Daily story; punishment

ಹರಿತಲೇಖನಿ ದಿನಕ್ಕೊಂದು ಕಥೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ

Daily story; ಕಾಮಿಕ್ಸ್​ಗಳ ಲೋಕದಲ್ಲಿ ವಿಹರಿಸದವರು ಯಾರಿದ್ದಾರೆ ಹೇಳಿ..? ಕಲ್ಪನೆಯ ರೆಕ್ಕೆಗಳಿಗೆ ಜೀವ ತುಂಬಿ ಹಾರಾಡುವ ಈ ಪಾತ್ರಗಳು ನಗು ಉಕ್ಕಿಸುತ್ತವೆ, ಘಟನೆ ಅಥವಾ ರೂಪಕದ ಮೂಲಕ ಸಂದೇಶ ರವಾನಿಸುತ್ತವೆ.

‘ಹಠ ಒಳ್ಳೆಯದಲ್ಲ’, ‘ಸುಳ್ಳು ಹೇಳಿದರೆ ಆಗುವ ಫಜೀತಿ’, ‘ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತದೆ’ ಈ ಬಗೆಯ ಸಂದೇಶಗಳನ್ನೆಲ್ಲ ಮಕ್ಕಳಲ್ಲಿ ಕಾಮಿಕ್ಸ್ ಹೀರೋಗಳ ಮೂಲಕ ಬಿತ್ತುತ್ತಿರುವ ಹೊಸ ಜಮಾನಾ ಇದು.

ಕಾಮಿಕ್ಸ್ ಹೀರೋಗಳನ್ನು ಮಕ್ಕಳು ಮಾತ್ರವಲ್ಲ ದೊಡ್ಡವರೂ ಇಷ್ಟಪಡುತ್ತಾರೆ. ಮಕ್ಕಳು ಆಟವಾಡುವಾಗ ಏನಾದರೂ ತೊಂದರೆ ಆದರೆ ‘ಸ್ಪೈಡರ್​ವ್ಯಾನ್ ಅನ್ನು ಕರೆದುಬಿಡ್ತೀನಿ ನೋಡು’ ಅಂತ ಬಾಲಭಾಷೆಯಲ್ಲಿ ಹೇಳುವಾಗ ಅವರ ಭಾವಲೋಕದ ತುಂಬೆಲ್ಲ ಈ ಹೀರೋಗಳು, ಪಾತ್ರಗಳು ಎಷ್ಟು ಗಾಢವಾಗಿ ಕುಳಿತಿವೆ ಎಂಬುದು ಅರಿವಾಗುತ್ತದೆ. ಆದರೆ, ಇಂಥ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸುವುದು ತಮಾಷೆಯ ಮಾತಲ್ಲ. ಅದಕ್ಕೆ ಅಸಾಧಾರಣ ಸೃಜನಶೀಲತೆ ಬೇಕು.

ಈ ಗುಣವೈಶಿಷ್ಟ್ಯ ಹೊಂದಿದ್ದರಿಂದಲೇ ಸ್ಟಾನ್ ಲೀ (ಮೂಲಹೆಸರು Stanley Martin Liebe) ಸ್ಪೈಡರ್​ವ್ಯಾನ್ ಸೇರಿದಂತೆ ಹಲವು ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿದರು.

ತುಂಬು ಜೀವನಪ್ರೀತಿಯ, ಪ್ರತಿ ಕೆಲಸವನ್ನು ಪರಿಪೂರ್ಣತೆಯಿಂದ ಮಾಡುತ್ತಿದ್ದ ಲೇಖಕ, ಸಂಪಾದಕ, ಪ್ರಕಾಶಕ, ಮಾರ್ವೆಲ್ ಕಾಮಿಕ್ಸ್​ನ ಮಾಜಿ ಅಧ್ಯಕ್ಷ ಲೀ 95ನೇ ವಯಸ್ಸಿನಲಿ ್ಲ ಕೊನೆಯುಸಿರೆಳೆದಾಗ (ನ.12), ಕಾಮಿಕ್ಸ್ ಲೋಕ ದೊಡ್ಡ ಆಧಾರವನ್ನೇ ಕಳೆದುಕೊಂಡಿತು.

