ಲಖನೌ: ವಿಧಾನಸಭೆಯ ಪ್ರವೇಶದ್ವಾರದಲ್ಲಿ ಪಾನ್ ಮಸಾಲ (Pan masala) ಜಗಿದು ಉಗಿದ ಶಾಸಕನಿಗೆ (MLA) ಸ್ಪೀಕರ್ ತರಾಟೆಗೆ ತೆಗೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ವಿಧಾನಸಭೆಯಲ್ಲಿ ನಡೆದಿದೆ.
ವಿಧಾನಸಭೆಯ ಮುಖ್ಯ ಸಭಾಂಗಣದ ಪ್ರವೇಶದ್ವಾರದಲ್ಲಿ ಕಾರ್ಪೆಟ್ ಮೇಲೆ ಪಾನ್ ಮಸಾಲ ಉಗುಳಿದ್ದ ಸದಸ್ಯರನ್ನು ಸ್ಪೀಕರ್ ಸತೀಶ್ ಮಹಾನಾ ತರಾಟೆಗೆ ತೆಗೆದುಕೊಂಡಿದ್ದಾರೆ.
ಎಲ್ಲ ಶಾಸಕರು ಇಂತಹ ನಡವಳಿಕೆಗಳನ್ನು ಬಿಟ್ಟು, ಸದನದ ಘನತೆಯನ್ನು ಕಾಪಾಡಿಕೊಳ್ಳಬೇಕೆಂದು ಅವರು ಕೇಳಿಕೊಂಡಿದ್ದಾರೆ.
ఉత్తరప్రదేశ్ అసెంబ్లీలో పాన్ ఉమ్మేసిన ఎమ్మెల్యే
అందరూ ఎమ్మెల్యేలను పిలిచి, ఇంకోసారి ఎవరు అసెంబ్లీలో ఇలా చేయొద్దని స్పీకర్ ఆగ్రహం pic.twitter.com/IgFUNhB0cB— Telugu Scribe (@TeluguScribe) March 4, 2025
ಇಂದು ಬೆಳಿಗ್ಗೆ ಸದನ ಸೇರುತ್ತಿದ್ದಂತೆ, ಸದನದಲ್ಲಿ ಒಬ್ಬ ಶಾಸಕ ಪಾನ್ ಮಸಾಲ ಉಗುಳಿದ್ದಾರೆಂದು ಮಹಾನಾ ಹೇಳಿದ್ದಾರೆ.