ ಜಗದೀಶ್ .ಎಂ ತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ದ್ಯಾವಣ್ಣ ತಂಡ.

ಗಾರುಡಿಗೊಂಬೆ
ಮಂಡ್ಯ ತಾಲೂಕು ಕಾರಸವಾಡಿ ಸಿದ್ದೇಗೌಡ ತಂಡ ಜನಪದ ಕಲಾತಂಡ

ಚಿಲಿಪಿಲಿ ಗೊಂಬೆ
ಮದ್ದೂರು ತಾಲೂಕು ಬಿದರಹಳ್ಳಿ ಗ್ರಾಮದ ಶ್ರೀ ಕಬ್ಬಾಳಮ್ಮ ಜಾನಪದ ಕಲಾತಂಡ, ಮಳವಳ್ಳಿ ತಾಲೂಕು ಮಾರನಹಳ್ಳಿ ಗ್ರಾಮ ಚಂದ್ರ ತಂಡ

ಕೊಂಬು ಕಹಳೆ
ಶ್ರೀರಂಗಪಟ್ಟಣ ತಾಲೂಕು ಕೊಡಿಯಾಲ ಪವನ್ ಕುಮಾರ್ ತಂಡ, ಮಂಡ್ಯ ತಾಲೂಕು ಕಾರಸವಾಡಿ ಗ್ರಾಮದ ರೋಹಿತ್‌ಎಸ್ ತಂಡ, ಮಂಡ್ಯ ತಾಲೂಕು ಮಳೆಕೊಪ್ಪಲು ಗ್ರಾಮದ ನರಸಿಂಹ ಎಂ.ಸಿ ತಂಡ

ಒನಕೆ ಕುಣಿತ,
ಶ್ರೀರಂಗಪಟ್ಟಣ ತಾಲೂಕು ಬಸವನಪುರ ಯೋಗೇಶ್ ತಂಡಮತ್ತು ದೊಡ್ಡಪಾಳ್ಯ ಕುಮಾರ್ ತಂಡ

ದೊಣ್ಣೆ ವರಸೆ, ಕತ್ತಿವರಸೆ, ಬೆಂಕಿ ಭರಾಟೆ
ಮಂಡ್ಯ ತಾಲ್ಲೂಕು ಕೊತ್ತತ್ತಿ ಗ್ರಾಮದ ಎಲೆ ತೋಟದ ಖ್ಯಾತಮ್ಮ ಯುವಕರ ಜಾನಪದ ಕಲಾತಂಡ

ಮಹಿಳಾಪಟ ಕುಣಿತ
ಮಂಡ್ಯ ತಾಲೂಕು ಕೀಲಾರ ಗ್ರಾಮ ಕ್ಷೀರಸಾಗರ ಮಿತ್ರ ಕೂಟ ಮತ್ತು ರಾಜಮ್ಮ.ಎನ್ ತಂಡ

ಬ್ಯಾಂಡ್ ಸೆಟ್
ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ಮಹೇಶ ಸಿ ತಂಡ

ನಾದಸ್ವರ
ಶ್ರೀರಂಗಪಟ್ಟಣ ಅಜಯ್.ಕೆ ತಂಡ

ಮಹಿಳಾ ಕೋಲಾಟ
ಹೊಸಗಾವಿ ಶ್ರೀ ವಿನಾಯಕ ಮಹಿಳಾ ಕೋಲಾಟ ತಂಡ

ಸ್ಥಬ್ದ ಚಿತ್ರಗಳು ರೇಷ್ಮೆ ಇಲಾಖೆಯಿಂದ ರೇಷ್ನೆ ಹುಳು ಸಾಕಾಣಿಕೆ ಹಾಗೂ ಅದರ ಉತ್ಪನ್ನಗಳು, ವಿದ್ಯಾ ಭಾರತಿ ಶಾಲೆಯಿಂದ ನವ ದುರ್ಗಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹ ಲಕ್ಷ್ಮಿ ಯೋಜನೆ, ಶಾಲಾ ಶಿಕ್ಷಣ ಇಲಾಖೆಯಿಂದ ಜ್ಞಾನಪೀಠ ಪ್ರಶಸ್ತಿ ವಿಜೇತರು ಹಾಗೂ ಶಿಕ್ಷಣ ಇಲಾಖೆ ಸೌಲಭ್ಯದ ಬಗ್ಗೆ ಸ್ಥಬ್ದ ಚಿತ್ರ ಸೇರಿದಂತೆ ಕೃಷಿ, ತೋಟಗಾರಿಕೆ, ಖಾದಿ ಮತ್ತು ಗ್ರಾಮೋದ್ಯೋಗ, ಆರೋಗ್ಯ, ಅಗ್ನಿ ಶಾಮಕ ಇಲಾಖೆ ಹಾಗೂ ಭಗವಾನ್ ಬುದ್ಧ ಕುರಿತು ಸ್ಥಬ್ಧ ಚಿತ್ರಗಳು ಪಾಲ್ಗೊಂಡು ಮೆರವಣಿಗೆಗೆ ವಿಶೇಷ ಮೆರಗು ನೀಡಿದವು.

ರಾಜಕೀಯ

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ ಸೂಚನೆ: ಡಿಸಿಎಂ ಡಿ.ಕೆ.ಶಿವಕುಮಾರ್

ಧರ್ಮಸ್ಥಳ ಪ್ರಕರಣ; ಸುಳ್ಳು ಆಪಾದನೆ ಮಾಡಿದವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಸಿಎಂ

“ಧರ್ಮಸ್ಥಳ ವಿಚಾರದಲ್ಲಿ ಸುಳ್ಳು ಆಪಾದನೆ ಮಾಡಿದ್ದರೆ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದುʼ ಎಂದು ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದಾರೆ”; ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="112789"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ದೊಡ್ಡಬಳ್ಳಾಪುರ: ಸತತ 5ನೇ ಬಾರಿ ಅಂಗಡಿಗಳಲ್ಲಿ ಕಳವು..!ಆತಂಕದಲ್ಲಿ ವ್ಯಾಪಾರಿಗಳು

ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಅಂಗಡಿಗಳಲ್ಲಿ ಪದೇ ಪದೇ ಕಳ್ಳತನ ಪ್ರಕರಣಗಳು (Shops robbed) ನಡೆಯುತ್ತಿದ್ದು, ವ್ಯಾಪಾರಿಗಳನ್ನು ಚಿಂತೆಗೀಡುಮಾಡಿದೆ.

[ccc_my_favorite_select_button post_id="112687"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!