ಹಾವೇರಿ: ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ. ನಮಗೆ ಇರುವುದು ಇದೊಂದೆ ದೇಶ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಶಿಗ್ಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ದುಂಢಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಶಿಗ್ಗಾವಿ ಸವಣೂರು ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿಯವರು ಮಾಡಿರುವ ಅಭಿವೃದ್ಧಿ ಕೆಲಸ ನೋಡಿದರೆ ಯಾರೂ ತಕರಾರು ಮಾಡದೆ ಬಿಜೆಪಿ ಅಭ್ಹರ್ಥಿ ಭರತ್ ಬೊಮ್ಮಾಯಿಗೆ ಮತ ಹಾಕಬೇಕು ಎಂದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಗ್ಯಾರೆಂಟಿ ಯೋಜನೆಗಳನ್ನು ಬಿಟ್ಟು ಹೊಸದೇನಾದರೂ ಹೇಳಿದ್ದಾರಾ ? ದುಂಢಸಿಯಲ್ಲಿ 19 ಎಕರೆ ಜಮೀನು ವಕ್ಪ್ ಆಸ್ತಿ ಮಾಡಿದ್ದಾರೆ. ನಾನು ವಕ್ಪ್ ಬಗ್ಗೆ ಆಗ ಮಾತನಾಡಲು ವಿಶ್ವೇಶ್ವರ್ ಹೆಗಡೆ ಬೊಮ್ನಾಯಿ ಕಾರಣ.
ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತಿರಿ, ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟಿಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ಹಾಪ್ ಮ್ಯಾಡ್ ರಾಹುಲ್ ಗಾಂಧಿ ಮಾತು ಕೇಳುತ್ತೀರಾ ?
ಪ್ರಧಾನಿ ನರೇಂದ್ರ ಮೋದಿಯವರು ಹತ್ತು ವರ್ಷದಲ್ಲಿ ಎಷ್ಟು ಸುಧಾರಣೆ ಮಾಡಿದ್ದಾರೆ.
ಈಗ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ. ಕಾಂಗ್ರೆಸ್ ನವರು ಸೈನ್ಯಕ್ಕೆ ಎಕೆ 47 ಬಳಕೆ ಮಾಡಲು ಅವಕಾಶ ಕೊಡುತ್ತಿರಲಿಲ್ಲ. ಈಗ ಮೋದಿಯವರು ನಮ್ಮ ಸೈನಿಕರಿಗೆ ಎಲ್ಲ ಅವಕಾಶ ಕೊಟ್ಟಿದ್ದಾರೆ. ನೆಹರು ಅವರು ಚೀನಾ ಯುದ್ದದ ಸಂದರ್ಭದಲ್ಲಿ ನಮ್ಮ ಸೈನಿಕರಿಗೆ ಒಂದು ಚಸ್ಮಾ ಕೊಟ್ಟಿರಲಿಲ್ಲ. ಅವರಿಂದ ನಮ್ಮ ಸೈನಿಕರಿಗೆ ಸಾಕಷ್ಟು ಅನ್ಯಾಯವಾಗಿದೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸೋನಿಯಾ ಗಾಂಧಿಗೆ ನಮಸ್ಕಾರ ಮಾಡಿಕೊಂಡು ತಿರುಗಾಡಿದರು. ನಮ್ಮ ಪ್ರಧಾನಿ ನಾನು ಪ್ರಧಾನ ಸೇವಕ ಯಾರೂ ಕಾಲಿಗೆ ಬೀಳಬೇಕಿಲ್ಲ ಎಂದರು. ಬಸವರಾಜ ಬೊಮ್ಮಾಯಿಯವರು ಸಿಎಂ ಆದ ಕೂಡಲರೆ ನಾನು ಚೀಪ್ ಮಿನಿಸ್ಟರ್ ಅಲ್ಲಾ ಕಾಮನ್ ಮ್ಯಾನ್ ಅಂತ ಹೇಳಿದರು ಎಂದರು.
ವಕ್ಪ್ ಕಾಯಿದೆ ಎಷ್ಟು ಅಪಾಯಕಾರಿ ಇದೆ ನೋಡಿ, ಅವರು ಮೂವತ್ತು ಪರ್ಸೆಂಟ್ ಜನಸಂಖ್ಯೆ ಆದರೆ, ನಮ್ಮವರು ಯಾರೂ ಶಾಸಕರಾಗಲು ಸಾಧ್ಯವಿಲ್ಲ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರಿಗೆ ಹೊಲಿಕೆ ಮಾಡಿ ನೋಡಿ, ಅವರ ಅಭ್ಯರ್ಥಿ ಬಗ್ಗೆ ಅಜ್ಜಂಪೀರ್ ಖಾದ್ರಿನೇ ಅವನ ಬಣ್ಣ ಬಿಚ್ಚಿದ್ದಾನೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ನಮ್ಮ ಮುಖಾ ನೋಡಿ ಮತ ಹಾಕಿ ಎನ್ನುತ್ತಾರೆ. ನಾವು ಯಾರ ಮುಖ ನೋಡಿ ಹಾಕಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪಿಎ ಮೂಲಕ ಸರ್ಕಾರಿ ಅಧಿಕಾರಿನ ಕೊಂದಿದ್ದಿರಿ, ತಿಮ್ಮಾಪುರ 900 ಕೋಟಿ ಲೂಟಿ ಮಾಡಿದ್ದಾರೆ. ನೀವು ಹಿಂಗೆ ಇದ್ದರೆ ಎಲ್ಲ ಆಸ್ತಿ ಹೋಗುತ್ತದೆ. ಎರಡು ಸಾವಿರ ರೂಪಾಯಿ ಮಾತ್ರ ಉಳಿಯುತ್ತದೆ ಎಂದರು.
ನಾವು ಬಿಜೆಪಿ ಅವಧಿಯಲ್ಲಿ ನನಗೆ ಮಂತ್ರಿ ಸ್ಥಾನ ಬೇಡ ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ನಮ್ಮ ಸರ್ಕಾರದ ವಿರುದ್ದವೇ ಹೋರಾಟ ಮಾಡಿದ್ದೇವು, ಆಗ ಸಿಎಂ ಆಗಿದ್ದ ಬಸವರಾಜ ಬೊಮ್ಮಾಯಿಯವರು, ನಮಗೆ ಪ್ರವರ್ಗ 2 ಡಿ ಅಡಿಯಲ್ಲಿ ಮೀಸಲಾತಿ ಅವಕಾಶ ಕಲ್ಪಿಸಿದ್ದರು. ಈ ಸರ್ಕಾರ ಅದನ್ನು ಪಾಲಿಸಲಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜೋರಾಗಿ ಮಾತನಾಡುತ್ತಿದ್ದರು. ಈಗ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಹೇಳಿದರು.
ನಮ್ಮ ಧರ್ಮ ದೇಶ ಉಳಿಯಬೇಕೆಂದರೆ ಹಿಂದುಗಳು ಎಲ್ಲರೂ ಒಟ್ಟಾಗಬೇಕು. ಭರತ್ ಬೊಮ್ಮಾಯಿಯನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗೆ ಪಾಠ ಕಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಆರಗ ಜ್ಞಾನೇಂದ್ರ ಹಾಜರಿದ್ದರು.