Daily story: Traitor

ಹರಿತಲೇಖನಿ ದಿನಕ್ಕೊಂದು ಕಥೆ: ದೇಶದ್ರೋಹಿ

Daily story: ಹಿಂದೆ ದೇವಗಿರಿ ಹೆಸರಿನ ರಾಜ್ಯವಿತ್ತು. ರಾಜಾ ರಾಮದೇವನು ಆ ರಾಜ್ಯವನ್ನು ಆಳುತ್ತಿದ್ದನು. ಒಮ್ಮೆ ಅಲ್ಲಾಉದ್ದೀನ ಖಿಲಜಿಯು ದೇವಗಿರಿಯ ಮೇಲೆ ದಾಳಿ ಮಾಡಲು ಬಂದನು ಮತ್ತು ರಾಜನಿಗೆ ತನ್ನ ದೂತರ ಮೂಲಕ ಶರಣಾಗುವಂತೆ ಸಂದೇಶವನ್ನು ಕಳುಹಿಸಿದನು.

ಆ ಸಂದೇಶದಲ್ಲಿ ಅಲ್ಲಾಉದ್ದೀನನು, ರಾಜಾ ರಾಮದೇವನಿಗೆ ಅವನ ಸಂಪೂರ್ಣ ರಾಜ್ಯವನ್ನು ಅಲ್ಲಾಉದ್ದೀನನಿಗೆ ಒಪ್ಪಿಸಿ, ಅವನಿಗೆ ಶರಣಾಗಬೇಕೆಂದು ಬರೆದಿದ್ದನು.

ಈ ಸಂದೇಶವನ್ನು ಕೇಳಿ ರಾಜಾ ರಾಮದೇವನಿಗೆ ಸಹಿಸಲು ಆಗಲಿಲ್ಲ. ತನ್ನ ರಾಜ್ಯದ ಮೇಲೆ ಯಾರೋ ಆಕ್ರಮಣ ಮಾಡಿರುವುದನ್ನು ಅವನು ಹೇಗೆ ತಾನೆ ಸುಮ್ಮನೆ ನೋಡುತ್ತಾ ಕುಳಿತುಕೊಳ್ಳಬಹುದು.

ಅವನು ಬಹಳ ಪರಾಕ್ರಮಿ ರಾಜನಾಗಿದ್ದನು. ಅವನು ಅಲ್ಲಾಉದ್ದೀನನ ಪ್ರಸ್ತಾವನೆ ಒಪ್ಪಿಕೊಳ್ಳಲಿಲ್ಲ. ಇದನ್ನು ಕೇಳಿ ಅಲ್ಲಾಉದ್ದೀನ ಕೋಪಗೊಂಡನು ಮತ್ತು ತನ್ನ ದೊಡ್ಡ ಸೈನ್ಯದೊಂದಿಗೆ ದೇವಗಿರಿಯ ಮೇಲೆ ಆಕ್ರಮಣ ಮಾಡಿದನು.

ದೇವಗಿರಿಯ ಕೋಟೆ ಒಂದು ಅಭೇದ್ಯ ಕೋಟೆಯಾಗಿತ್ತು. ಆ ಕೋಟೆಯನ್ನು ಬಹಳ ಸುಲಭವಾಗಿ ಗೆಲ್ಲಲು ಸಾಧ್ಯವಿರಲಿಲ್ಲ. ಅರ್ಥಾತ್ ಆ ಕೋಟೆಯೊಳಗೆ ಯಾರಿಗೂ ಸುಲಭವಾಗಿ ನುಸುಳಲು ಸಾಧ್ಯವಿರಲಿಲ್ಲ. ಸ್ವಲ್ಪ ದಿನದಲ್ಲಿಯೇ ಇಬ್ಬರೂ ರಾಜರ ನಡುವೆ ಬಹಳ ಭಯಾನಕ ಯುದ್ಧ ನಡೆಯಿತು.

