ದೊಡ್ಡಬಳ್ಳಾಪುರ (Doddaballapura): ಸರ ಕಳ್ಳತನಕ್ಕೆ ಹೊಂಚು ಹಾಕಿದ್ದ ಕಳ್ಳರನ್ನು ಬಂಧಿಸುವಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕನಕಪುರದ ತಟ್ಟಿಗುಪ್ಪೆ ಗ್ರಾಮದ ಶಿವರಾಜ ಮತ್ತು ಸುಂದ್ರೇಶ ಎಂದು ಗುರುತಿಸಲಾಗಿದೆ.
ವೃದ್ಧೆಯ ಸರ ಕಳ್ಳತನ
ಆರೋಪಿಗಳು ಫೆ.21 ರಂದು ದೊಡ್ಡಬಳ್ಳಾಪುರ ತಾಲೂಕಿನ ಅರಳುಮಲ್ಲಿಗೆ ಗ್ರಾಮದಲ್ಲಿ ಚಿಲ್ಲರೆ ಅಂಗಡಿ ಬಳಿ ಯಾರು ಇಲ್ಲದನ್ನು ಗಮನಿಸಿರುವ ದುಷ್ಕರ್ಮಿಗಳು ಚಾಕಲೇಟ್ ಕೊಳ್ಳುವ ನೆಪದಲ್ಲಿ ಅಂಗಡಿಯಲ್ಲಿದ್ದ ವೃದ್ಧೆಯ ಚಿನ್ನದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದರು.
ಅರಳುಮಲ್ಲಿಗೆ ನಿವಾಸಿ 74 ವರ್ಷದ ಯಶೋಧಮ್ಮ ಎನ್ನುವವರು ಚಿಲ್ಲರೆ ಅಂಗಡಿಯಲ್ಲಿ ವ್ಯಾಪಾರಕ್ಕೆಂದು ಕುಳಿತಿದ್ದಾಗ ಘಟನೆ ನಡೆದಿತ್ತು.
ಹಲವು ದಿನಗಳಿಂದ ಹೊಂಚು ಹಾಕಿ, ಅಂಗಡಿ ಬಳಿ ಯಾರು ಇಲ್ಲದೇ ಇರುವುದನ್ನು ಗಮನಿಸಿದ್ದ ಈ ಇಬ್ಬರು ದುಷ್ಕರ್ಮಿಗಳು, 10 ರೂ ನೀಡಿ 5 ರೂಗೆ ಚಾಕಲೇಟ್ ಕೊಡುವಂತೆ ಯಶೋಧಮ್ಮ ಅವರಿಗೆ ಹೇಳಿದ್ದು, ಚಾಕಲೇಟ್ ನೀಡಿ, ಉಳಿದ 5 ರೂ ಚಿಲ್ಲರೆ ಹಣ ವಾಪಸ್ ನೀಡಲು ತಿರುಗಿದ ವೇಳೆ ಕುತ್ತಿಗೆಯಲ್ಲಿದ್ದ 10 ಗ್ರಾಂ ತೂಕದ ಎರಡೆಳೆ ಚಿನ್ನದ ಮಾಂಗಲ್ಯ ಸರವನ್ನು ದುಷ್ಕರ್ಮಿ ಕಿತ್ತಿದ್ದ.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಅಗ್ನಿ ಅವಘಡ.. ಕಾರು ಭಸ್ಮ
ಈ ವೇಳೆ ಮಾಂಗ್ಯ ಸರ ತುಂಡಾಗಿದ್ದು, 40 ಗ್ರಾಂ ತೂಕದ ಸರ ಕಳ್ಳನ ಕೈಗೆ ಸಿಕ್ಕು ಸ್ಕೂಟರ್ ನಲ್ಲಿ ಕುಂಟನಹಳ್ಳಿ ಕಡೆಗೆ ಪರಾರಿಯಾದರೆ, ಉಳಿ 60 ಗ್ರಾಂ ತೂಕದ ಚೈನ್ ಮತ್ತು ಮಾಂಗಲ್ಯ ವೃದ್ಧೆಯ ಬಳಿಯೇ ಉಳಿದಿತ್ತು.
ಪತ್ತೆ ಕಾರ್ಯ
ಈ ಕುರಿತು ದಾಖಲಾದ ಪ್ರಕರಣದ ಕುರಿತು ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ನೇತೃತ್ವದಲ್ಲಿ ಸಬ್ ಇನ್ಸ್ಪೆಕ್ಟರ್ ರೇವಣ್ಣ, ಪಂಕಜ ಎಎಸ್ಐ ರಂಗಸ್ವಾಮಯ್ಯ, ಸಿಬ್ಬಂದಿಗಳಾದ ಅರ್ಜುನ್ ಲಮಾಣಿ, ಸುನಿಲ್ ಬಾಸ್ಕಿ, ಸಚಿನ್, ಹರೀಶ್, ಪ್ರವೀಣ್, ಚಂದ್ರು ತಂಡ ತನಿಖೆ ಆರಂಭಿಸಿತು.
ಸಿಸಿ ಟಿವಿ ಕ್ಯಾಮೆರಾ ಗಳಲ್ಲಿ ದಾಖಲಾದ ಚಿತ್ರವನ್ನು ಆಧರಿಸಿ, ಕನಕಪುರಕ್ಕೆ ತೆರಳಿದ ಪೊಲೀಸರು, ಮತ್ತೊಂದು ಸರಕಳ್ಳತನ ನಡೆಸಲು ಮುಂದಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಂಧಿತ ಆರೋಪಿಗಳು ಹಲವು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಓರ್ವನ ವಿರುದ್ಧ ಹತ್ಯೆ ಪ್ರಕರಣದ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಆರೋಪಿಗಳು ಅಂಗಡಿಯೊಂದರಲ್ಲಿ ಅಡವಿಡಲಾಗಿದ್ದ ಚಿನ್ನದ ಸರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ಇಂದು ಅರಳುಮಲ್ಲಿಗೆ ಗ್ರಾಮದ ವೃದ್ಧೆ ಯಶೋಧಮ್ಮ ಅವರಿಗೆ ಇನ್ಸ್ಪೆಕ್ಟರ್ ಸಾಧಿಕ್ ಪಾಷಾ ಹಸ್ತಾಂತರಿಸಿದರು.