ದೊಡ್ಡಬಳ್ಳಾಪುರ: ನಗರದ ತಾಲೂಕು ಕಚೇರಿಯಲ್ಲಿ ಒಂದು ಭ್ರಷ್ಟಾಚಾರ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿ ಸರ್ಕಾರಿ ಅಧಿಕಾರಿಗಳು ಯಾರು ಎಂದು ಗೊತ್ತಾಗದೆ ಜನ ಪರದಾಡುವಂತಾಗಿದೆ ಎಂದು ಯುವ ನ್ಯಾಯವಾದಿ ನಿಖಿಲ್ ಎಂ ಎನ್ನುವವರು ಆರೋಪಿಸಿದ್ದಾರೆ.
ಈ ಕುರಿತು ತಾಲೂಕು ಕಚೇರಿಯಲ್ಲಿ ಸೆರೆಹಿಡಿಯಲಾಗಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣ ಫೇಸ್ಬುಕ್ ಅಪ್ಲೋಡ್ ಮಾಡಿ ಅವರು ಆರೋಪಿಸಿದ್ದಾರೆ.
ನಾಲ್ಕು ದಿನಗಳ ಹಿಂದೆ ಪೋಸ್ಟ್ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಳುತ್ತಿದ್ದು, 126 ಶೇರ್, 20 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದ್ದು, ತಾಲೂಕು ಕಚೇರಿಯಲ್ಲಿ ಲಂಚಾವತಾರ ಮಿತಿಮೀರಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಇನ್ನೂ ನಿಖಿಲ್ ಎಂ ಅವರು ಪೊಸ್ಟ್ ಮಾಡಿರುವ ವಿಡಿಯೋ ಸಂದೇಶದಲ್ಲಿ ದೊಡ್ಡಬಳ್ಳಾಪುರ ತಾಲೂಕು ಕಚೇರಿಯಲ್ಲಿ ಒಂದು ಭ್ರಷ್ಟಾಚಾರ ತಾಣವಾಗಿ ಮಾರ್ಪಟ್ಟಿದದೆ. ಇಲ್ಲಿ ಸರ್ಕಾರಿ ಅಧಿಕಾರಿಗಳು ಯಾರು ಎಂದು ಗೊತ್ತಾಗದೆ ಜನ ಪರದಾಡುವಂತಾಗಿದೆ.. ಪ್ರಶ್ನೆ ಮಾಡುವವರಿಗೆ ಧಮ್ಕಿ ಕೂಡ ಹಾಕುತ್ತಾರೆ. ಸರ್ಕಾರಿ ಅಧಿಕಾರಿಗಳೇ ತಮ್ಮ ಚೇಲಗಳನ್ನು ಬಳಸಿಕೊಂಡು ಯಾರಾದ್ರೂ ಪ್ರಶ್ನೆ ಮಾಡಿದ್ರೆ ದಮ್ಕಿ ಹಾಕಿ ಹಣ ವಸೂಲಿ ಮಾಡುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನಗರದ ತಾಲೂಕು ಕಚೇರಿಯಲ್ಲಿ ಒಂದು ಭ್ರಷ್ಟಾಚಾರ ತಾಣವಾಗಿ ಮಾರ್ಪಟ್ಟಿದೆ ಇಲ್ಲಿ ಸರ್ಕಾರಿ ಅಧಿಕಾರಿಗಳು ಯಾರು ಎಂದು ಗೊತ್ತಾಗದೆ ಜನ ಪರದಾಡುವಂತಾಗಿದೆ.
ಇದೇನು ಖುಷಿ ಪಡುವ ಸಂಗತಿಯಲ್ಲ. ಆದರೆ ಸಮಾಜ ಎಷ್ಟರಮಟ್ಟಿಗೆ ಹಾಳಾಗಿದೆ ಈ ಜಾತಿ ವ್ಯವಸ್ಥೆಯಿಂದ, ಅದರಲ್ಲೂ ಕಾನೂನು ಎಷ್ಟರಮಟ್ಟಿಗೆ ಗಟ್ಟಿಯಾಗಿದೆ ಎಂಬುದನ್ನು ತೋರಿಸುವುದಕ್ಕೆ ಉದಾಹರಣೆ ಅಷ್ಟೇ.
ಈ ಜಾತಿವಾದಿಗಳ ಮನಸ್ಸು ಕರಗಿ ಈಗಲಾದರೂ ಅರ್ಥ ಮಾಡಿಕೊಳ್ಳಿ ಎಲ್ಲರನ್ನೂ ಮನುಷ್ಯರಂತೆ ಕಾಣಿ. ಇಲ್ಲಿ
ನಮ್ಮ ನ್ಯಾಯಾಂಗ ವ್ಯವಸ್ಥೆ ಅಂತಿಮ ನ್ಯಾಯ ಹಾಗೇ ಸಮಾಜದಲ್ಲಿ ಇಂಥ ಘಟನೆ ಮರುಕಳಿಸದಿರಲಿ.. ಜೈ ಸಂವಿಧಾನ
ಮಧ್ಯವರ್ತಿಗಳ ಹಾವಳಿ ಹೇಳತೀರದಾಗಿದೆ. ಗಮನಿಸಿ ಸಾರ್ವಜನಿಕರೇ ಇದೆಲ್ಲವೂ ಕೂಡ ಅಧಿಕಾರಿಗಳ ಕುಮ್ಮಕ್ಕಿನಿಂದ ನಡೆಯುತ್ತಿದೆ ಭ್ರಷ್ಟಾಚಾರ ಅನ್ನೋದು ಎಷ್ಟರ ಮಟ್ಟಿಗೆ ನಡೆಯುತ್ತಿದೆ ಅಂದರೆ ಒಬ್ಬ ತಹಸಿಲ್ದಾರ್ ಗೆ ಇದೆಲ್ಲ ಗೊತ್ತಿದ್ದರೂ ಸಹ ಕಣ್ಣು ಮುಚ್ಚಿ ಕುಳಿತಿದ್ದಾನೆ ಎಂದು ಆರೋಪಿಸಿದ್ದಾರೆ.
ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಮಾಡದೇ ಇರುವಂತೆ ಒಬ್ಬ ಮಧ್ಯ ವರ್ತಿ ಹೇಳುತ್ತಾರೆ. ಎಷ್ಟರಮಟ್ಟಿಗೆ ಈ ಕಚೇರಿಗಳು ಬಂದು ನಿಂತಿದೆ. ಬದಲಾಗಿ ಬದಲಾಗುತ್ತಿರಿ ಎಂದು ವಕೀಲರಾದ ನಿಖಿಲ್ ಎಂ ಬರೆದಿದ್ದಾರೆ.
ವಿಡಿಯೋದಲ್ಲಿ ಕೆಆರ್ಎಸ್ ಪಕ್ಷದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಶಿವಶಂಕರ್ ಅವರನ್ನು ಕಾಣಬಹುದಾಗಿದೆ. (ಸಂಗ್ರಹ ಚಿತ್ರ ಬಳಸಲಾಗಿದೆ)