ಕರೀಂನಗರ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿ ಅರಳಿದ ಪ್ರೀತಿ.. ಮನೆಯಲ್ಲಿ ಹಿರಿಯರು ಒಪ್ಪುವುದಿಲ್ಲ ಎಂದು ರೈಲಿಗೆ ಸಿಲುಕಿ ಜೋಡಿ ಆತ್ಮಹತ್ಯೆ (Suicide) ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಕರೀಂನಗರ ಜಿಲ್ಲೆ ಇಲ್ಲಂದಕುಂಟಾ ಮಂಡಲದ ರಾಚಪಲ್ಲಿಯ ಮಿನುಗು ರಾಹುಲ್ (18 ವರ್ಷ) ಮತ್ತು ನಿರ್ಮಲ್ ಜಿಲ್ಲೆಯ ಖಾನಾಪುರ ಮಂಡಲದ ಎರ್ರಚಿಂತಲ್ ಗ್ರಾಮದ ಗೋಲೇಟಿ ಶ್ವೇತಾ (20 ವರ್ಷ) ಎಂದು ಗುರುತಿಸಲಾಗಿದೆ.
ಕೆಲವು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯವಾದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ತಮ್ಮ ಮನೆಯಲ್ಲಿ ಪ್ರೇಮ ನಿವೇದನೆಗೆ ಒಪ್ಪಿಗೆ ಸಿಗದ ಹಿನ್ನೆಲೆಯಲ್ಲಿ ಇಬ್ಬರು ಜಮ್ಮಿಕುಂಟಾ ಮಂಡಲದ ಬಿಜಿಗಿರಿ ಶೆರಿಫ್ ರೈಲು ನಿಲ್ದಾಣ-ಪಾಪಯ್ಯಪಲ್ಲೆ ಗೇಟ್ ಬಳಿ ರೈಲಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ.