Daily story: Bhishma

ಹರಿತಲೇಖನಿ ದಿನಕ್ಕೊಂದು ಕಥೆ: ಭೀಷ್ಮ

Daily story: ಭೀಷ್ಮನಿಗೆ ಮಾನವ ಜನ್ಮದಿಂದ ಮುಕ್ತಿಕೊಡುವ ಆ ದಿನ ಬಂದೊದಗಿದ ಕೂಡಲೆ ಪಾಂಡವರು ಧೃತರಾಷ್ಟ್ರನನ್ನೂ ಕೃಷ್ಣನನ್ನೂ ಮುಂದಿಟ್ಟುಕೊಂಡು, ಗಂಧ ಧೂಪ ದೀಪ ಪುಷ್ಪಗಳನ್ನೂ ರತ್ನಾಭರಣಗಳನ್ನೂ ತೆಗೆದುಕೊಂಡು ರಣರಂಗದಲ್ಲಿ ಭೀಷ್ಮನು ಶರಶಯ್ಯೆಯಲ್ಲಿ ಮಲಗಿದ್ದ ಕಡೆಗೆ ನಡೆದರು. ಅವರೊಡನೆ ಕುಂತಿ, ಗಾಂಧಾರಿ, ದ್ರೌಪದಿ, ಸಾತ್ಯಕಿ, ವಿದುರ, ಯುಯುತ್ಸು ಮೊದಲಾದವರೂ ಹೋದರು.

ಭೀಷ್ಮನ ಸುತ್ತಲೂ ವ್ಯಾಸರು, ನಾರದರು, ಪರಾಶರರು ಮೊದಲಾದ ಋಷಿಗಳು ನೆರೆದಿದ್ದರು.

ಅಜ್ಜನಿಗೆ ನಮಸ್ಕಾರಿಸಿದ ಯುಧಿಷ್ಠಿರನು: “ದೇವ, ನಾನು ಪಾಂಡವನಾದ ಯುಧಿಷ್ಟಿರ, ನನ್ನ ಸಹೋದರರನ್ನು, ನಿನ್ನ ಪ್ರೀತಿಪಾತ್ರರನ್ನೂ ಕರೆತಂದಿದ್ದೇನೆ. ನಿನ್ನನ್ನು ಗೌರವಿಸಲು ಇಡೀ ಹಸ್ತಿನಾವತಿಯೇ ಇಲ್ಲಿಗೆ ಬಂದಿದೆ. ಧೃತರಾಷ್ಟ್ರ, ಕೃಷ್ಣರೂ ಬಂದಿದ್ದಾರೆ. ದಯವಿಟ್ಟು ಕಣ್ಣು ತೆರೆದು ನೋಡು” ಎಂದನು‌.

ಕಣ್ತೆರೆದು ಎಲ್ಲರನ್ನೂ ನೋಡಿದ ಭೀಷ್ಮರು: “ಮಗು, ಈ ಸಮಸ್ತರ ಜೊತೆಗೆ ನಿನ್ನನ್ನು ನೋಡಲು ಸಂತೋಷವಾಗುತ್ತಿದೆ. ಕೊನೆಗೂ ಉತ್ತರಾಯಣ ಬಂದಿತ್ತಲ್ಲವೇ! ಶರಶಯ್ಯೆಯಲ್ಲಿ ಮಲಗಿ ನೂರಾರು ವರ್ಷಗಳಾದಂತೆ ಅನಿಸುತ್ತಿದೆ. ಮಾಘಮಾಸ ಬಂದಿದೆ. ನಾನು ಈ ಭೂಮಿಯನ್ನು ಬಿಡುವ ಕಾಲ ಸನ್ನಿಹಿತವಾಯಿತು !” ಎಂದನು‌.

ಆಮೆಲೆ ಧೃತರಾಷ್ಟ್ರನಿಗೆ, ಭೀಷ್ಮನು: “ಮಗನೇ, ನಿನಗೆ ರಾಜನ ಕರ್ತವ್ಯಗಳೆಲ್ಲವೂ ತಿಳಿದಿವೆ‌. ನಿನಗೆ ಗೊತ್ತಿಲ್ಲದಿರುವುದು ಯಾವುದೂ ಇಲ್ಲ. ವಿವೇಕಿಯಾದ ನೀನು ನಿನ್ನ ಮಕ್ಕಳ ಸಾವಿಗೆ ಶೋಕಿಸಬಾರದು‌. ಪಾಂಡವರೂ ನಿನ್ನ ಮಕ್ಕಳೆ, ನಿನ್ನ ಮೇಲೆ ಭಕ್ತಿಯಿಂದಿದ್ದಾರೆ. ಅವರೊಡನೆ ಸುಖವಾಗಿರು” ಎಂದನು.

ನಂತರ ಅವನ ದೃಷ್ಟಿ ಕೃಷ್ಣನ ಕಡೆಗೆ ಹೊರಳಿತು. ಪುಷ್ಪಗಳನ್ನು ತರಿಸಿ, ಅವುಗಳಿಂದ ಅವನನ್ನು ಭಕ್ತಿಯಿಂದ ಪೂಜಿಸಿದ

ಭೀಷ್ಮರು: “ಕೃಷ್ಣಾ, ನೀನು ಜಗತ್ತಿಗೆಲ್ಲ ಈಶನು‌. ಪುರುಷವೆನ್ನಿಸಿಕೊಳ್ಳುವ ನೀನೆ ಇಡೀ ವಿಶ್ವದ ಸೃಷ್ಟಿಕರ್ತನು. ನೀನೇ ಪರಮಾತ್ಮನು‌. ನಿನ್ನ ವಿಶ್ವರೂಪವನ್ನು ತೋರಿಸಿ, ನನಗಿನ್ನು ಮನುಷ್ಯ ಜನ್ಮವನ್ನು ತೊರೆದು ಈ ಲೋಕವನ್ನು ಬಿಟ್ಟುಹೋಗಲು ಅಪ್ಪಣೆ ಕೊಡು. ನಿನ್ನ ಕೃಪೆಯಿಂದ ನನಗೆ ಉತ್ತಮ ಗತಿ ದೊರೆಯಲಿ” ಎನ್ನಲು.

ಕೃಷ್ಣನು ಅವನಿಗೆ “ವಿಶ್ವರೂಪ”ವನ್ನು ದರ್ಶನ ಮಾಡಿಸಿದನು‌.

ಅನಂತರ ಕೃಷ್ಣನು:- “ದೇವವ್ರತ, ನಿನ್ನ ನಿಜ ಧಾಮಕ್ಕೆ ಇನ್ನು ಹೊರಡು. ಹೋಗಿ ವಸುಗಳನ್ನು ಸೇರಿಕೋ. ಮಾರ್ಕಂಡೇಯನಂತೆ ನಿನಗೆ ಪುನರ್ಜನ್ಮವಿಲ್ಲ‌. ಮೃತ್ಯುವು ಸೇವಕನಂತೆ ನಿನ್ನ ಅಣತಿಗಾಗಿ ಕಾದಿರುವನು. ನೀನು ಅವನನ್ನು ಕರೆಯಬಹುದು” ಎಂದನು‌.

ಭೀಷ್ಮನ ಮುಖವು ದೇದೀಪ್ಯಮಾನವಾಯಿತು‌. ಅವನು ಕಣ್ಣು ಮುಚ್ಚಿ, ಕೆಲವು ಕ್ಷಣಗಳು ಸುಮ್ಮನಿದ್ದನು‌. ಸ್ವಲ್ಪ ಪ್ರಯತ್ನಿಸಿ ಸಾಯಲು ಇಚ್ಛೆಪಟ್ಟನು. ಜ್ವಾಲೆಯೊಂದು ಅವನ ಶರೀರವನ್ನು ಬಿಟ್ಟು ಅಂತರಿಕ್ಷಕ್ಕೆ ಏರಿದ್ದು ಸುತ್ತಲಿದ್ದವರಿಗೆ ಕಾಣಿಸಿತು.

ದೇವದುಂದುಭಿಗಳು ಮೊಳಗಿದವು. ತಂಪಾದ, ಸುಗಂಧಭರಿತ ಗಾಳಿಯು ಬೀಸಿತು. ಭೂಮಿಯು ಪ್ರಶಾಂತವಾಯಿತು. ಎಲ್ಲರ ಮನಸ್ಸು ಶಾಂತಿಯಿಂದ ತುಂಬಿಹೋಯಿತು‌. ಶರಗಳ (ಬಾಣಗಳ) ಸಮೇತವಾಗಿ ಅವನ ಶರೀರವನ್ನು ಗಂಧದ ಚಿತೆಯ ಮೇಲಿಟ್ಟು, ಯುಧಿಷ್ಠಿರನು, ವಿದುರನೂ ಪುಷ್ಪಗಳಿಂದ ಮುಚ್ಚಿದರು‌. ಯುಯುತ್ಸುವು ಶ್ವೇತಚ್ಛತ್ರವನ್ನು ಹಿಡಿದನು. ಬ್ರಾಹ್ಮಣರು ಸಾಮಗಾನ ಮಾಡುತ್ತಿರಲು, ಧೃತರಾಷ್ಟ್ರನು ಚಿತೆಗೆ ಅಗ್ನಿಸ್ಪರ್ಶ ಮಾಡಿದನು.

ಮಾರನೆಯ ದಿನ ಚಿತಾಭಸ್ಮವನ್ನು ಗಂಗೆಯಲ್ಲಿ ವಿಸರ್ಜಿಸಿದರು.

ಮೇಲೆದ್ದು ಬಂದ ಗಂಗೆಯು

“ಭಾರ್ಗವನನ್ನು ಸೋಲಿಸಿದ ವೀರನಾದ ನನ್ನ ಮಗು ಶಿಖಂಡಿಯಿಂದ ಕೊಲ್ಲಲ್ಪಟ್ಟನು‌. ನನ್ನ ದಯ ಇನ್ನೂ ಒಡೆಯದಿರುವುದರಿಂದ ಅದು ಕಲ್ಲಿನದಾಗಿರಬೇಕು” ಎಂದು ಗೋಳಿಟ್ಟಳು‌.

ಗಂಗೆಯನ್ನು ಕುರಿತು ಕೃಷ್ಣನು: “ತಾಯಿ, ಸಮಾದಾನ ಮಾಡಿಕೋ. ನಿನ್ನ ಮಗನು ವಸುಗಳನ್ನು ಸೇರಿರುವನು‌. ಅವನು ಸಾಮಾನ್ಯ ಮಾನವನಲ್ಲ” ಎಂದು ಸಮಾದಾನ ಮಾಡಿದನು‌.

ಗಂಗೆ ಅದೃಷ್ಯಳಾದಳು. ನದಿಯು ಅನಾದಿಕಾಲದಿಂದಲೂ ಹರಿಯುವಂತೆಯೇ ಹರಿಯಲಾರಂಭಿಸಿತು. ದಯದಲ್ಲಿ ಶೋಕ ಸಂತೋಷಗಳೆರಡೂ ಒಟ್ಟಾಗಿ ಸೇರಿರಲು. ಎಲ್ಲರೂ ಹಸ್ತಿನಾಪುರಕ್ಕೆ ಹಿಂದಿರುಗಿದರು‌.

ಬರಹ: ಗಣೇಶ ಗೋಸಾವಿ (ಸಾಂದರ್ಭಿಕ ಚಿತ್ರ ಬಳಸಲಾಗಿದೆ)

ರಾಜಕೀಯ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

ಷಡ್ಯಂತ್ರ ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ: ಬಿ.ವೈ. ವಿಜಯೇಂದ್ರ

"ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ನಿರಂತರ ಅಪಪ್ರಚಾರದ ಹಿಂದೆ ಯಾರಿದ್ದಾರೆ? ಯಾರ ಷಡ್ಯಂತ್ರ ಇದರ ಹಿಂದಿದೆ ಎಂಬುದು ಬಹಳ ದಿನ ಗುಟ್ಟಾಗಿ ಉಳಿಯಲು ಸಾಧ್ಯವಿಲ್ಲ"; B.Y. Vijayendra

[ccc_my_favorite_select_button post_id="112839"]
2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

2ನೇ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಹಸಿರು ನಿಶಾನೆ ತೋರಿದ ಸಂಸದೆ ಡಾ;ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ: ಬೆಂಗಳೂರು-ದಾವಣಗೆರೆ- ಬೆಳಗಾವಿಗೆ ವಂದೇ ಭಾರತ್ ಎಕ್ಸ್‍ಪ್ರೆಸ್ (Vande Bharat Express) ರೈಲು ಸೇವೆಯಿಂದ ಶಿಕ್ಷಣ, ಆರೋಗ್ಯ ಸೇವೆಯ ಅನುಕೂಲದ ಜೊತೆಗೆ ವ್ಯಾಪಾರ ವಹಿವಾಟು ವೃದ್ದಿಯಾಗಲಿದೆ ಎಂದು ಸಂಸದರಾದ ಡಾ; ಪ್ರಭಾ ಮಲ್ಲಿಕಾರ್ಜುನ್ (Dr.