ಲೈಬರ್​ನ ಯಹೂದಿ ಪರಿವಾರದಲ್ಲಿ 1922ರ ಡಿ.28ರಂದು ಜನಿಸಿದ ಸ್ಟಾನ್​ಲೀ, 1939ರಲ್ಲಿ ವೃತ್ತಿಜೀವನ ಆರಂಭಿಸಿದರು. 1961ರಲ್ಲಿ ಮಾರ್ವೆಲ್ ಕಾಮಿಕ್ಸ್ ಸಂಸ್ಥೆಗೆ ಸೇರ್ಪಡೆಗೊಂಡರು.

ಇಲ್ಲಿ ಅವರು ಸ್ಟೈಡರ್​ವ್ಯಾನ್, ಐರನ್ ಮೆನ್, ಡೇರ್ ಡೆವಿಲ್, ಎಕ್ಸ್-ಮೆನ್, ದ ಫೆಂಟಾಸ್ಟಿಕ್ ಫೋರ್ ಮತ್ತು ದಿ ಅವೆಂಜರ್ಸ್ ಎಂಬ ಕಾಮಿಕ್ಸ್ ಹೀರೋಗಳನ್ನು ಸೃಷ್ಟಿಸಿ, ಮಾರ್ವೆಲ್ ಕಾಮಿಕ್ಸ್ ಸಂಸ್ಥೆಗೆ ಅಪಾರ ಮನ್ನಣೆ ತಂದುಕೊಟ್ಟರು.

ಅಸಾಧಾರಣ ಶಕ್ತಿಯ ಪಾತ್ರಗಳಿಗೆ ಲೇಖನಿ ಮೂಲಕ ಜೀವತುಂಬಿದ ಲೀ, ಆ ಪಾತ್ರಗಳ ಮುಖೇನವೇ ಜನಮನ್ನಣೆ ಗಳಿಸಿದರು. ಈ ಪಾತ್ರಗಳನ್ನು ಆಧಾರವಾಗಿಟ್ಟುಕೊಂಡೇ ಹಲವು ಸಿನಿಮಾಗಳು ಬಂದವು.

ಅಪಾರ ಕಲ್ಪನಾಶಕ್ತಿಯ, ಹೊಸದನ್ನು ಮತ್ತು ವಿಭಿನ್ನವಾದದ್ದನ್ನು ಯೋಚಿಸಿ ಅದನ್ನು ಬರಹರೂಪಕ್ಕೆ ಇಳಿಸುತ್ತಿದ್ದ ಇವರಿಗೆ ಭಾರತ ಸೇರಿದಂತೆ ಜಗತ್ತಿನ ಹಲವಾರು ದೇಶಗಳಲ್ಲಿ ಪ್ರಶಂಸಕರು, ಅಭಿಮಾನಿಗಳು ಇದ್ದಾರೆ. 2002ರಲ್ಲಿ ‘ಸ್ಟೈಡರ್​ವ್ಯಾನ್’ ಚಿತ್ರ ತೆರೆಗೆ ಬಂತು, 2004ರಲ್ಲಿ ಇದರ ರಿಮೇಕ್ ಬಿಡುಗಡೆ ಆಯಿತು. ಈ ಚಿತ್ರಗಳು ಒಟ್ಟು 1.6 ಬಿಲಿಯನ್ ಡಾಲರ್ ಆದಾಯ ಗಳಿಸಿದವು.

ಸಂಬಂಧಿಕರ ‘ಟೈಮ್ಲಿ’ ಕಂಪನಿಯಲ್ಲಿ ಮೊದಲಿಗೆ ಕೆಲಸಕ್ಕೆ ಸೇರಿದ ಲೀ ಸೃಜನಶೀಲತೆ, ತೀಕ್ಷ್ಣ ಬುದ್ಧಿಮತ್ತೆ ಮತ್ತು ಕಲ್ಪನಾಶಕ್ತಿಯಿಂದ ಆರಂಭದಲ್ಲೇ ಗಮನ ಸೆಳೆದರು. ಹಾಗಾಗಿ, ಅವರಿಗೆ ಕಾಮಿಕ್ಸ್ ವಿಭಾಗದ ಜವಾಬ್ದಾರಿ ನೀಡಲಾಯಿತಲ್ಲದೆ 18ನೇ ವಯಸ್ಸಿನಲ್ಲೇ ಕಾಮಿಕ್ಸ್ ಪ್ರಕಾಶನದ ಸಂಪಾದಕ ಹುದ್ದೆಯೇರಿದರು.

ಇದೇ ಸಂಸ್ಥೆ ಮುಂದೆ ‘ಮಾರ್ವೆಲ್ ಕಾಮಿಕ್ಸ್’ ಆಗಿ ರೂಪಾಂತರಗೊಂಡಿತು. 1961ರಲ್ಲಿ ಅವರು ರಚಿಸಿದ “The fantastic Four’ ಕಾಮಿಕ್ಸ್ ಮನ್ನಣೆ ಪಡೆದುಕೊಂಡು, ಬಳಿಕ ಸಿನಿಮಾ ಆಗಿ ತೆರೆಗೆ ಬಂತು.

ಮಕ್ಕಳನ್ನು ಬಹುವಾಗಿ ಸೆಳೆಯುವ, ಅಸಾಧಾರಣ ಶಕ್ತಿಯ ಪಾತ್ರದ ಮುಖೇನ ಸಮಸ್ಯೆಗಳನ್ನು ಪರಿಹರಿಸಿ ಸುಖಾಂತ್ಯಗೊಳಿಸುವ ಪಾತ್ರಗಳನ್ನು ಬರವಣಿಗೆ ಮೂಲಕ ರೂಪಿಸತೊಡಗಿದರು ಲೀ. ‘ಸ್ಪೈಡರ್​ವ್ಯಾನ್’ ಮತ್ತು ‘ಎಕ್ಸ್-ಮ್ಯಾನ್’ ಪಾತ್ರಗಳಂತೂ ಮನೆಮಾತಾದವು. ‘ಬ್ಲಾ್ಯಕ್ ಪ್ಯಾಂಥರ್’, ‘ಕ್ಯಾಪ್ಟನ್ ಅಮೆರಿಕ’, ‘ಡಾಕ್ಟರ್ ಸ್ಟೈಂಜ್’ ಪಾತ್ರಗಳು ಕೂಡ ಗಮನ ಸೆಳೆದವು.

ಇತ್ತೀಚಿನ ವರ್ಷಗಳಲ್ಲಿ ಸ್ಟಾನ್ ಅವರಿಗೆ ಭಾರತದ ನಂಟು ಲಭಿಸಿತು. 2013ರಲ್ಲಿ ಶರದ್ ದೇವರಂಜನ್ ಮತ್ತು ಗೌತಮ್ ಚೋಪ್ರಾ , ಸ್ಟಾನ್ ಲೀ ಅವರ ಜತೆ ಸೇರಿ ಭಾರತದ ಸೂಪರ್​ಹೀರೋ ಪಾತ್ರ ರೂಪಿಸಿ ‘ಚಕ್ರ’ ಎಂಬ ಸಿನಿಮಾ ಮಾಡಿದರು.

ಸಂಪೂರ್ಣ ಆನಿಮೆಷನ್ ಸಿನಿಮಾ ಆದ ಇದನ್ನು ಕಾರ್ಟೂನ್ ನೆಟ್​ವರ್ಕ್​ನಲ್ಲಿ ಲಾಂಚ್ ಮಾಡಲಾಗಿತ್ತು. ಈ ನಿಟ್ಟಿನಲ್ಲಿ ಲೀ ‘ಗ್ರಾಫಿಕ್ ಇಂಡಿಯಾ’ ಸಂಸ್ಥೆ ಜತೆ ಸೇರಿ ಕೆಲಸ ಮಾಡಿದ್ದರು. ಮಕ್ಕಳಲ್ಲಿನ ಉತ್ಸಾಹವನ್ನು ತಣಿಸಲು ಹಾರರ್ ಲೋಕದ ಪಾತ್ರಗಳನ್ನೂ ಸೃಷ್ಟಿಸಿದರು.

ಒಂದೋ ‘ಪಾಸಿಟಿವ್’ ಪಾತ್ರ ಇಲ್ಲವೆ ಸಂಪೂರ್ಣ ‘ನೆಗೆಟಿವ್’ ಪಾತ್ರಗಳನ್ನು ಸೃಷ್ಟಿಸುತ್ತಿದ್ದ ಇವರು ಈ ಮಧ್ಯದ ಪಾತ್ರಗಳ ಗೋಜಿಗೆ ಹೋಗುತ್ತಿರಲಿಲ್ಲ.

ಆರಂಭದಲ್ಲಿ ತಮ್ಮದೇ ಬರವಣಿಗೆ ಮತ್ತು ಸೃಷ್ಟಿಸಿದ ಪಾತ್ರದಿಂದ ತಾವೇ ಒಮ್ಮೆ ಗಾಬರಿಗೊಂಡು ಆ ಲೇಖನಕ್ಕೆ ಮೂಲಹೆಸರನ್ನು (ಸ್ಟಾನ್ ಲೀ ಮಾರ್ಟಿನ್ ಲಿಬೆ) ನೀಡದೆ ಸ್ಟಾನ್ ಲೀ ಎಂದಷ್ಟೇ ಬರೆದುಕೊಂಡರು.

ಕಾಲಕ್ರಮೇಣ ಇದೇ ಹೆಸರು ಖ್ಯಾತವಾಗಿದ್ದರಿಂದ ಅದನ್ನೇ ಅಧಿಕೃತವಾಗಿಸಿ ಅದಕ್ಕೆ ಕಾನೂನಿನ ಮಾನ್ಯತೆಯನ್ನೂ ಪಡೆದುಕೊಂಡರು.

40ನೇ ವಯಸ್ಸಿನಲ್ಲಿ ‘ಕಾಮಿಕ್ಸ್ ಲೋಕಕ್ಕೆ ನಾನು ತುಂಬ ವೃದ್ಧನಾಗಿಬಿಟ್ಟೆ’ ಎಂಬ ಭಾವ ಲೀ ಅವರಲ್ಲಿ ಆವರಿಸಿಕೊಂಡಾಗ, ಅವರಲ್ಲಿ ಸ್ಪೂರ್ತಿ ತುಂಬಿ ಕಾಲದ ಅಗತ್ಯ ಮತ್ತು ನೀವು ಪ್ರೀತಿಸುವ ಪಾತ್ರಗಳನ್ನು ಸೃಷ್ಟಿಸಿ ಎಂದು ಹುರಿದುಂಬಿಸಿದವರು ಬ್ರಿಟಿಷ್ ಮೂಲದ ಪತ್ನಿ ಜೋನ್. (ಈ ದಂಪತಿಗೆ ಇಬ್ಬರು ಮಕ್ಕಳು) 2001ರಲ್ಲಿ POW! Entertainment ಕಂಪನಿಯನ್ನು ಕಟ್ಟಿ, ಕೆಲ ಧಾರಾವಾಹಿ, ಕಿರುಚಿತ್ರಗಳನ್ನು ನಿರ್ವಿುಸಿದರು.

