ಹರಿತಲೇಖನಿ ದಿನಕ್ಕೊಂದು ಕಥೆ: ಚಂಡಮಾರುತ ಎಂದರೇನು?

ಚಂಡಮಾರುತ ಹವಾಮಾನಕ್ಕೆ ಸಂಬಂಧಿಸಿದ ಘಟನೆಯಾಗಿದ್ದು ಗಾಳಿಯ ಒತ್ತಡ ಕಡಿಮೆ ಇರುವ ಪ್ರದೇಶದತ್ತ ಗಾಳಿಯು ತಿರುಗುತ್ತಾ ಬರುವುದನ್ನು ಚಂಡಮಾರುತ ಎಂದು ಹೇಳುತ್ತಾರೆ. ಇಲ್ಲಿ ಗಾಳಿಯು ಪ್ರದಕ್ಷಿಣೆ ಅಥವಾ ಅಪ್ರದಕ್ಷಿಣೆಯಾಗಿ ತಿರುಗುತ್ತಿರುತ್ತದೆ.

ಕಡಿಮೆ ಒತ್ತಡವೆಂದರೆ ಆ ಪ್ರದೇಶದಲ್ಲಿ ಗಾಳಿ ಕಡಿಮೆ ಪ್ರಮಾಣದಲ್ಲಿರುತ್ತದೆ ಅಲ್ಲಿ ಸಾಂದ್ರತೆ ಕಡಿಮೆಯಾಗಿ ತೂಕ (ಮಾಸ್) ಕಡಿಮೆಯಾಗುವುದು. ಆಗ ಉಳಿದಕಡೆಯಿಂದ ಗಾಳಿ ಅಲ್ಲಿಗೆ ರಭಸದಲ್ಲಿ ನುಗ್ಗುವುದು. ಗಾಳಿಯ ಚಲನೆ ಸುರುಳಿಯಾಕಾರ ಹೊಂದುವುದು.

ಚಂಡಮಾರುತದಲ್ಲಿ ಗಾಳಿಯು ರಭಸದಿಂದ ಸುತ್ತುವಾಗ ಸುರಳಿಯ ಮಧ್ಯದಲ್ಲಿ ನಿರ್ವಾತ ಪ್ರದೇಶ ಅಥವಾ ಶೂನ್ಯ ಪ್ರದೇಶ ಉಂಟಾಗುವುದು. ಅದು ಸುಂಟರಗಾಳಿಯ ಕೇಂದ್ರ ಅಥವಾ ಕಣ್ಣು. ಸುರುಳಿಯಲ್ಲಿ ಗಾಳಿಯು 30 ಕಿ.ಮೀ. ನಿಂದ 350ಕಿ.ಮೀ.ವೇಗದವರೆಗೂ ಚಲಿಸುವುದು.

ಈ ರಭಸದಲ್ಲಿ ಸಿಕ್ಕಿದ ವಸ್ತುಗಳು ಪುಡಿಯಾಗಿ ನಾಶವಾಗುವವು. ಕೇಂದ್ರದ ಕಣ್ಣಿನಲ್ಲಿ ಸಿಕ್ಕಿದ ವಸ್ತುವು ನಿರ್ವಾಣದಲ್ಲಿ ಮೇಲ್ಮುಖವಾಗಿ ಚಲಿಸುವುದರಿಂದ ಆ ವಸ್ತುಗಳು ಆಕಾಶಕ್ಕೆ ಚಿಮ್ಮಿ ಎಲ್ಲಿಯೋ ಬೀಳಬಹುದು.

ಕೇಂದ್ರ ಮತ್ತು ಕೇಂದ್ರದ ಹತ್ತಿರವಿರುವ ಬಿರುಗಾಳಿಗೆ ಸಿಕ್ಕಿದ ಮನೆಮಠ ಮರ ವಸ್ತುಗಳು ನಾಶವಾಗುವವು, ಅಲ್ಲದೆ ಜೀವಹಾನಿಯಾಗುವುದು. ಉಷ್ಣವಲಯದ ವಾತಾವರಣದಲ್ಲಿ ಸಮುದ್ರದಿಂದ ಆವಿಯಾದ ತೇವಾಂಶವಿರುವುದರಿಂದ ಬಿರುಗಾಳಿಯ ಜೊತೆ ಮಳೆಯೂ ಸುರಿಯುವುದು.

ಚಂಡಮಾರುತವನ್ನು ಸೈಕ್ಲೋನ್‌, ಹರಿಕೇನ್‌, ಟೈಫೂನ್‌ (ತೂಫಾನು) ಎಂದೆಲ್ಲ ಕರೆಯಲಾಗುತ್ತದೆ. ವಾಸ್ತವದಲ್ಲಿ ಮೂರು ಪದಗಳ ಅರ್ಥ ಒಂದೇ. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ಚಂಡಮಾರುತದ ವಿಧಗಳು

ಹಿಂದೂ ಮಹಾ ಸಾಗರ ಪ್ರಾಂತ್ಯದಲ್ಲಿ ಗಾಳಿಯ ವೇಗದ ತೀವ್ರತೆಯನ್ನು ಆಧಾರವಾಗಿಟ್ಟುಕೊಂಡು ಚಂಡಮಾರುತವನ್ನು ಹಲವು ರೀತಿಯಲ್ಲಿ ವರ್ಗೀಕರಣ ಮಾಡಲಾಗಿದೆ.

ಅಟ್ಲಾಂಟಿಕ್‌ ಪ್ರದೇಶದಲ್ಲಿ ಹರಿಕೇನ್‌ ಎಂದೂ, ಪೆಸಿಫಿಕ್‌ ತೀರದಲ್ಲಿ ಟೈಫೂನ್‌ ಮತ್ತು ಹಿಂದೂ ಮಹಾ ಸಾಗರದ ಭಾಗದಲ್ಲಿ ಸೈಕ್ಲೋನ್‌ ಎಂದೂ ಕರೆಯುವ ಪದ್ಧತಿ ಇದೆ.

  1. ವಾಯುಭಾರ ಕುಸಿತ: ಕಡಿಮೆ ವೇಗದ ಬಿರುಗಾಳಿಗೆ[೩] ಈ ರೀತಿ ಕರೆಯುತ್ತಾರೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 31ರಿಂದ 49 ಕಿ.ಮೀ. ವರೆಗೆ ಇರುತ್ತದೆ.
  2. ತೀವ್ರ ವಾಯುಭಾರ ಕುಸಿತ: ವಾಯುಭಾರ ಕುಸಿತ ತೀವ್ರಗೊಂಡಾಗಿನ ಸ್ಥಿತಿ. ಈ ಸ್ಥಿತಿಯಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 50ರಿಂದ 61 ಕಿ.ಮೀ ನಷ್ಟಿರುತ್ತದೆ.
  3. ಚಂಡಮಾರುತ: ತೀವ್ರ ವಾಯುಭಾರ ಕುಸಿತವು ಬಿರುಗಾಳಿಯಾಗಿ ಬದಲಾದರೆ (ಗಾಳಿಯ ವೇಗ ಪ್ರತಿಗಂಟೆಗೆ 62ರಿಂದ 88 ಕಿ.ಮೀ ನಷ್ಟು) ಅದನ್ನು ಚಂಡಮಾರುತ ಎನ್ನುತ್ತಾರೆ.
  4. ತೀವ್ರ ಚಂಡಮಾರುತ(ಸಿವಿಯರ್‌ ಸೈಕ್ಲೋನಿಕ್ ಸ್ಟಾರ್ಮ್‌): ಗಾಳಿಯ ವೇಗ ಪ್ರತಿ ಗಂಟೆಗೆ 89 ರಿಂದ117 ಕಿ.ಮೀ. ನಷ್ಟಿರುತ್ತದೆ.
  5. ಉಗ್ರ ಚಂಡಮಾರುತ (ವೆರಿ ಸಿವಿಯರ್‌ ಸೈಕ್ಲೋನಿಕ್ ಸ್ಟಾರ್ಮ್‌): ಪ್ರತಿ ಗಂಟೆಗೆ ಗಾಳಿಯ ವೇಗ 118ರಿಂದ 166 ಕಿ.ಮೀ. ವರೆಗೆ ಇರುತ್ತದೆ.
  6. ಅತ್ಯುಗ್ರ ಚಂಡಮಾರುತ: (ಎಕ್ಸ್‌ಟ್ರೀಮ್‌ಲಿ ಸಿವಿಯರ್‌ ಸೈಕ್ಲೋನಿಕ್ ಸ್ಟಾರ್ಮ್‌): ಇಲ್ಲಿ ಗಾಳಿಯು ಪ್ರತಿ ಗಂಟೆಗೆ 166 ರಿಂದ 221 ಕಿ.ಮೀ ವೇಗದಲ್ಲಿ ಬೀಸುತ್ತದೆ.
  7. ಸೂಪರ್‌ ಚಂಡಮಾರುತ: ಚಂಡಮಾರುತಗಳ ವರ್ಗೀಕರಣದಲ್ಲಿ ಇದು ಕೊನೆಯ ವಿಧ. ಪ್ರತಿ ಗಂಟೆಗೆ 222 ಕಿ.ಮೀ. ಗಿಂತ ಹೆಚ್ಚು ವೇಗದ ಚಂಡಮಾರುತ ಈ ವರ್ಗಕ್ಕೆ ಸೇರುತ್ತದೆ. ಹೆಸರು ಇಡುವ ಪ್ರಕ್ರಿಯೆ

