ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮತ್ತು ಯಡಿಯೂರಪ್ಪ ಬಿಜೆಪಿಗೆ ಅನಿವಾರ್ಯ ಎಂಬಂತೆ ಬೇಕಾಬಿಟ್ಟಿ ವರದಿ ಪ್ರಸಾರ ಮಾಡುತ್ತಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಖಾಸಗಿ ಸುದ್ದಿವಾಹಿನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಶಿಸ್ತು ಸಮಿತಿಯ ಶೋಕಾಸ್ ನೋಟಿಸ್‌ಗೆ ಉತ್ತರ ಏನು ಕೊಟ್ಟಿದ್ದೀರಿ ಎಂಬ ಸುದ್ದಿವಾಹಿನಿಗಳ ಪ್ರಶ್ನೆಗೆ ಗರಂ ಆದ ಯತ್ನಾಳ್, ನನಗೆ ನೋಟಿಸ್ ಬರುವ ಮುನ್ನವೇ ನಿಮಗೆ ನೋಟಿಸ್ ತಲುಪಿಸಿದ್ದು ವಿಜಯೇಂದ್ರ ಅವನನ್ನೇ ಹೋಗಿ ಕೇಳಿ, ನನ್ನ ಏನ್ ಕೇಳ್ತಿರಿ.
ನನಗೆ ನೋಟಿಸ್ ಬರೋ ಮುಂಚೆ ಖಾಸಗಿ ಸುದ್ದಿ ವಾಹಿನಿಗಳು ವಿಜೃಂಭಿಸಿ ವರದಿ ಮಾಡಿದವು, ನನಗೆ ಬಂದಿಲ್ಲ ಬಂದ ನಂತರ ಉತ್ತರ ಕೊಡುವೆ ಎಂದು ಟ್ವಿಟ್ ಮಾಡಿದೆ. ಆದರೆ ನೀವೆ ವರದಿ ಮಾಡ್ತೀರಿ.. ಯತ್ನಾಳ್ ನೋಟಿಸ್ ಗೆ ಕ್ಯಾರೆ ಅನ್ನೋದಿಲ್ಲ, ಇಂತವ್ ಬಹಳ ಬಂದಿದೆ ಅಂತ.. ಇದನ್ನ ನಾ ಎಲ್ ಹೇಳಿದ್ದೀನಿ, ಎಲ್ಲಾದ್ರೂ ಸಾಕ್ಷಿ ಇದೆಯಾ.? ಯಾವ್ ಮಾಧ್ಯಮದವ್ರತ್ರ ಇದೆ ಹೇಳಿ ನೋಡುವ.
ನೀವೇ ಸೃಷ್ಟಿ ಮಾಡ್ಕೋತಾ ಇದ್ದೀರಿ, ನಿಮಗೆ ಬೇಕಾಗಿರೋದ್ ವಿಜಯೇಂದ್ರ, ಅವರಪ್ಪ. ಮೀಡಿಯಾದೋರ್ ಏನ್ ಮಾಡುದ್ರು ನನಗೇನು ಆಗೋದಿಲ್ಲ.
ಅಲ್ರಿ ನಿನ್ನೆ ಒಂದ್ ಹೊಡೆದಿದ್ದೀರಿ, ಕ್ಯಾಕರಿಸಿ ಉಗ್ದಿದ್ದಾರೆ ಅಂತ..ಮಾನ ಮರ್ಯಾದೆ ಇದೆಯೇನ್ರಿ ಮಾಧ್ಯಮಗಳಿಗೆ, ಕ್ಯಾಕರಿಸಿ ಉಗ್ದಿರೋದಕ್ಕೆ ಸಾಕ್ಷಿ ಏನ್ ಇದೆ..? ಏನ್ ಉಗುದ್ರು ನನಗೆ ಬರಬೇಕಲ್ವಾ..? ನಿಮ್ಮ ಮೀಡಿಯಾ ದವರಿಗೆ ಮೌಲ್ಯಗಳಿದ್ದರೆ ಬಿಡುಗಡೆ ಮಾಡಿ ಕ್ಯಾಕರಿಸಿ ಉಗ್ದಿರೋದು.
ಸುಮ್ ಸುಮ್ನೆ ನಿಮ್ಮ ಟಿಆರ್‌ಪಿ ಹೆಚ್ಚು ಮಾಡಿಕೊಳ್ಳೋದಕ್ಕೆ, ವಿಜಯೇಂದ್ರ ಅವರಪ್ಪನ ವೈಭವಿಕರ ಮಾಡೋದಕ್ಕೆ, ವಿಜಯೇಂದ್ರ ಅನಿವಾರ್ಯ ಬಿಜೆಪಿ ಅಂತ ಬಿಂಬಿಸೋದಕ್ಕೆ, ಕೆಲವೊಂದು ಮಾಧ್ಯಮಗಳು ವ್ಯವಸ್ಥಿತವಾಗಿ ಮಾಡ್ತಾ ಇರೋದು ನೈತಿಕತೆ ಬಿಟ್ಟು ಈ ಕೆಲಸ ಮಾಡಿ.
ಶಿಸ್ತು ಸಮಿತಿ ಕ್ಯಾಕರಿಸಿ ಉಗ್ದಿದೆ ಅಂತ ಸುದ್ದಿ ಮಾಡ್ತೀರಿ, ಬಾಯಿಗ್ ಬಂದಾಗ್ ಮಾಡ್ತಿರಿ, ಇವತ್ ಪೇಪರಲ್ಲೂ ಬಂದಿದೆ, ನಿಮಗೆ ವಿಜಯೇಂದ್ರ, ವಿಜಯೇಂದ್ರ ಆಗೋಗಿದೆ ಎಂದು ಹರಿಹಾಯ್ದರು.
ಈ ವೇಳೆ ಸುದ್ದಿಗಾರರು ಎಲ್ಲಾ ಮಾಧ್ಯಮಗಳ ಬಗ್ಗೆ ಮಾತಾಡಬೇಡಿ, ಆ ರೀತಿ ಮಾಡಿರುವ ಮಾಧ್ಯಮದ ಬಗ್ಗೆ ಮಾತ್ರ ಮಾತಾಡಿ ಎಂದಿದಕ್ಕೆ, ಯಾರ್ ಮಾಡಿದ್ದಾನೋ ಅವನಿಗೆ ಆಗುತ್ತೆ ಬಿಡಿ, ಅವನಿಗೆ ಗೊತ್ತಿರುತ್ತೆ.
ಯಾವ ಮಾಧ್ಯಮಕ್ಕೆ ಯತ್ನಾಳ್ ಬಗ್ಗೆ ಅಭಿಮಾನ ಇಲ್ವೋ ಬಿಟ್ ಬಿಡಿ, ವಿಜಯೇಂದ್ರನ ಮನೆ ಮುಂದೆ ಭಜನೆ ಮಾಡ್ಕೊಂಡ್ ಕೂತ್ಕೊಳಿ.
ಅಲ್ಲಾ ರೀ ನನಗೆ ಹೈಕಮಾಂಡ್ ನೋಡಿಸ್ ಕೊಟ್ಟಿರುವ ಬಗ್ಗೆ ಅವನಿಗೆ ಹೇಗೆ ಗೊತ್ತಾಯ್ತು ರೀ? ಯಾರು ಈ ವಿಜಯೇಂದ್ರ ಎಂದು ಕುಟುಕಿದರು.
ಶೋಕಾಸ್ ನೋಟಿಸ್ ಪ್ರತಿ ಮೀಡಿಯಾಗಳಿಗೆ ಯಾರು ಕೊಟ್ಟವರು? ವಿಜಯೇಂದ್ರ ತಾನೇ? ಆ ನೋಟಿಸ್ ಗೆ ಉತ್ತರ ಕೊಟ್ಟಿದ್ದೀನೋ, ಇಲ್ಲವೋ ಅಂತಾ ಅವನ ಬಳಿಯೇ ಕೇಳಿಕೊಳ್ಳಿ ನನಗೆ ಮೇಲ್ ಗೆ ನೋಟಿಸ್ ಬರುವ ಮುನ್ನವೇ ಬಹಿರಂಗ ಆಗುತ್ತೆ ಎಂದರೆ ಏನರ್ಥ?
ನನಗೆ ನೋಟಿಸ್ ಕೊಟ್ಟಿದ್ದಾರೆ ಅಂದರೆ, ನೋಟೀಸ್‌ಗೆ ಉತ್ತರನೂ ಅವನೇ ಕೊಟ್ಟಿರಬೇಕಲ್ವಾ? ಅದನ್ನು ರಿಲೀಸ್ ಮಾಡಿದ್ದೇ ವಿಜಯೇಂದ್ರ ಎಂದು ಕೆಂಡಾಮಂಡಲರಾದರು.
ಸೋಷಿಯಲ್ ಮೀಡಿಯಾದಲ್ಲಿ ಬೇಕಾಬಿಟ್ಟಿ ಮಾತನಾಡಿಸುವುದು. ನಮ್ಮ ಉತ್ತರ ಕರ್ನಾಟಕ ನಮ್ಮ ಭಾಷೆ ಉಪಯೋಗ ಮಾಡಿದರೆ ವಿಜಯೇಂದ್ರ ಅಲ್ಲ ಅವರ ಅಪ್ಪನೂ ಏನೂ ಮಾಡೋಕಾಗಲ್ಲ ಎಂದು ಗುಡುಗಿದರು.