[ccc_my_favorite_select_button post_id="112408"]
Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

Crime News: ನಡುರಸ್ತೆಯಲ್ಲೇ 2 ಗುಂಪುಗಳ ನಡುವೆ ಮಾರಾಮಾರಿ

ಹಳೆ ದ್ವೇಷದ ಹಿನ್ನೆಲೆ ಎರಡು ಗ್ಯಾಂಗ್‌ಗಳ ನಡುವೆ ಮಾರಾಮಾರಿ ನಡೆದಿದೆ. ದೊಣ್ಣೆ, ಮಾರಕಾಸ್ತ್ರಗಳಿಂದ ಪರಸ್ಪರ ಹೊಡೆ ದಾಡಿಕೊಂಡಿದ್ದಾರೆ. Crime News;

[ccc_my_favorite_select_button post_id="110866"]
ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಹಣಕಾಸು ಸಚಿವರೊಂದಿಗೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಿಸ್ತೃತ ಮಾತುಕತೆ

ದುಬೈ ಪ್ರವಾಸದಲ್ಲಿರುವ ಕೇಂದ್ರದ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ತಮ್ಮ ಪ್ರವಾಸದ ಎರಡನೇ ದಿನವೂ ಇಲ್ಲಿನ ಆಡಳಿತ

[ccc_my_favorite_select_button post_id="110371"]

ಕ್ರೀಡೆ

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಮಂಡ್ಯದ ಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಕೀರ್ತಿ ಪತಾಕೆ ಹಾರಿಸಲಿ: ಡಿ.ಕೆ.ಶಿವಕುಮಾರ್

ಒಡಿಶಾದ ಭುವನೇಶ್ವರದಲ್ಲಿ‌ ಇದೇ ತಿಂಗಳ 10ರಂದು ನಡೆದ ವಿಶ್ವ ಅಥ್ಲೆಟಿಕ್ಸ್ ನ ಕಾಂಟಿನೆಂಟಲ್ ಕೂಟದ ಮಹಿಳೆಯರ ವಿಭಾಗದ 400 ಮೀಟರ್ ಓಟದಲ್ಲಿ ಚಿನ್ನದ ಪದಕ ಗಳಿಸಿದ ರಾಜ್ಯಕ್ಕೆ ಕೀರ್ತಿ ತಂದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ

[ccc_my_favorite_select_button post_id="112580"]
ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ದೊಡ್ಡಬಳ್ಳಾಪುರ: ರೈಲ್ವೇ ಸ್ಟೇಷನ್ ಬಳಿ ನಡೆದಿದ್ದು ಕೊಲೆ..! ಪ್ರಕರಣ ದಾಖಲು

ಮಂಗಳವಾರ ಬೆಳಗ್ಗೆ ವ್ಯಕ್ತಿಯೋರ್ವನ ಮೃತ ದೇಹ ನಗರದ ಹೊರವಲಯದಲ್ಲಿರುವ ರೈಲ್ವೇ ನಿಲ್ದಾಣದ ಬಳಿ ಪತ್ತೆಯಾಗಿದ್ದು, ಹತ್ಯೆ (Murder) ನಡೆದಿರುವ ಕುರಿತು ಸಿಸಿ ಟಿವಿಯಲ್ಲಿ ದೃಶ್ಯ ಸೆರೆ

[ccc_my_favorite_select_button post_id="112854"]
ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ದೊಡ್ಡಬಳ್ಳಾಪುರ: ಮಳೆಗೆ ಟ್ರಾಕ್ಟರ್ ಕಾಣದೆ ಡಿಕ್ಕಿ.. ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮಳೆಯ ವೇಳೆ ವಾಹನ ಸವಾರರು ಎಷ್ಟು ಮುಂಜಾಗ್ರತೆ ಸಾಲದು. ಏಕೆಂದರೆ ನಿನ್ನೆ ಸಂಜೆ ಸುರಿದ ಭಾರಿ ಮಳೆಯ ಕಾರಣ ರಸ್ತೆ ಬದಿಯಲ್ಲಿ ಕೆಟ್ಟು ನಿಂತಿದ್ದ ಟ್ರಾಕ್ಟರ್ ಕಾಣದೆ Accident

[ccc_my_favorite_select_button post_id="112435"]

ಆರೋಗ್ಯ

ಸಿನಿಮಾ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಗುಡ್ಮಾರ್ನಿಂಗ್ ನ್ಯೂಸ್: ಇಂದು ಚುನಾವಣೆ ಆಯೋಗ ಸುದ್ದಿಗೋಷ್ಠಿ

ಕಾಂಗ್ರೆಸ್ (Congress) ಮಾಡಿರುವ ಓಟ್ ಚೋರಿ ಆರೋಪ ದಿನೇದಿನೇ ತೀವ್ರ ಸ್ವರೂಪ ಪಡೆಯುತ್ತಿದ್ದು, ಚುನಾವಣೆ ಆಯೋಗ (Election Commission) ಹಾಗೂ ಕೇಂದ್ರ ಸರ್ಕಾರದ (Central Government) ವಿರುದ್ಧ ಅನುಮಾನ ಹೆಚ್ಚಿಸುವಂತೆ ಮಾಡುತ್ತಿದೆ‌.

[ccc_my_favorite_select_button post_id="112714"]
error: Content is protected !!