ಚಿಕ್ಕಬಳ್ಳಾಪುರ: ರಸ್ತೆ ವಿಸ್ತರಣೆ ಸಂದರ್ಭ ಅನೇಕ ವರ್ತಕರು ತಮ್ಮ ಜಾಗ ಕಳೆದುಕೊಂಡಿದ್ದಕ್ಕೆ ಸೂಕ್ತ ಪರಿಹಾರ ನೀಡದ ಕಾರಣ ಉಪವಿಭಾಗಧಿಕಾರಿ ಕಚೇರಿಯ ವಾಹನ ಸಮೇತ ಚರಾಸ್ತಿ ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ.

ಈ ಬಗ್ಗೆ ವಾದ-ಪ್ರತಿವಾದ ಆಲಿಸಿದ್ದ ನಗರದ ಹಿರಿಯ ಸಿಬಿಲ್ ನ್ಯಾಯಾಲಯವು ಕಚೇರಿಯ ಕುರ್ಚಿಗಳು, ಮೇಜು ಕಂಪ್ಯೂಟರ್ ಸೇರಿ ಇತರ ವಸ್ತುಗಳನ್ನು ಜಪ್ತಿ ಮಾಡುವಂತೆ ಆದೇಶಿಸಿದೆ.
ನ್ಯಾಯಾಲಯದ ಆದೇಶ ಬಂದ ನಂತರದಲ್ಲಿ ಇಂದು ವರ್ತಕರು ಕೋರ್ಟ್ ಸಿಬ್ಬಂದಿ ಜೊತೆಗೆ ಎಸಿ ಕಚೇರಿಗೆ ಬಂದು ಪೀಠೋಪಕರಣ, ಇನ್ನಿತರೆ ವಸ್ತುಗಳನ್ನು ಹೊರಗೆ ತಂದರು.
ಅಧಿಕಾರಿಗಳ ವಾಹನ, ಪೀಠೋಪಕರಣಗಳು ಸೇರಿದಂತೆ ಇತರ ವಾಹನಗಳ ಜಪ್ತಿ
ಕೋರ್ಟ್ ಬಳಿಯಿಂದ ನ್ಯಾಷನಲ್ ಕಾಲೇಜಿನವರೆಗೆ ಡಿ.ವಿ.ಜಿ ರಸ್ತೆಯನ್ನು 100 ಅಡಿವರೆಗೂ ವಿಸ್ತರಣೆ ಮಾಡಲಾಗಿತ್ತು. ಆ ಸಂದರ್ಭ ಅಂದಾಜು 390 ಅಂಗಡಿ ಮಾಲೀಕರು ಜಾಗ ಕಳೆದೊಂಡ ಆರೋಪವಿತ್ತು.
ಹೀಗಾಗಿ ಚದುರ ಅಡಿಗೆ 280 ರೂಪಾಯಿ ಪರಿಹಾರವನ್ನು ಅಂಗಡಿ ಮಾಲೀಕರಿಗೆ ನಿಗದಿ ಮಾಡಲಾಗಿತ್ತು. ಆದರೆ 32 ವರ್ತಕರು ತಮಗೆ ಈ ಮೊತ್ತದ ಪರಿಹಾರ ಸಾಕಾಗಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ್ದ ಕೋರ್ಟ್ ಚದುರ ಅಡಿಗೆ ರೂ.850 ನಿಗದಿ ಮಾಡಿತ್ತು. ಹೀಗಿದ್ದೂ ಈ ಮೊತ್ತವನ್ನೂ ನೀಡಿಲ್ಲ ಎಂದು ಸಂತ್ರಸ್ತ ಅಂಗಡಿ ಮಾಲೀಕರು ಕೋರ್ಟ್ ಮೊರೆ ಹೋಗಿದ್ದರು.