ರಾಜಾ ರಾಮದೇವನ ಸೈನಿಕರು ಯುದ್ಧ ಮಾಡುವುದರಲ್ಲಿ ಬಹಳ ನಿಪುಣರಾಗಿದ್ದರು. ಯುದ್ಧದಲ್ಲಿ ರಾಜಾ ರಾಮದೇವನ ಸೇನೆಯು ಬಹಳ ಪರಾಕ್ರಮವನ್ನು ತೋರಿಸಿತು.

ಈ ಕಾರಣದಿಂದ ಅಲ್ಲಾಉದ್ದೀನನ ಸೇನೆಯ ಬಹಳಷ್ಟು ಸೈನಿಕರು ಸತ್ತರು. ಅಲ್ಲಾಉದ್ದೀನನಿಗೆ ಬೇರೆ ಯಾವುದೇ ದಾರಿ ಕಾಣದೇ ಅವನು ತನ್ನ ದೇಶಕ್ಕೆ ಮರಳಿ ಹೋದನು. ಅಲ್ಲಾಉದ್ದೀನನ ಮೇಲೆ ವಿಜಯವನ್ನು ಸಾಧಿಸಿರುವ ಖುಷಿಯಲ್ಲಿ ದೇವಗಿರಿಯಲ್ಲಿ ಬಹಳ ದೊಡ್ಡ ವಿಜಯೋತ್ಸವವನ್ನು ಆಚರಿಸಲಾಯಿತು.

ರಾಜಾ ರಾಮದೇವನ ಸೇನೆಯಲ್ಲಿ ಒಬ್ಬ ಪರಾಕ್ರಮಿ ಸೈನಿಕನಿದ್ದನು. ಅವನು ಮಾತೃಭೂಮಿಯ ರಕ್ಷಣೆಗಾಗಿ ಈ ಯುದ್ಧದಲ್ಲಿ ಅಲ್ಲಾಉದ್ದೀನನ ಸೇನೆಯೊಂದಿಗೆ ಹೋರಾಡುತ್ತ ತನ್ನ ಪ್ರಾಣವನ್ನು ಅರ್ಪಿಸಿದ್ದನು.

ಈ ವೀರ ಯೋಧನ ಮರಣದ ಬಳಿಕ ಅವನ ಮಗಳು ಒಬ್ಬಂಟಿಯಾದಳು. ಅವಳ ಹೆಸರು ವೀರಮತಿಯಾಗಿತ್ತು. ಅವಳನ್ನು ರಾಜಾ ರಾಮದೇವನು ತನ್ನ ಮಗಳಂತೆಯೇ ನೋಡಿಕೊಂಡನು. ವೀರಮತಿ ಮದುವೆಯ ವಯಸ್ಸಿನವಳಾದಾಗ ರಾಜನು ಕೃಷ್ಣರಾವ ಹೆಸರಿನ ಒಬ್ಬ ಯುವಕನೊಂದಿಗೆ ಅವಳ ವಿವಾಹವನ್ನು ನಿಶ್ಚಯಿಸಿದನು.

ಕೃಷ್ಣರಾವ್ ಅತ್ಯಂತ ಸ್ವಾರ್ಥಿ ಮತ್ತು ಲೋಭಿಯಾಗಿದ್ದನು. ಅವನು ಏನು ಮಾಡಿದನು ಗೊತ್ತೇ? ಅಲ್ಲಾಉದ್ದೀನ ರಾಜಾ ರಾಮದೇವನೊಂದಿಗೆ ಸೋತು ಮರಳಿ ತನ್ನ ದೇಶಕ್ಕೆ ಹೋಗುತ್ತಿರುವಾಗ ಇದೇ ಕೃಷ್ಣರಾವ ಅವನನ್ನು ಭೇಟಿಯಾಗಿ, ‘ನೀವು ನನ್ನ ಒಂದು ಷರತ್ತನ್ನು ಒಪ್ಪಿಕೊಂಡರೆ, ನಾನು ನಿಮಗೆ ದೇವಗಿರಿಯನ್ನು ಗೆಲ್ಲುವ ರಹಸ್ಯವನ್ನು ಹೇಳುತ್ತೇನೆ, ಮತ್ತು ರಾಜಾ ರಾಮದೇವನ ಸೇನೆ, ಅವನ ಶಕ್ತಿಯ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ’ ಎಂದು ಹೇಳಿದನು.

ಅವನ ಷರತ್ತು ಏನೆಂದರೆ, ‘ನೀವು ದೇವಗಿರಿಯನ್ನು ಗೆದ್ದು, ನನ್ನನ್ನು ಅದರ ರಾಜನನ್ನಾಗಿ ಮಾಡಬೇಕು’ ಎಂದು ಆಗಿತ್ತು.

ಅಲ್ಲಾಉದ್ದೀನ ವಿಚಾರ ಮಾಡಿ, ಕೃಷ್ಣರಾವ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡನು. ಅಲ್ಲಾಉದ್ದೀನನು ಒಪ್ಪಿಗೆ ಸೂಚಿಸಿದ ಬಳಿಕ ಕೃಷ್ಣರಾವ್ ಅವನಿಗೆ ಕೋಟೆಯ ಎಲ್ಲ ರಹಸ್ಯಗಳನ್ನು ಹೇಳಿದನು. ಅದರ ಬಳಿಕ ಅಲ್ಲಾಉದ್ದೀನನು ದೇವಗಿರಿಯ ಮೇಲೆ ಮತ್ತೊಮ್ಮೆ ದಂಡೆತ್ತಿ ಬಂದನು.

ಈ ಸಮಾಚಾರ ತಿಳಿಯುತ್ತಲೇ ರಾಜಾ ರಾಮದೇವನು ಎಲ್ಲ ವೀರ ಸರದಾರರ ಸಭೆಯನ್ನು ಕರೆದನು. ಸಭೆಯಲ್ಲಿ ರಾಜನು ‘ಸೋತ ಶತ್ರುವು ಎಂದಿಗೂ ಇಷ್ಟು ಬೇಗ ಮರಳಿ ಬರುವುದಿಲ್ಲ. ಹಾಗಿರುವಾಗ ಇವನು ಹೇಗೆ ಬಂದನು? ಇದರರ್ಥವೇನೆಂದರೆ ನಮ್ಮಲ್ಲಿಯೇ ಯಾರೋ ಅಲ್ಲಾಉದ್ದೀನನೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ. ಆದರೆ ಚಿಂತಿಸಬಾರದು, ನಾವು ಅವನನ್ನು ಮತ್ತೆ ಸೋಲಿಸೋಣ’ ಎಂದು ಹುರಿದುಂಬಿಸಿದನು.

ಇದನ್ನು ಕೇಳಿ ಎಲ್ಲರೂ ತಮ್ಮ ತಮ್ಮ ತಲವಾರನ್ನು ಎತ್ತಿ ಮತ್ತು ‘ಈ ಹೋರಾಟದಲ್ಲಿ ನಾವು ನಮ್ಮ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡುತ್ತೇವೆ ಮತ್ತು ದೇವಗಿರಿಯನ್ನು ರಕ್ಷಿಸುತ್ತೇವೆ’ ಎಂದು ಪಣತೊಟ್ಟರು.

ಅದೇ ಸಭೆಯಲ್ಲಿ ಕೃಷ್ಣರಾವ್ ಕೂಡ ಇದ್ದನು ಮತ್ತು ಅವನು ಸುಮ್ಮನೆ ಕುಳಿತುಕೊಂಡು ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದನು. ಇದನ್ನು ನೋಡಿ ಎಲ್ಲರಿಗೂ ಆಶ್ಚರ್ಯವಾಯಿತು. ಎಲ್ಲರೂ ಅವನನ್ನು ಸುಮ್ಮನೆ ಕುಳಿತಿರುವ ಕಾರಣವನ್ನು ಕೇಳಿದರು.

ಕೃಷ್ಣರಾವ್‌ನು ಈ ರೀತಿ ಸುಮ್ಮನೆ ಕುಳಿತಿರುವುದನ್ನು ನೋಡಿ ವೀರಮತಿಗೆ ಬಹಳ ಕೋಪ ಬಂತು ಮತ್ತು ಅವಳು ಹುಲಿಯಂತೆ ಅವನ ಮೇಲೆ ಎರಗಿದಳು. ಅವಳು ‘ಇವನೇ ನಮ್ಮ ದೇಶದ ದ್ರೋಹಿಯಾಗಿದ್ದಾನೆ’ ಎಂದು ಹೇಳಿ ಮಿಂಚಿನ ಗತಿಯಲ್ಲಿ ತನ್ನ ಸೊಂಟಕ್ಕೆ ಕಟ್ಟಿದ ತಲವಾರನ್ನು ತೆಗೆದಳು ಮತ್ತು ಕೃಷ್ಣರಾವ್‌ನ ಎದೆಯನ್ನು ತಿವಿದಳು.

ವೀರಮತಿಗೆ ಕೃಷ್ಣರಾವ್‌ನ ಪ್ರಾಮಾಣಿಕತೆಯ ಬಗ್ಗೆ ಮೊದಲೇ ಸಂದೇಹವಿತ್ತು. ಆದ್ದರಿಂದ ವೀರಮತಿಯು ಅವನ ಮೇಲೆ ಒಂದು ಕಣ್ಣಿಟ್ಟಿದ್ದಳು. ಯಾವಾಗ ವೀರಮತಿಗೆ ಅವನು ಅಲ್ಲಾಉದ್ದೀನನೊಂದಿಗೆ ಸೇರಿಕೊಂಡಿರುವ ವಿಷಯ ತಿಳಿಯಿತೋ, ಆಗದಿಂದ ಅವಳು ಕೋಪದಿಂದ ಕುದಿಯುತ್ತಿದ್ದಳು. ಅವನ ಪಾಪದ ಶಿಕ್ಷೆಯನ್ನು ನೀಡಲೇ ಬೇಕಾಗಿತ್ತು. ಅವಕಾಶ ದೊರೆಯುತ್ತಲೇ ಅವಳು ಶಿಕ್ಷಿಸಿದಳು.

ಸಾಯುವಾಗ ಕೃಷ್ಣರಾವ್ ‘ನಾನು ನಿನ್ನ ಪತಿಯಾಗಿದ್ದರೂ ನನ್ನನ್ನೇಕೆ ಕೊಂದೆ’ ಎಂದು ಕೇಳಿದನು. ಆಗ ವೀರಮತಿಯು ‘ನನ್ನ ವಿವಾಹ ನಿಮ್ಮೊಂದಿಗೆ ಆಗುವುದರಲ್ಲಿತ್ತು ಹಾಗೂ ನಾನು ನಿಮ್ಮನ್ನು ನನ್ನ ಪತಿಯೆಂದು ಒಪ್ಪಿಕೊಂಡಿದ್ದೆನು. ಆದರೆ ನಿಮ್ಮಂತಹ ದೇಶದ್ರೋಹಿಯನ್ನು ಕೊಂದು ನಾನು ನನ್ನ ರಾಷ್ಟ್ರ ಕರ್ತವ್ಯವನ್ನು ನಿಭಾಯಿಸಿದ್ದೇನೆ. ಈಗ ನಾನು ಪತ್ನಿಯ ಧರ್ಮವನ್ನು ಪಾಲಿಸುತ್ತೇನೆ’ ಎಂದು ಹೇಳಿ ಅವಳು ತಲವಾರನ್ನು ತಿರುಗಿಸಿ ಮತ್ತು ತನ್ನ ಹೊಟ್ಟೆಯನ್ನೇ ತಿವಿದು ಮರುಕ್ಷಣವೇ ಪ್ರಾಣ ತ್ಯಜಿಸಿ ಕೃಷ್ಣರಾವ್‌ನ ಶವದ ಪಕ್ಕದಲ್ಲಿ ಬಿದ್ದಳು.

ವೀರಮತಿಯ ಮನಸ್ಸಿನಲ್ಲಿ ಎಷ್ಟು ರಾಷ್ಟ್ರಪ್ರೇಮವಿತ್ತು! ಅವಳು ತಾನು ಮದುವೆಯಾದ ಪತಿ ದೇಶದ್ರೋಹಿಯಾಗಿದ್ದಾನೆ ಎಂದು ಗಮನಕ್ಕೆ ಬರುತ್ತಲೇ ಅವಳು ತನ್ನ ಸ್ವಂತ ವಿಚಾರವನ್ನು ಮಾಡಲಿಲ್ಲ.

ದೇಶದ್ರೋಹಿಯನ್ನು ಕೊಂದು ಅವನನ್ನು ಶಿಕ್ಷಿಸಿದಳು. ಇದರರ್ಥವೇನೆಂದರೆ, ವೀರಮತಿಗೆ ಅವಳ ಸ್ವಾರ್ಥಕ್ಕಿಂತ ದೇಶದ ರಕ್ಷಣೆಯು ಹೆಚ್ಚು ಮಹತ್ವಪೂರ್ಣವಾಗಿತ್ತು. ಪತಿಗೆ ಶಿಕ್ಷೆ ನೀಡುವುದರೊಂದಿಗೆ ಅವಳು ಪತ್ನಿಯ ಧರ್ಮವನ್ನು ಪಾಲಿಸಿದಳು ಮತ್ತು ತನ್ನ ಪ್ರಾಣವನ್ನೂ ತ್ಯಜಿಸಿದಳು.

ಕೃಪೆ: ಹಿಂದು ಜಾಗೃತಿ.

ರಾಜಕೀಯ

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಮೋದಿ ಸರ್ಕಾರದ ಮಲತಾಯಿ ಧೋರಣೆ: ಕೇರಳದಲ್ಲಿ ಇಂದು ಬ್ಲ್ಯಾಕ್ ಡೇ..!

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಮಿತ್ರಪಕ್ಷ ಅಧಿಕಾರದಲ್ಲಿರುವ ಆಂಧ್ರಪ್ರದೇಶದ ಹೊರತುಪಡಿಸಿ ದಕ್ಷಿಣ ಭಾರತದ ರಾಜ್ಯಗಳಿಗೆ ನಿರ್ಲಕ್ಷ್ಯ ತೋರಿದೆ ಎಂಬ ಆಕ್ರೋಶ ವ್ಯಾಪಕವಾಗಿದೆ.

[ccc_my_favorite_select_button post_id="119088"]
ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರ ಬಜೆಟ್.. ಕಾಂಗ್ರೆಸ್ ಸರ್ಕಾರದ ಟೀಕೆಗಳಿಗೆ ಉತ್ತರ: ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವ ಟೀಕೆಗಳಿಗೆ ಉತ್ತರ ಕೊಡಲಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು

[ccc_my_favorite_select_button post_id="119030"]
UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

UGC ನಿಯಮಾವಳಿಗೆ ಸುಪ್ರೀಂ ತಡೆ.. ಕೇಂದ್ರ ಸರ್ಕಾರಕ್ಕೆ ನೋಟಿಸ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯವನ್ನು ತಡೆಗಟ್ಟಲು ವಿಶ್ವವಿದ್ಯಾಲಯ ಅನುದಾನ ಆಯೋಗ (UGC) ಇತ್ತೀಚೆಗೆ ಸೂಚಿಸಿದ ನಿಯಮಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶಿಸಿದ್ದು, ಕೇಂದ್ರ ಸರ್ಕಾರಕ್ಕೆ ನೋಟೀಸ್ ನೀಡಿದೆ.

[ccc_my_favorite_select_button post_id="118953"]
ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ -ಚೀನಿ ಬಾಯಿ ಬಾಯಿ

ಗುಡ್ಮಾರ್ನಿಂಗ್ ನ್ಯೂಸ್: ಪ್ರಧಾನಿ ಮೋದಿ ಚೀನಾ ಭೇಟಿ.. 7 ವರ್ಷಗಳ ಬಳಿಕ ಹಿಂದಿ

ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ (Donald Trump) ಶೇ.50 ರಷ್ಟು ತೆರಿಗೆ ಬರೆ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 7 ವರ್ಷಗಳ ಬಳಿಕ ಚೀನಾಗೇ ಭೇಟಿ ನೀಡಿದ್ದಾರೆ.

[ccc_my_favorite_select_button post_id="113347"]

ಕ್ರೀಡೆ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

ದೊಡ್ಡಬಳ್ಳಾಪುರದಲ್ಲಿ ಜಿಲ್ಲಾ ಕ್ರೀಡಾಂಗಣ.. 25 ಕೋಟಿ ರೂ. ಮಂಜೂರು: ಕೆ.ಹೆಚ್.ಮುನಿಯಪ್ಪ

2025-26 ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ (K.H. Muniyappa) ಮಾತನಾಡಿದರು.

[ccc_my_favorite_select_button post_id="118983"]
ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣ: ದಂಡುಪಾಳ್ಯ ಗ್ಯಾಂಗ್‌ನ ಮತ್ತೊಬ್ಬನ ಬಂಧನ.!

ಭೀಕರ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ದಂಡುಪಾಳ್ಯ ಗ್ಯಾಂಗ್‌ನ (Dandupalya gang) ಚಿಕ್ಕ ಹನುಮಂತಪ್ಪ (ಅಲಿಯಾಸ್ ಕೆ.ಕೃಷ್ಣಪ್ಪ) ಎಂಬಾತನನ್ನು ಆಂಧ್ರಪ್ರದೇಶದ ಮದನಪಳ್ಳೆ ಗ್ರಾಮದಲ್ಲಿ ಬಂಧಿಸಲಾಗಿದೆ.

[ccc_my_favorite_select_button post_id="118778"]
ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ದೊಡ್ಡಬಳ್ಳಾಪುರ: ಗೂಡ್ಸ್ ವಾಹನ ಡಿಕ್ಕಿ.. ವೃದ್ಧನಿಗೆ ಗಂಭೀರ ಗಾಯ

ಪೆಟ್ಟಿ ಅಂಗಡಿ ಬಳಿ ಕುಳಿತಿದ್ದ ವೃದ್ಧನಿಗೆ ನಿಯಂತ್ರಣ ತಪ್ಪಿದ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ (Accident) ವೃದ್ಧ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿ‌ನ ****** ಇಂದು ಮಧ್ಯಾಹ್ನ ನಡೆದಿದೆ

[ccc_my_favorite_select_button post_id="119094"]

ಆರೋಗ್ಯ

ಸಿನಿಮಾ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

2020 ಹಾಗೂ 2021 ರ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ

ಕರ್ನಾಟಕ ಸರ್ಕಾರವು ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗಾಗಿ ನೀಡುವ ಡಾ.ರಾಜಕುಮಾರ್, ಪುಟ್ಟಣ್ಣ ಕಣಗಾಲ್ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗಳನ್ನು ಪ್ರಕಟಿಸಿದೆ (State Film Awards).

[ccc_my_favorite_select_button post_id="118307"]
error: Content is protected !!