ಬೆಂಗಳೂರು: ಎಲ್ಲರ ರಾಜೀನಾಮೆ ಕೇಳ್ತಾ ಇದ್ದ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಬಿಡದಿ ಬಳಿ ಒತ್ತುವರಿ ಮಾಡಿಕೊಂಡಿರುವ ಕುರಿತಂತೆ ಅವರ ತೀರ್ಮಾನ ಹೇಳಿ ಎಂದು ಸಚಿವ ಎನ್. ಚಲುವರಾಯಸ್ವಾಮಿ (Chaluvarayaswamy) ಪ್ರಶ್ನಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷಗಳ ಕಾಲ ಬಿಡದಿ ಬಳಿ ಅನಧಿಕೃತವಾಗಿ ಜಮೀನು ಒತ್ತುವರಿ ಮಾಡಿಕೊಂಡಿದ್ದು ಸಾಬೀತಾಗಿದೆ.
ಒತ್ತುವರಿ ಆಗಿರುವ ಜಮೀನನ್ನು ತೆರವು ಮಾಡಿಸುವಂತೆ ಕೋರ್ಟ್ ಆದೇಶ ಕೂಡ ನೀಡಿದೆ, ಸಣ್ಣ ಪುಟ್ಟ ವಿಷಯಗಳಿಗೆಲ್ಲ ರಾಜೀನಾಮೆ ಕೇಳುತ್ತಿದ್ದ ಕೇಂದ್ರ ಸಚಿವ ಈಗೇನು ಹೇಳುತ್ತಾರೆ ಎಂದು ಸಚಿವ ಎನ್ ಚಲುವರಾಯಸ್ವಾಮಿ ಪ್ರಶ್ನಿಸಿದರು.
ಈ ಕುರಿತು ತಾವು ಅವರ ಮಟ್ಟಕ್ಕೆ ಇಳಿಯಲ್ಲ, ಅವರ ಹಾಗೆ ಹೊಟ್ಟೆಯುರಿ ತಮಗಿಲ್ಲ ಮತ್ತು ರಾಜೀನಾಮೆ ಸಹ ಕೇಳಲ್ಲ, ಅದರೆ ಅವರಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತೇವೆ ಎಂದು ಹೇಳಿದರು.