ದೊಡ್ಡಬಳ್ಳಾಪುರ: ಲಕ್ಷ್ಮೀ ಮತ್ತು ಮೀನ ಅವರ ರಾಜೀನಾಮೆಯಿಂದ ತೆರವಾಗಿದ್ದ ತಾಲೂಕಿನ ಮಜರಾಹೊಸಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.
ಚುನಾವಣೆ ಅಧಿಕಾರಿ ಶಶಿಶೇಖರ್ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಪಿಡಿಒ ರೇವತಿ ಅವರ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
18 ಮಂದಿ ಸದಸ್ಯತ್ವ ಬಲದ ಗ್ರಾಮಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಲೀಲಮ್ಮ ಪಿಳ್ಳೇಗೌಡ, ಉಪಾಧ್ಯಕ್ಷ ಸ್ಥಾನಕ್ಕೆ ಮಾರಪ್ಪ ಎಂ ಅವರು ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಕೆಎಂಎಫ್ ನಿರ್ದೇಶಕ ಬಿ.ಸಿ.ಆನಂದ್ ಕುಮಾರ್, ಮುಖಂಡರಾದ ಬಿ.ಹೆಚ್.ಕೆಂಪಣ್ಣ, ತಿ.ರಂಗರಾಜು, ಆದಿತ್ಯ ನಾಗೇಶ್, ಸಂದೇಶ್, ಬೈರೇಗೌಡ, ಗಂಗಮ್ಮ, ಸುಷ್ಮ, ರುದ್ರಾಣಮ್ಮ ಮತ್ತಿತರರು ಅಭಿನಂದನೆ ಸಲ್ಲಿಸಿದರು.