ಚೆನ್ನೈ, (Video): ತಮಿಳುನಾಡಿನ ಒಬ್ಬ ಪಾನೀಪುರಿ ಮಾರಾಟಗಾರನ ವಾರ್ಷಿಕ ಪಾನಿಪುರಿ
ವಹಿವಾಟು 40 ಲಕ್ಷ ರು. ದಾಟಿದ ಹಿನ್ನೆಲೆ ಕೇಂದ್ರ ಆದಾಯ ತೆರಿಗೆ ಇಲಾಖೆ ತೆರಿಗೆ ನೋಟಿಸ್ ಜಾರಿ ಮಾಡಿದೆ.
ಅಚ್ಚರಿಯಾದರೂ ಇದು ಸತ್ಯ…! ಪಾನಿಪುರಿ ಮಾರಾಟಗಾರನ ವಾರ್ಷಿಕ ಆದಾಯ 40 ಲಕ್ಷ ರು. ಗೂ ಮೀರಿದೆ ಎಂದು ಕೇಂದ್ರ ಆದಾಯ ತೆರಿಗೆ ಇಲಾಖೆಗೆ ನಿಖರವಾಗಿ ತಿಳಿಯಲು ಕಾರಣವಾಗಿದ್ದು ಡಿಜಿಟಲ್ ಪಾವತಿ ವ್ಯವಸ್ಥೆ.
ಪಾನೀಪುರಿ ತಿಂದ ಗ್ರಾಹಕರು ಆನ್‌ಲೈನ್ ಮೂಲಕ ಹಣ ಪಾವತಿ ಮಾಡುತ್ತಿದ್ದು, ಪಾನೀಪುರಿ ಮಾರಾಟಗಾರನ ವಾರ್ಷಿಕ ಆದಾಯ ಎಷ್ಟು ಎಂಬುದು ತಿಳಿದು ಬಂದಿದೆ. ನೋಟಿಸ್‌ನಲ್ಲಿ ಪಾನೀಪುರಿ ಮಾರಾಟಗಾರನ ವಾರ್ಷಿಕ ಆದಾಯ ಜಿಎಸ್ಟಿ ಕಾಯ್ದೆಯಲ್ಲಿ ನಮೂದಿಸಿದ ಮಿತಿ ಯನ್ನು ಮೀರಿದೆ.
ಸರಕು ಮತ್ತು ಸೇವೆಗಳ ಹೊರಗಿನ ಪೂರೈಕೆಗಾಗಿ ಹಣ ಸ್ವೀಕರಿಸಿದ್ದಾನೆ ಎನ್ನುವ ಕಾರಣಕ್ಕೆ ಆತನ ಆದಾಯದ ಮೇಲೆ ಜಿಎಸ್‌ಟಿ ಹಾಕಲಾಗಿದೆ ಎಂದು ಇಲಾಖೆ ತಿಳಿಸಿದೆ.
ಜಿಎಸ್‌ಟಿ ಕಾಯ್ದೆಯ ಸೆಕ್ಷನ್ 22(1)ರಡಿ ಸರಕು ಅಥವಾ ಸೇವೆಗಳ ಪೂರೈಕೆಯಲ್ಲಿರುವ ಯಾವುದೇ ವ್ಯಾಪಾರಿ, ತಮ್ಮ ಒಟ್ಟು ವಹಿವಾಟು ನಿಗದಿತ ಮೊತ್ತಕ್ಕಿಂತ ಹೆಚ್ಚಿದ್ದರೆ ಜಿಎಸ್‌ಟಿ ನೋಂದಣಿ ಮಾಡಿಸಬೇಕಾಗುತ್ತದೆ.
ಹಣಕಾಸು ವರ್ಷ ದಲ್ಲಿ 20 ಲಕ್ಷ ರು. ತೆರಿಗೆ ಮೂಲ ವಿಸ್ತರಿಸಲು ಮತ್ತು ಆದಾಯ ಸೋರಿಕೆ ನಿಯಂತ್ರಿಸಲು ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ಡಿಜಿಟಲ್ ಪಾವತಿ ಡೇಟಾವನ್ನು ನಿಯಂತ್ರಿಸುವುದು ಹೆಚ್ಚಿನ ವ್ಯವಹಾರಗಳನ್ನು ತೆರಿಗೆ ವ್ಯಾಪ್ತಿಗೆ ತರುವ ಕ್ರಮವಾಗಿದೆ.
GST Notice To Panipuri Vendor: पानी पूरी वाले को मिला GST का नोटिस,
— Mohini Of Investing (@MohiniWealth) January 4, 2025
Basant Maheshwari भी हैरान pic.twitter.com/O7E0nyTUbC
ಜಿಎಸ್ಟಿ ನೋಟಿಸ್ ಕೇವಲ ಸಮನ್ಸ್ ಆಗಿದೆಯೇ ಹೊರತು ಬೇಡಿಕೆಯ ಆದೇಶವಲ್ಲ. ಈ ಬಗ್ಗೆ ಮಾರಾಟಗಾರನ ಅಹವಾಲು ಆಲಿಸಲಾಗುವುದು ಎಂದು ಇಲಾಖೆಯ ಮೂಲಗಳು ಹೇಳಿವೆ.