ಶ್ರೀನಿವಾಸಪುರ: ಹಣದ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳವನ್ನು ಬಿಡಿಸಲು ಹೋದ ಮೂರನೇ ವ್ಯಕ್ತಿ ಕೊಲೆಯಾಗಿರುವ (Murder) ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸೋಮಯಾಜಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಗುಂತವಾರಪಲ್ಲಿ ಗ್ರಾಮದ 45 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ.
ಕೂಲಗುರ್ಕಿ ಗ್ರಾಮದ ಶ್ರೀಮೂರ್ತಿ ಎಂಬುವವನೇ ಕೊಲೆ ಮಾಡಿದ ಆರೋಪಿ. ಸೋಮಯಾಜಲಪಲ್ಲಿ ಗ್ರಾಮದ ಬಸ್ ನಿಲ್ದಾಣದ ಬಳಿಯೇ ಕೊಲೆ ನಡೆದಿದೆ.
ಕೊಲೆಯಾದ ವ್ಯಕ್ತಿಯ ಸಂಬಧಿಕರು ಆಕ್ರೋಶಗೊಂಡಿದ್ದಾರೆ.
ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಕೋಲಾರ ಎಸ್ ಪಿ ನಿಖಿಲ್ ಭೇಟಿ ನೀಡಿದ್ದಾರೆ.