ಪ್ರತಿ ಚಂಡಮಾರುತಕ್ಕೂ ಹೆಸರು ಇಡಲಾಗುತ್ತದೆ. ಪ್ರಸ್ತುತ, ಜಾಗತಿಕ ಮಟ್ಟದಲ್ಲಿ ಉಷ್ಣವಲಯದ ಚಂಡಮಾರುತಗಳಿಗೆ ವಿಶ್ವ ಹವಾಮಾನ ಸಂಸ್ಥೆ (ಡಬ್ಲ್ಯುಎಂಒ- World Meteorological Organization) ಆಶ್ರಯದಲ್ಲಿರುವ ಜಗತ್ತಿನ 11 ಎಚ್ಚರಿಕೆ ಕೇಂದ್ರಗಳ ಪೈಕಿ ಯಾವುದಾದರೂ ಒಂದು ಕೇಂದ್ರ ಅಧಿಕೃತ ಹೆಸರು ಇಡುತ್ತದೆ.

ಮೊದಲು ಚಂಡಮಾರುತಕ್ಕೆ ಇಡಬಹುದಾದ ಎಲ್ಲ ಸಂಭಾವ್ಯ ಹೆಸರುಗಳನ್ನು ಪೆಸಿಫಿಕ್‌ ಪ್ರದೇಶದಲ್ಲಿರುವ ವಿಶ್ವ ಹವಾಮಾನ ಸಂಸ್ಥೆಯ ಪ್ರಾದೇಶಿಕ ಉಷ್ಣವಲಯ ಚಂಡಮಾರುತ ಸಮಿತಿಗೆ ಸಲ್ಲಿಸಬೇಕು.

ಈ ಸಮಿತಿಯು ಹೆಸರುಗಳನ್ನು ತಿರಸ್ಕರಿಸಬಹುದು ಅಥವಾ ಅದರಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಬಹುದು ಅಥವಾ ತಾನೇ ಹೆಸರು ಇಡಬಹುದು. ಆ ಪ್ರದೇಶದಲ್ಲಿರುವ ವಿವಿಧ ರಾಷ್ಟ್ರಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತವೆ.

ಅಂತಿಮವಾಗಿ ಹೆಚ್ಚು ಮತ ಗಳಿಸಿದ ಹೆಸರನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಇಂಗ್ಲಿಷ್‌ ವರ್ಣಮಾಲೆಯ ಅನುಕ್ರಮದಲ್ಲಿ ಹೆಸರು ಇಡಲಾಗುತ್ತದೆ. ಉದಾಹರಣೆಗೆ ವರ್ಷದಲ್ಲಿ ಮೊದಲು ಅಪ್ಪಳಿಸುವ ಚಂಡಮಾರುತಕ್ಕೆ ‘ಎ’ ಅಕ್ಷರದಿಂದ ಆರಂಭವಾಗುವ ಹೆಸರು ಇಡುತ್ತಾರೆ.

