6 years of Pulwama attack

ಪುಲ್ವಾಮ ದಾಳಿಗೆ 6 ವರ್ಷ; ಮಾಸಿಲ್ಲ ಆ ಭಯಾನಕ ಘಟನೆಯ ನೆನಪು

ನವದೆಹಲಿ: ಪುಲ್ವಾಮ ಉಗ್ರರ ದಾಳಿ (PulwamaTerrorAttack) ನಡೆದು ಇಂದಿಗೆ ಆರು ವರ್ಷ, ಈ ಆ ಕರಾಳ ಘಟನೆಯಲ್ಲಿ ಉಗ್ರರದಾಳಿಗೆ ಭಾರತಾಂಬೆಯ ಹೆಮ್ಮೆಯ ಸೈನಿಕರು ಹುತಾತ್ಮರಾಗಿದ್ದರು.

2019ರ ಫೆಬ್ರವರಿ 14 ರಂದು ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನ ಉಗ್ರರು ಆತ್ಮಹತ್ಯಾ ಬಾಂಬರ್ ಮೂಲಕ ದಾಳಿ ಮಾಡಿದ್ದರು. ಘಟನೆಯಲ್ಲಿ ಉಗ್ರರದಾಳಿಯಲ್ಲಿ 40 ಮಂದಿ ಸೈನಿಕರು ಹುತಾತ್ಮರಾಗಿದ್ದರು.

ಇಂದು ದೇಶಾದ್ಯಂತ ಪುಲ್ವಾಮಾ ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಈ ಗೌರವ ಸಲ್ಲಿಸಲಾಗುತ್ತಿದ್ದು, ಈ ಭಯಾನಕ ಘಟನೆಯ ನೆನಪು ಮಾತ್ರ ಇನ್ನು ಮಾಸಿಲ್ಲ.

ಸರಿಯಾಗಿ ಆರು ವರ್ಷಗಳ ಹಿಂದೆ, ಫೆಬ್ರವರಿ 14ರ ಅಪರಾಹ್ನ 3 ಗಂಟೆ ಸಮಯ ಜಮ್ಮುವಿನ ಪುಲ್ವಾಮಾ ಜಿಲ್ಲೆಯಲ್ಲಿ ಜೈಕ್ ಇ ಮೊಹಮ್ಮದ್‌ಇಎಂಬ ಸಂಘಟನೆಯ ಉಗ್ರಗಾಮಿಗಳನ್ನು ಮತ್ತು ಸ್ಫೋಟಕಗಳನ್ನು ಹೊತ್ತ ವಾಹನ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಸಿಆರ್ ಪಿಎಫ್‌ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯಿತು.

ಜೈಷ್ ಮೊಹಮ್ಮದ್ ಸಂಘಟನೆಯ ಆತ್ಮಹತ್ಯಾ ದಾಳಿಕೋರ ಯೋಧರ ಬೆಂಗಾವಲು ವಾಹನದ ಮೇಲೆ ಡಿಕ್ಕಿ ಹೊಡೆದಾಗ ಸುಮಾರು ಸುಮಾರು 40 ಯೋಧರು ಸ್ಥಳದಲ್ಲಿಯೇ ಹುತಾತ್ಮರಾದರು.

ಈ ದಾಳಿಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಕ್ಷಭೇದ ಮರೆತು ರಾಜಕೀಯ ನಾಯಕರು, ಸಮಾಜದ ಗಣ್ಯರು ಘಟನೆಯನ್ನು ಖಂಡಿಸಿದರು. ಈ ಭೀಕರ ದಾಳಿಗೆ ಇಡೀ ಭಾರತವೇ ಶೋಕ ಸಾಗರದಲ್ಲಿ ಮುಳುಗಿತ್ತು.

ಪ್ರತೀಕಾರ

ಇನ್ನು ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಪಡೆಯು 2019ರ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನಲ್ಲಿ ಜೈಶ್ ಎ ಮೊಹಮ್ಮದ್ ಉಗ್ರ ಸಂಘಟನೆ ಶಿಬಿರಗಳನ್ನು ಗುರಿಯಾಗಿಸಿಕೊಂಡು ವಾಯುದಾಳಿ ನಡೆಸಿತು.

12 ಮಿರಾಜ್- 2000 ಫೈಟರ್ ಜೆಟ್‌ಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದವು. 350 ಉಗ್ರರ ಶಿಬಿರಗಳನ್ನು ಪುಡಿಗಟ್ಟಲಾಗಿತ್ತು.

ಸಂಚುಕೋರರು ಸಿಕ್ಕಿಲ್ಲ

ದಾಳಿ ನಡೆದು ಆರು ವರ್ಷಗಳು ಕಳೆದರೂ ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಸೇರಿದಂತೆ ಪ್ರಮುಖ ಸಂಚುಕೋರರು ಇಲ್ಲಿಯವರೆಗೂ ಸಿಕ್ಕಿಲ್ಲ. ಅಲ್ಲದೆ ಅಷ್ಟು ದೊಡ್ಡ ಪ್ರಮಾಣದ ಸ್ಪೋಟಕ ದೇಶದ ಒಳಗೆ ಹೇಗೆ ಬಂತು ಎಂಬುದಕ್ಕೆ ಉತ್ತರಕೂಡ ಸಿಕ್ಕಿಲ್ಲ.

ಈ ದುಷ್ಕೃತ್ಯವೆಸಗಿದ ಪಾಪಿಗಳನ್ನು ನಮ್ಮ ವಶಕ್ಕೆ ಒಪ್ಪಿಸಿ ಎಂದು ಭಾರತ ಬರೆದಿದ್ದರೂ, ಪಾಕಿಸ್ತಾನ ಮಾತ್ರ ಯಾವ ಪತ್ರಗಳಿಗೆ ಉತ್ತರಿಸುವ ಗೋಜಿಗೂ ಹೋಗಿಗಿಲ್ಲ.

ಈ ದಾಳಿಯಲ್ಲಿ ಭಾಗಿಯಾದ 19 ಉಗ್ರರ ಪೈಕಿ 15 ಮಂದಿಯನ್ನು ವಿವಿಧ ಕಾರ್ತಾಚರಣೆಗಳ ಸಂದರ್ಭದಲ್ಲಿ ಬಂಧಿಸಲಾಗಿದೆ. ಇಲ್ಲವೇ ಹತ್ಯೆ ಮಾಡಲಾಗಿದೆ.

ಆಜರ್, ಆತನ ಸಹೋದರ ರಾವುಫ್ ಅಸ್ಕರ್ ಮತ್ತು ಅವನ ಸಂಬಂಧಿ ಅಮ್ಮರ್ ಅಲ್ಲಿ ತಲೆಮರೆಸಿಕೊಂಡಿದ್ದಾರೆ.

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!