ದೊಡ್ಡಬಳ್ಳಾಪುರ (Doddaballapura): ತಾಲೂಕಿನ ಸರ್ಕಾರಿ ಶಾಲೆಗಳಿಗೆ ಕಿಡಿಗೇಡಿಗಳ ಉಪಟಳ ತೀವ್ರವಾಗುತ್ತಿದ್ದು, ಶಿಕ್ಷಕರು, ಮಕ್ಕಳು ಸಮಸ್ಯೆಗೆ ಸಿಲುಕುವಂತಾಗಿದೆ.
ಇದಕ್ಕೆ ಪೂರಕವೆಂಬಂತೆ ನಗರದ ರೋಜಿಪುರ ಸರ್ಕಾರಿ ಶಾಲೆಗೆ ಸುಗ್ಗಿರುವ ದುಷ್ಕರ್ಮಿಗಳು, ಶಾಲೆಗೆ ನುಗ್ಗಿ ಕಳ್ಳತನವೆಸಗಿದ್ದು, ಇಲ್ಲಿನ ವಸ್ತುಗಳನ್ನು ದ್ವಂಸಗೊಳಿಸಿದ್ದಾರೆ.
ಗುರುವಾರ ನಡೆದ ವೆಂಕಟರಮಣ ಸ್ವಾಮಿ ರಥೋತ್ಸವದ ಹಿನ್ನೆಲೆಯಲ್ಲಿ ರೋಜಿಪುರ ಸರ್ಜರಿ ಶಾಲೆಗೆ ರಜೆ ನೀಡಲಾಗಿದೆ. ಅದೇ ದಿನ ರಾತ್ರಿ ಕೆಲ ಪುಂಡರು ಶಾಲೆಗೆ ನುಗ್ಗಿದ್ದು, ದ್ವಜ ಸ್ಥಂಭದ ಬಳಿ ಅಳವಡಿಸಿದ್ದ ಇಟ್ಟಿಗೆ ಸಾಲನ್ನು ನಾಶಪಡಿಸಿದ್ದಾರೆ.
ಅಲ್ಲದೆ ಬಾಗಿಲುಗಳನ್ನು ವಿರೂಪಗೊಳಿಸಿದ್ದು, ಶಾಲೆಯ ಸೌಂಡ್ ಸಿಸ್ಟಮ್ ಹಾಳು ಮಾಡಿದ್ದಲ್ಲದೆ, ಕೊಠಡಿಯೊಳಗಿನ ವಿದ್ಯುತ್ ಸ್ವಿಚ್ ಬಾಕ್ಸ್ ಗಳನ್ನು ಒಡೆದು ಹಾಕಿದ್ದಾರೆ. ಹಾಗೂ ಕಲಿಕೋಪಕರಣಗಳನ್ನು ಕದ್ದೊಯ್ದಿದ್ದಾರೆ.
ಈ ಶಾಲೆ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು, ವಿದ್ಯುತ್, ಶಿಕ್ಷಕರು ಸಮಸ್ಯೆ ತೊಂದರೆಗೆ ಒಳಗಾಗುವಂತಾಗಿದೆ.
ಈ ಕುರಿತು ಶಾಲೆಯ ಎಸ್ಡಿ ಎಂಸಿ ಅಧ್ಯಕ್ಷರು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದುಷ್ಕರ್ಮಿಗಳು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.