ಗ್ರಾಫಿಕ್ ನಾವೆಲ್​ಗಾಗಿಯೂ ಅವರು ಕೆಲಸ ಮಾಡಿದರು. 2012ರಲ್ಲಿ ‘ರೋಮಿಯೋ-ಜೂಲಿಯೆಟ್’ನ ಸಹಲೇಖಕರಾಗಿದ್ದರು. ಈ ಕೃತಿಯನ್ನು ‘ನ್ಯೂಯಾರ್ಕ್ ಟೈಮ್್ಸ’ ಪತ್ರಿಕೆ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ ನಮೂದಿಸಿತ್ತು.

2016ರಲ್ಲಿ ಅವರು ‘ಕಾಮಿಕ್ ಕಾನ್’ ಶೃಂಗದಲ್ಲಿ ನೀಡಿದ ಉಪನ್ಯಾಸ ‘ಗಾಡ್ ವೋಕ್’ ಭಾರಿ ಪ್ರಸಿದ್ಧಿ ಪಡೆಯಿತಲ್ಲದೆ, 2017ರಲ್ಲಿ ‘ಇಂಡಿಪೆಂಡೆಂಟ್ ಪಬ್ಲಿಷರ್ ಬುಕ್’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

2017ರ ಬಳಿಕ ವಯೋಸಹಜ ಸಮಸ್ಯೆಯಿಂದ ಅವರ ದೃಷ್ಟಿ ಮಂದವಾಯಿತು. ಆದರೂ, ದಿನನಿತ್ಯದ ಚಟುವಟಿಕೆಯಲ್ಲಿ ಲವಲವಿಕೆಯಿಂದಲೇ ತೊಡಗುತ್ತಿದ್ದರು.

2016ರಲ್ಲಿ ಲೀ ‘ರೇಡಿಯೋ ಟೈಮ್್ಸ’ ಜತೆಗೆ ಮಾತನಾಡುತ್ತ ಸ್ವಾರಸ್ಯಕರ ಸಂಗತಿ ಹಂಚಿಕೊಂಡಿದ್ದರು- ‘ನಾನು ಯಾವುದಾದರೂ ಕಾಮಿಕ್ಸ್ ಬುಕ್ ಸಮ್ಮೇಳನಕ್ಕೆ ಹೋದಾಗ ಓದುಗರು ಕೇಳುವ ಪ್ರಶ್ನೆ ‘ಎಲ್ಲರ ದೊಡ್ಡ ಶಕ್ತಿ ಯಾವುದು?’ ಎಂದು.

ಮತ್ತು ನಾನು ಯಾವಾಗಲು ಹೇಳುತ್ತ ಬಂದಿದ್ದೇನೆ, ಅದೃಷ್ಟ ದೊಡ್ಡ ಶಕ್ತಿ ಎಂದು. ಏಕೆಂದರೆ, ನಿಮ್ಮ ಬಳಿ ಒಳ್ಳೆಯ ಅದೃಷ್ಟ ಇದ್ದರೆ ಎಲ್ಲವೂ ನೀವು ಅಂದುಕೊಂಡಂತೆ ನಡೆಯುತ್ತದೆ’.

ಇದೇ ಸಂದೇಶಗಳನ್ನು ಪಾತ್ರಗಳಲ್ಲೂ ತುಂಬಿ ಕಾಮಿಕ್ಸ್ ಲೋಕವನ್ನು ದಶಕಗಳ ಕಾಲ ಆಳಿದ ಸ್ಟಾನ್ ಲೀ ‘ಒಳ್ಳೆಯ ಅದೃಷ್ಟ’ದೊಂದಿಗೆ ಮತ್ತೆ ಹುಟ್ಟಿಬರಲಿ, ಅವರ ಕಲ್ಪನಾಪ್ರಪಂಚ ನಮ್ಮನ್ನೆಲ್ಲ ಬೆರಗಾಗಿಸಲಿ.

ಕೃಪೆ: ರವೀಂದ್ರ ದೇಶ್ ಮುಖ್ (ಸಾಮಾಜಿಕ ಜಾಲತಾಣ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!