ಚಂಡಮಾರುತವು ಅಪಾರ ಹಾನಿ ಮಾಡಿದರೆ, ಡಬ್ಲ್ಯುಎಂಒದ ಹರಿಕೇನ್‌, ಟೈಫೋನ್‌ ಮತ್ತು ಸೈಕ್ಲೋನ್‌ ಸಮಿತಿಯ ಸದಸ್ಯರು, ಈಗಾಗಲೇ ಇಟ್ಟಿರುವ ಹೆಸರನ್ನು ವಾಪಸ್‌ ಪಡೆಯಲು ಮನವಿ ಮಾಡಬಹುದು. ಸಂಬಂಧಿಸಿದ ಸಮಿತಿಗೆ ಪರ್ಯಾಯ ಹೆಸರನ್ನು ಸೂಚಿಸಬೇಕು. ನಂತರ ಮತದಾನದ ಮೂಲಕ ಹೆಸರು ಆಯ್ಕೆ ಮಾಡಲಾಗುತ್ತದೆ.

ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಸದಸ್ಯ ರಾಷ್ಟ್ರಗಳಾದ ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಥಾಯ್ಲೆಂಡ್‌, ಮ್ಯಾನ್ಮಾರ್‌, ಮಾಲ್ಡೀವ್ಸ್‌, ಒಮನ್‌ ಒಟ್ಟಾಗಿ ಚಂಡಮಾರುತಗಳಿಗೆ ಹೆಸರು ಇಡುವ ನಿರ್ಧಾರವನ್ನು ಕೈಗೊಳ್ಳುತ್ತವೆ.

ಚಂಡಮಾರುತಕ್ಕೆ ಹೆಸರಿಡುವ ಬಗೆ

ಹಿಂದೂ ಮಹಾ ಸಾಗರದಿಂದ ಸುತ್ತುವರಿದಿರುವ ರಾಷ್ಟ್ರಗಳು ಅಪ್ಪಳಿಸುವ ಚಂಡಮಾರುತಕ್ಕೆ 2004ರಿಂದ ಹೆಸರಿಡುತ್ತಿವೆ. ವಿಶ್ವ ಪವನಶಾಸ್ತ್ರ ಸಂಸ್ಥೆ(WMO) ಚಂಡಮಾರುತಗಳಿಗೆ ಹೆಸರಿಡುವ ಕ್ರಮವನ್ನು ಜಾರಿಗೆ ತಂದಿದೆ.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಥೈಲ್ಯಾಂಡ್, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಒಮಾನ್ ಸರತಿಯಂತೆ ಹೆಸರು ಸೂಚಿಸುತ್ತವೆ.

ಈ ಮೇಲಿನ ಎಂಟು ರಾಷ್ಟ್ರಗಳು ಚಂಡಮಾರುತಗಳಿಗೆ ಹೆಸರಿಡಲು ಈಗಾಗಲೇ 64 ಹೆಸರಿನ ಪಟ್ಟಿ ಸಿದ್ಧಪಡಿಸಿವೆ. ಪ್ರತಿ ರಾಷ್ಟ್ರ ಎಂಟು ಹೆಸರು ಸೂಚಿಸುವ ಅವಕಾಶ ಪಡೆದುಕೊಂಡಿವೆ.

ಆಧಾರ: Wikipedia

ರಾಜಕೀಯ

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ ಇಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್

ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ; ನಾವು ಅವರ ಪರವೂ ಇಲ್ಲ,‌ ಇವರ ಪರವೂ

"ನಾವು ಅವರ (ಧರ್ಮಸ್ಥಳ) ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ ಪರ. ಧರ್ಮದ ವಿಚಾರದಲ್ಲಿ ರಾಜಕಾರಣ ಮಾಡಬೇಡಿ ಎಂದಷ್ಟೇ ನಾವು ಹೇಳುತ್ತಿದ್ದೇವೆ": ಡಿಸಿಎಂ ಡಿ.ಕೆ.ಶಿವಕುಮಾರ್ (D.K. Shivakumar)

[ccc_my_favorite_select_button post_id="113000"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ದೊಡ್ಡಬಳ್ಳಾಪುರ: ಹೆಂಡ ಸಾಗಿಸುತ್ತಿದ್ದ ಮಹಿಳೆಯ ಬಂಧನ.. 70 ಲೀಟರ್‌ ಹೆಂಡ ವಶ..!

ನೆರೆ ರಾಜ್ಯದಿಂದ ಅಕ್ರಮವಾಗಿ ಹೆಂಡ (Toddy) ಸಾಗಿಸುತ್ತಿದ್ದ ಮಹಿಳೆಯನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

[ccc_my_favorite_select_button post_id="112911"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!