ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಕಸಬಾ ಹೋಬಳಿಯ ಕೊನಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರ್ಕಾವತಿ ಕ್ಷೇತ್ರದಲ್ಲಿ 71ನೇ ವರ್ಷದ ಶ್ರೀ ಸೀತಾರಾಮಚಂದ್ರ ಸ್ವಾಮಿಯ ಬ್ರಹ್ಮ ರಥೋತ್ಸವವು ಸಂಭ್ರಮದಿಂದ ನಡೆಯಿತು.
ರಥೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸೀತಾರಾಮ ಕಲ್ಯಾಣೋತ್ಸವ, ಹಾಗೂ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.
ತಾಲೂಕಿನ ವಿವಿದೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹೂವು ಹಣ್ಣು ಸಮರ್ಪಿಸಿ, ಶ್ರೀ ಸೀತಾರಾಮಚಂದ್ರ ಸ್ವಾಮಿಯ ದರ್ಶನ ಪಡೆದರು.
ರಥೋತ್ಸವದ ಅಂಗವಾಗಿ ಹಮಾಮ್, ಶಿವಪುರ, ಮುತ್ಸಂದ್ರ ಗ್ರಾಮಸ್ಥರಿಂದ ಪ್ರಸಾದ ವಿನಿಯೋಗ ನಡೆಯಿತು.
ಅರ್ಕಾವತಿ ಕ್ಷೇತ್ರದಲ್ಲಿ ಮುಜರಾಯಿ ಇಲಾಖೆಗೆ ಸೇರಿದ ಶ್ರೀ ಸೀತಾರಾಮಚಂದ್ರ ಸ್ವಾಮಿಯ ದೇವಾಲಯದಲ್ಲಿ ಕಳೆದ 70 ವರ್ಷಗಳಿಂದ ಸೀತಾರಾಮಚಂದ್ರಸ್ವಾಮಿಯ ಬಹ್ಮ ರಥೋತ್ಸವ ನಡೆಯುತ್ತಿದೆ.